HomeUncategorizedಅಣುವೆಂಬ ಅಣು

ಅಣುವೆಂಬ ಅಣು

- Advertisement -
- Advertisement -

ಬೆರಳುಗಳು ಹಾಗೆ ಕೆಳಗೆ ಬೀಳುತ್ತಲಿದ್ದವು. ತೋಡುವವನಿಗೆ ಅರಿವೆ ಇರಲಿಲ್ಲ. ರಕ್ತ ಮಣ್ಣಿನಲ್ಲಿ ಮಣ್ಣಾಗಿ ಹೋಗಹತ್ತಿತ್ತು. ಮಣ್ಣಿನ ಬಣ್ಣದಿಂದಲೋ, ರಕ್ತದ ಬಣ್ಣದಿಂದಲೋ ಎರಡು ಒಂದೇ ಆಗಿದ್ದವು.
ಕೆಳಗೆ ಬಿದ್ದ ಆಕೃತಿ ಉದ್ದನೆಯ ಡೊಣ್ಣೆ ಹುಳುವೋ ಎಂದು ತೆಗೆÉದುಕೊಳ್ಳಲು ಹೋz.À ತನಗೆ ಬೆರಳೆ ಇರಲಿಲ್ಲ. ಒಂದು ಕತ್ತಿ ಇಲ್ಲ, ಮೊನಚಾದ ಯಾವ ಆಕೃತಿ ಇಲ್ಲ. ತನ್ನ ಬೆರಳು ಕೆಳಗೆ ಬಿದ್ದಿದೆ. ಅದೆ, ಅದು ಕೆಳಗೆ ಬಿದ್ದಾಗಲೂ ಗೊತ್ತಾಗಲಿಲ್ಲ.
ಅವನಿಗೆ ಭಯವಾಯಿತು, ಆತ ಕೇಳಿದ್ದ, ಇಲ್ಲಿ ಅಗಿಯಲು ಹೋದರೆ ಬೆರಳುಗಳು ತಿಳಿಯದ ಹಾಗೆ ಕೆಳಗೆ ಬೀಳುತ್ತವೆ ಎಂದು, ಇದು ನಿಜವಾಗಿದೆ. ನೋವಿಲ್ಲದೆ ಅದು ಭಾವವಿಲ್ಲದೆ, ಸ್ಪರ್ಶವಿಲ್ಲದೆ ಬೆರಳುಗಳು ಕೆಳಗೆ ಬಿದ್ದಿದ್ದವು. ಚಾಕು ಚೂರಿ ರಿಕಾಪುಗಳು ಹಾಗೆ ಶೂನ್ಯದಲ್ಲಿ ಪಳಪಳ ಹೊಳೆದಂತಾಯಿತು.
ಆ ಗವಿ ಗಂವೆನ್ನುತ್ತಿತ್ತು, ಬಾವಲಿಗಳು ತಲೆಕೆಳಗಾಗಿ ಜೋತು ಬಿದ್ದು ಮಲಗಿದ್ದವು, ಅಗಿಯುವಿಕೆ ನಿಲ್ಲಿಸಲೋ ಅಥವಾ ಏನು ಮಾಡುವುದು? ಬೆರಳು ಕಳೆದುಕೊಂಡ ಮೇಲೆ ಅಗೆಯುವುದೇತಕ್ಕೆ? ಇನ್ನೂ ಸ್ವಲ್ಪವಿದ್ದರೆ ಅಂಗೈ, ಕೈ, ತಲೆ, ಕಾಲು ಕಾಲ್ಬೆರಳು ಇಡೀ ಸಮಸ್ತ ದೇಹವೇ ಇಲ್ಲವಾಗಬಹುದೇನೋ ಹಾಗೆಯೇ ಆ ಗವಿಯಿಂದ ಹೊರಬಂದ.
ಕಣ್ಣಿಗೆ ಕಾಣದ ಆ ಅಮೂರ್ತ ಯಾವುದು?
ಬಯಲು ಬಾಗಿಲೊಳಗೆ ನಿಂತ ಯಾವದೋ ರಾಕ್ಷಸವೋ, ದೆವ್ವವೋ, ಭೂತವೋ ಕರಾಳು ರಾತ್ರಿಯೇ ಮೂರ್ತತೆ ಹೊಂದಿ ತÀನ್ನ ಬೆರಳು ನುಂಗಿತೋ. ಇದು ಏನು? ಯಾವ ಮಾಯೆ, ಯಾವ ಪವಾಡ, ಯಾವ ಕಾಲನ ಕಾರ್ಕೂಟ ದರ್ಶನ.
ತನ್ನ ಲುಂಗಿಯ ಚುಂಗನ್ನು ಕೈಗೆ ಕಟ್ಟಿದ. ಹೊರಬಂದು ಬಯಲೊಳಗೆ ನಿಂತುಕೊಂಡ.
ಅದಮ್ಯ ಬಯಲು, ಘನದ್ರವ ಅನಿಲಗಳ ಆಳದಲ್ಲಿ ಇನ್ನೂ ಏನೋ ಇದೇ ಅನ್ನಿಸಿತು. ಬೆಟ್ಟಗಳು ದೊಡ್ಡವೋ, ಚಿಕ್ಕವೋ ಬೃಹದಾಕಾರವಾಗಿ ಸಾಲುಸಾಲಾಗಿ ಮಲಗಿಕೊಂಡಿದ್ದವು. ಅವನ್ನು ವ್ಯಾಖ್ಯಾನಿಸಲು ಅವನಲ್ಲಿ ಏನು ಮಾಪನಗಳಿರಲಿಲ್ಲ. ದೊಡ್ಡವು ಎಂದರೆ ಹೇಗೆ ದೊಡ್ಡವು, ಆಕಾರದಲ್ಲೋ? ಕೃತಿಯಲ್ಲೋ? ಪರಿಣಾಮ ಸೃವಿಸುವ ರೀತಿಯಲ್ಲೋ ಎಲ್ಲವನ್ನು ಬೆರಳುಗಳ ಕಳೆದುಕೊಂಡ ಕ್ರಮದಿಂದಲೇ ನೋಡಹತ್ತಿದ. ಈ ಬೆಟ್ಟಗಳು ದಟ್ಟ ಗಾಳಿ ಕಣ್ಣಿಗೆ ಕಾಣುವ ಅನಿಲಗಳಿಂದ ಹಾಗೆ ಕಾಣುತ್ತಿದ್ದವು.
ಮನೆಗೆ ಬಂದ, ಅವನ ಬೆರಳಿಲ್ಲದ ಕೈಗಳ ನೋಡಿ ಹೆಂಡತಿ ಎದೆ ಒಡೆದುಕೊಂಡಳು. ಅಲ್ಲಿಯೇ ಇರುವ ವೈದ್ಯರಲ್ಲಿ ಕರೆದುಕೊಂಡು ಹೋದಳು. ವೈದ್ಯರು ಹೇಳಿದರು, ಇದು ಚಿಗುರಲಾರದ್ದು. ಆಕೆ ಕೇಳಿದಳು ಎರಡು ಬೆರಳುಗಳು ಇಲ್ಲದೆ ಇರಬಹುದೇ?
ಅದು ನಿನ್ನ ಕರ್ಮ, ಇಲ್ಲಿ ಆ ತೋಡುವ ಗಣಿ ಬಂದ ಮೇಲೆ ಈ ಮಣ್ಣಿನಲ್ಲಿ ರೆಸಿಡೂಯಲ್ ಸೇರಿಕೊಂಡಿದೆ. ಅದು ಗೊತ್ತಾಗದ ಹಾಗೆ, ಈ ಊರಲ್ಲಿ ತೋಡುವದೇ ಅಪಾಯ. ಇನ್ನು ಸ್ವಲ್ಪ ದಿನ? ಇಲ್ಲಿಯ ಧೂಳಿನ ಕಣವೇ ಮನುಷ್ಯನನ್ನು ಕತ್ತು ಹಿಸುಕಿ ಕೊಲ್ಲುತ್ತದೆ.
ಹಾಗಾದರೆ ನಾನು ದಿನನಿತ್ಯ ಮಾಡುವ ವ್ಯವಸಾಯ?
ಅದು ಬಿಡಬೇಕಾಗಿ ಬರಬಹುದು
ಈ ಪ್ರಶ್ನೆ ನನ್ನ ಡಾಕ್ಟರ್ ಪ್ರೊಫೇಶನ್‍ಗೆ ಸಂಬಂಧಿಸಿದ್ದು ಅಲ್ಲ, ಇನ್ನೂ ಸ್ವಲ್ಪ ದಿನ, ಈ ಊರಲ್ಲಿ ನನ್ನಂಥವರು ಇರಲಿಕ್ಕೆ ಇಲ್ಲ. ಯಾಕೆಂದರೆ ನಮಗೆ ಆರಾಮವಾಗಿ ಸಾಯಲಿಕ್ಕೆ ಅನೇಕ ಸ್ಥಳಗಳಿವೆ, ಈ ಊರೇ ಬೇಕಾಗಿಲ್ಲ. ಇದನ್ನು ಕಂಡು ಹಿಡಿದವರೇ ಇದರಿಂದಲೇ ಸತ್ತು ಹೋಗಿದ್ದಾರೆ. ನಿಮ್ಮಂಥವರ ಪಾಡೇನು? ಇನ್ನೂ ಸ್ವಲ್ಪ ದಿನ ಊರಲ್ಲಿರುವ ನೀರು, ಗಾಳಿ ಎಲ್ಲವೂ ನಿಮ್ಮನ್ನು ಕೊಲ್ಲುವ ಶೂಲಗಳಾಗುತ್ತವೆ.
ತೋಡದೆ ಊಳದೆ ಉತ್ತದೆ ಬಿತ್ತದೆ ಬದುಕಲು ಸಾಧ್ಯವಿರಲಿಲ್ಲ. ತೋಡಿದರೆ ಸಾವು ಎಂಬುದು ಮತ್ತೆ ಮಾರ್ಧನಿಸುತ್ತದೆ. ಕೈಬೆರಳು ಕಳೆದುಕೊಂಡ ಸ್ಥಿತಿ ನೋಡಿ ಹೆಂಡತಿ ರೊಯ್ಯನೆ ಆಳಹತ್ತಿದಳು. ಮೇಳೆ ಹಿಡಿಯುವುದು ಹೇಗೆ? ಬಿತ್ತುವುದು ಹೇಗೆ? ಬೆಳೆ ಬೆಳೆಯುವುದು ಹೇಗೆ? ಇದು ಒಂದು ಪ್ರಶ್ನೆ.
ಅಲ್ಲಿ ತೋಡಲು ನಿನಗೇನು ಅ,,,,,,,,.ಸಿತ್ತು. ನೀನು ಎರಡು ದಿನದಿಂದ ಗುದ್ದಲಿ, ಸಲಿಕೆ ಹಿಡಿದುಕೊಂಡು ಗವಿಯಲ್ಲಿ ಅಗಿಯಲು ಹೋದಾಗಲೆ ಅನ್ನುಕೊಂಡೆ ಈಗ ಅನುಭವಿಸು ಎಂದು ಬಿಕ್ಕಿಬಿಕ್ಕಿ ಅಳಹತ್ತಿದಳು.
ಅದರ ಮಣ್ಣು ಮಾರಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ನಾನು ಹಾಗೆ ತೋಡಿ ದುಡ್ಡು ಮಾಡಿಕೊಳ್ಳಲು ಹೋಗಿ ಬೆರಳುಗಳ ಕಳೆದುಕೊಂಡೆ. ಬಯ್ಯಬೇಡ, ಬಯ್ಯಲು ಇದು ಸಮಯವಲ್ಲ. ನನ್ನ ಅಂಗವೈಕಲ್ಯದ ನೋವು ನನ್ನನ್ನು ಬಿಡಬೇಕಲ್ಲ. ಗಾಢವಾಗಿ ಕಾಡುತ್ತದೆ. ಅದರಲ್ಲಿ ನಿನ್ನ ಇರಿತ.
ಈ ಊರು ಮನುಷ್ಯರು ವಾಸಿಸಲಿಕ್ಕೆ ಅಲ್ಲ ಕ್ರಿಮಿಕೀಟ, ಪಕ್ಷಿ, ಸರೀಸೃಪಗಳು ವಾಸಿಸಲಿಕ್ಕೂ ಅಯೋಗ್ಯವಾಗಿರುವಂತಹುದು. ಈಗಾಗಲೇ ಈ ಊರಲ್ಲಿ ಅಂತರ್ಗಾಮಿಯಾಗಿ ವಿಷದ ಹೊನಲು ಹರಿಯುತ್ತಿದೆ. ಇನ್ನು ಸ್ವಲ್ಪ ದಿನ, ಅನೇಕರು ಉಸಿರಾಡುವ ಪುಪ್ಪಸ ಕಳೆದುಕೊಂಡಿದ್ದಾರೆ. ಅವರಿಗೆ ರೋಗ ತಗುಲಿಸಿಕೊಂಡಿದ್ದಾರೆ. ಕುಂಡೆಗೆ ಕ್ಯಾನ್ಸರ್ ಹಚ್ಚಿಕೊಂಡಿದ್ದಾರೆ. ಈಗ ನಿನ್ನ ಎರಡು ಬೆರಳುಗಳು ಉದರಿ ಬಿದ್ದುದು ಆಶ್ಚರ್ಯವಿಲ್ಲ. ಇನ್ನೂ ಸ್ವಲ್ಪ ದಿನವಾದರೆ ರುಂಡಮುಂಡಗಳು ಉದುರಿ ಬೀಳಬಹುದು
2
ಬೆರಳುಗಳ ಗಾಯದ ಜಾಗಕ್ಕೆ ಬ್ಯಾಕ್ಟೀರಿಯಗಳೂ ಬಂದಿದ್ದವು. ಸಮೃದ್ಧ ಭೂಮಿಯ ತಿನ್ನಲು.
ಇಂದು ನೋವು ಕೊಂಚ ಹೆಚ್ಚಾಯಿತೋ ಏನೋ? ಚೀರಹತ್ತಿದ. ಹೆಂಡತಿ ನಿನ್ನೆ ಡಾಕ್ಟರ್ ಕೊಟ್ಟ ನೋವು ನಿವಾರಕವನ್ನು ನುಂಗಿಸಿದಳು, ಹಾಗೆ ಮಲಗಿಕೊಂಡ.
ಪರಿಸರ ಹೋರಾಟಗಾರರಾದ ಮಾನಯ್ಯ ಬಂದಿದ್ದಾರೆ. ಯುರೋನಿಯಂ ಅಣು ಯೋಜನೆಗೆ ಧಿಕ್ಕಾರ ಎಂದು ಕೂಗುತ್ತಿದ್ದಾರೆ. ಅವನಿಗೆ ಹಿಂಸೆಯಾಗುತ್ತಿದೆ. ಇಪ್ಪತ್ತು ವರ್ಷದಿಂದ ಅವರು ಕೂಗಿದ ಕೂಗಿನ ಸ್ವರ ಸ್ವಲ್ಪವೂ ಬದಲಾಗಿಲ್ಲ.
ಸ್ವರ ತಾಳ ಲಯ ಎಲ್ಲವೂ ಹಾಗೆಯೇ ಇದೆ. ಅವರ ಜೊತೆÀ ಹತ್ತು ಜನರೂ ಬಂದಿದ್ದಾರೆ. ಇಪ್ಪತ್ತು ವರ್ಷದಿಂದ ಇದ್ದ ಬಡಕಲು ದೇಹ ಕೋಲು ಮುಖದ ಮಾನಯ್ಯನ ಮುಖ ದೇಹ ಈಗ ಬದಲಾಗಿದೆ. ಮುಖದ ಮೇಲ್ಪದರು ಎಣ್ಣೆ ತುಂಬಿಕೊಂಡಿದೆ
ಬಡಕಲು ದೇಹವಿದ್ದದ್ದು ಮೈ ಕೊಬ್ಬಿನಿಂದ ಆವೃತವಾಗಿದೆÉ. ಧ್ವನಿಯಲ್ಲಿ ಆತ್ಮಸ್ಥೈರ್ಯ ಇದೆ. ನಾವು ಈ ಯೋಜನೆ ಊರಿಗೆ ಬಂದಾಗಲೇ ಪ್ರತಿಭಟಿಸಿದೆವು. ಅದನ್ನು ಮೀರಿ ಸರ್ಕಾರ ಈ ಕಸಾಯಿಖಾನೆಯನ್ನು ಇಲ್ಲಿ ಸ್ಥಾಪಿಸಿತು ಎಂದರು ಮಾನಯ್ಯ. ಕಸಾಯಿ ಖಾನೆಯ ಫಲಾನುಭವಿಗಳಲ್ಲಿ ಇವರು ಒಬ್ಬರು ಎಂದು ಅವನಿಗೂ ತಿಳಿದಿತ್ತು. ಅವನಿಗೇಕೆ, ಜಗತ್ತಿಗೂ ತಿಳಿದಿತ್ತು.
ಮಾನಯ್ಯನ ಗುಡಿಸಲು ಮನೆ ಇಂದು ಮೂರು ಅಂತಸ್ತಿನ ಕಟ್ಟಡವಾಗಿದ್ದು ಹಾಗೆಯೇ ಅಲ್ಲವೇ?
ನಿಮಗೆ ಪರಿಹಾರ ಕೊಡಿಸುತ್ತೇವೆ ಎಂದರು ಮಾನಯ್ಯ.
ಯಪ್ಪಾ ಈವತ್ತೋ ಈ ಗತಿ ಇದೆ, ನಾಳೆ ನಾವು ಹೆಂಗ್ ತಿನ್ನಾನು? ಹೆಂಗ್ ಊಳಾನು? ಹೆಂಗಾ…….? ಅಂದಳು ಬೆರಳು ಕಳೆದುಕೊಂಡವನ ಹೆಂಡತಿ. ಈ ಬೆವರ್ಸಿ ಸೂ ಮಗನಿಗೆ ಹೇಳಿದೆ. ಇದ್ದುದರಲ್ಲಿ ತಿನ್ನೋನಾ ಉಣ್ಣೋನ ಬದುಕೋಣ ಇಲ್ಲಾದ ಉಸಾಬರಿ ನಮಗ್ಯಾಕೆ ಎಂದು ಹೇಳಿದರೂ ಕೇಳಬೇಕಲ್ಲ?
ಮಾನಯ್ಯನ ಮುಖದಲ್ಲಿ ಮಿಂಚೊಂದು ಹೊಳೆಯಿತು. ಅವನಿಗೆ ಇದು ವ್ಯಾಪಾರ ಮಾತ್ರ, ಹೋರಾಟ ದಲ್ಲಾಳಿಕರಣಗೊಂಡಿದ್ದು ಆತನ ಮುಖ ಪ್ರಕಟಿಸಿತು.
ಆ ಕಂಪನಿ ಎಂ.ಡಿಯ ಜೊತೆ ಮಾತಾಡುತ್ತೇನೆ. ನೀವು ಯಾವುದೇ ವರ್ತಮಾನ ಪತ್ರಿಕೆ, ಟಿ.ವಿ. ಮುಂದೆ ಹೋಗಬೇಡಿ, ಅಲ್ಲಿಗೆ ಹೋದರೆ ಇದು ಬಗೆಹರಿಯುವ ವಿಷಯವಲ್ಲ, ಆಮೇಲೆ ಕೋರ್ಟ್ ಕವಡೆ ಎಂದು ವ್ಯರ್ಥ ಕಾಲಹರಣ. ಸುಮಾರು 20-25 ವರ್ಷ ನಡೆಯುತ್ತದೆ. ಇಷ್ಟರಲ್ಲಿ ನೀವೇ ಇಲ್ಲವಾಗಬಹುದು.
ಪಕ್ಕದ ಮನೆಯ ಶಿಕ್ಷಕನೊಬ್ಬ ಬಂದು ನೋಡಿ ಮುಂದೊಂದು ದಿನ ನಾವೆಲ್ಲ ಇಲ್ಲವಾಗುತ್ತೇವೆ. ಕಣ್ಣಿಗೆ ಕಾಣದ್ದು ನಮ್ಮ ಅಂಗಗಳನ್ನು ಕತ್ತರಿಸುತ್ತದೆ ಎಂದರೆ ಅದು ಇರಬಹುದೇ? ಎಂದು ಗುನುಗಿದ. ಜಪಾನಿನ ಹಿರೋಶಿಮಾ ನಾಗಾಸಾಕಿ ನಾಶವಾದದ್ದು ಇದರಿಂದಲೇ, ಅಲ್ಲಿ ಏನು ಉತ್ಪತ್ತಿಯಿಲ್ಲ, ಬಿತ್ತುತ್ತಿಲ್ಲ, ಬೆಳೆಯುತ್ತಿಲ್ಲ, ಅಂಗವೈಕಲ್ಯ, ರೋಗ ರುಜಿನ, ಇನ್ನೂ ಇದೆ ಎಂದು ಹೇಳಿದ.
ಎಲ್ಲ ಹೇಳಿದ ಸಂಗತಿಗಳು ಅವನ ಮನಸ್ಸಿನಲ್ಲಿ ಬಿತ್ತಿ ಬೆಳೆಯಹತ್ತಿದವು. ಹೆಂಡತಿ ಮೊದಲ ಗುರು, ಅವಳ ಮಾತು ಕೇಳಿದರೆ ಇದು ಆಗುತ್ತಿರಲಿಲ್ಲವೇನೋ?
ದೊಡ್ಡ ತಪ್ಪು ಮೂಡಿದೆ. ಇದು ಅಲ್ಲದೆ ನನ್ನ ಅಂಗಗಳನ್ನು ಮೂತ್ರಕೋಶವನ್ನು ಹೃದಯವನ್ನು ಒಡೆದು ಹಾಕಬಹುದು ಎಂದು ಹಾಸಿಗೆಗೆ ಉರುಳಿದ, ನಿದ್ರೆ ಎಂಬುದು ಮರೀಚಿಕೆಯಾಗಿತ್ತು.
ಎದ್ದು ಕುಳಿತ, ನೀರು ಕುಡಿದ, ಅಡ್ಡಾಡಿದ, ಬೋಳ ಕೈ ಕಳೆ ಕಳೆದುಕೊಂಡಿತ್ತು. ಮಧ್ಯರಾತ್ರಿಯಾದರೂ ನಿದ್ರೆ ಇಲ್ಲ.
ಡಾಕ್ಟರ್ ಮತ್ತೆ ಹೇಳಿದ್ದರು, ಇದು ಏಳು ತಲೆಮಾರು ಆದರೂ ಮೆಲ್ಲಗೆ ಬಿಡದೆ ಕೊಲ್ಲುವಂತಹುದು. ಆತನಿಗೆ ತಾನು ಮಾಡಿದ ಸಣ್ಣ ತಪ್ಪು ಹೀಗೆ ತಲೆಮಾರನ್ನು ನುಂಗಿ ಹಾಕಬಹುದು ಎಂದು ಅಂದುಕೊಂಡಿರಲಿಲ್ಲ. ನಿದ್ರೆ ಎಂಬುದು ಬಂದುಹೋಗುವ ಜೋಕಾಲಿ ಆಗಿತ್ತು. ಆದರೆ ಮುಂಜಾನೆ ಕೋಳಿ ಕೂಗಿದಂತೆಲ್ಲ ತಣ್ಣನೆಯ ಗಾಳಿ ಜೊಂಪನ್ನು ಹೆಚ್ಚಿಸಲು ಸಹಾಯ ಮಾಡಿತ್ತು. ಕಂಗಳು ಮುಚ್ಚಿದ. ನಿದ್ರೆ ಎಂಬುದು ದಟ್ಟವಾಗುತ್ತ ಹೋಗಹತ್ತಿತ್ತು. ದಟ್ಟತೆಯ ನಿದ್ರೆಯ ಮಧ್ಯೆ ಇನ್ನೂ ಅದರ ಧ್ಯಾನದಲ್ಲೇ ಇತ್ತೇನೋ ಮದ. ಆತನಿಗೆ ಒಂದು ಶೂನ್ಯವೇ ಭಯಾನಕವಾಗಿ ಕಂಡಿತ್ತು. ಅದು ಕನಸೋ, ಭಾವನೆಯೋ ತಿಳಿಯದಾಯಿತು.
ಸಣ್ಣನೆ ಅಣುವೊಂದು ರಭಸವಾಗಿ ಮುನ್ನುಗ್ಗುತ್ತ ಇಲ್ಲಿರುವ ಕಟ್ಟಡಗಳನ್ನು ಒಡೆದು ಹಾಕಿತು. ನದಿಕೊಳ್ಳಗಳನ್ನು ಆಪೋಷನ ತೆಗೆದುಕೊಂಡಿತು. ಸಕಲ ಜೀವರಾಶಿಗಳನ್ನು ನುಂಗುತ್ತ ನುಂಗುತ್ತ ತನ್ನ ಮನೆಯ ಬಾಗಿಲಿಗೆ ಬಂದಿತ್ತು. ತನ್ನ ಮನೆಯೇ ಅದರ ಬಾಯಲ್ಲಿ ಮನೆಯೊಳಗೆ ತಾನು ಎಂಬ ಭಾವನೆ ದಟ್ಟವಾಯಿತು. ಇದು ನಿಜವೋ, ಭ್ರಮೆಯೋ ಅರಿಯದಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...