Homeಅಂಕಣಗಳುಭಾರತದಲ್ಲಿರುವ ಕೃಷಿಕರೆಷ್ಟು....?

ಭಾರತದಲ್ಲಿರುವ ಕೃಷಿಕರೆಷ್ಟು….?

- Advertisement -
- Advertisement -

ಅಂದಹಾಗೆ ಭಾರತದಲ್ಲಿ ಒಟ್ಟು ರೈತರ ಸಂಖ್ಯೆ ಎಷ್ಟು? ಇದು ಬರೀ ಅಂಕಿಅಂಶಗಳ ಪ್ರಶ್ನೆಯಲ್ಲ. ಇದು ರಾಜಕೀಯ ಮಹತ್ವ ಹಾಗೂ ನೀತಗಳ ಪ್ರಶ್ನೆಯಾಗಿದೆ. ನಾವೆಲ್ಲರೂ ಭಾರತ ದೇಶ ಒಂದು ಕೃಷಿಯಾಧಾರಿತ ಆರ್ಥಿಕತೆ, ಇಲ್ಲಿಯ ಬಹುತೇಕ ಜನರು ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ ಎಂದು ಕೇಳುತ್ತಲೇ ಬೆಳೆದಿದ್ದೀವಿ. ಪರಿಸ್ಥಿತಿ ಇನ್ನೂ ಹಾಗೆ ಇದೆಯಾ? ಅಥವಾ ರೈತರ ಸಂಖ್ಯೆ ಗಣನೀಯವಾಗಿ ಒಮ್ಮೆಲೇ ಇಳಿದಿದೆಯಾ? ಹಾಗಾಗಿ ಅದರಿಂದ ಅವರೆಲ್ಲರನ್ನೂ ಅತೀ ಕಡಿಮೆ ರಾಜಕೀಯ ಪ್ರಾಮುಖ್ಯತೆ ಮತ್ತು ನೀತಿಗಳಿಗೆ ಒಳಪಟ್ಟ ಗುಂಪನ್ನಾಗಿಸಲಾಗಿದೆಯೆ?
ಈ ಪ್ರಶ್ನೆಯನ್ನು ಇನ್ಫೋಸಿಸ್ ಎನ್ನುವ ಭಾರತದ ಅತಿದೊಡ್ಡ ಸಾಫ್ಟ್‍ವೇರ್ ಕಂಪನಿಯ ಸಂಸ್ಥಾಪಕರಲ್ಲೊಬ್ಬರಾದ ಮೋಹನ್‍ದಾಸ್ ಪೈ ಅವರ ಒಂದು ಪ್ರಚೋದನಕಾರೀ ಹೇಳಿಕೆಯಿಂದ (ಟ್ವೀಟ್) ಉದ್ಭವಿಸಿದ್ದು. ಅವರು ಹೇಳಿದ್ದು “ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ರೈತರು 16% ಮಾತ್ರ. 11ಲಕ್ಷಕೋಟಿಯ ಸಂಪೂರ್ಣ ಸಾಲಮನ್ನಾ, ಉಚಿತ ವಿದ್ಯುತ್, ಉಚಿತ ನೀರು, ಹೆಚ್ಚಿನ ಬೆಲೆ ಕೊಡಲು ಭಾರತಕ್ಕೆ ಸಾಧ್ಯವೇ? (ಚಿಜಿಜಿoಡಿಜ)” ಇಲ್ಲಿ ರೈತರ ಸಂಖ್ಯೆ ಬರೀ ಅಂಕಿಅಂಶ ಅಲ್ಲ ಎನ್ನುವುದು ತುಂಬಾ ಸ್ಪಷ್ಟ. ಅವರ ಇಂಗಿತ ಸ್ಪಷ್ಟ: ರೈತರು ಈ ದೇಶದ ಠಿಚಿmಠಿeಡಿeಜ ಅಲ್ಪಸಂಖ್ಯಾತರು. ಈ ಅಲ್ಪಸಂಖ್ಯಾತರ ಗುಂಪಿಗೆ ಎಲ್ಲಾ ತರಹದ ಪುಕ್ಕಟೆ ಸಹಾಯಗಳನ್ನು ಕೊಡಲು ನಮ್ಮ ದೇಶಕ್ಕೆ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಭಾವನೆಗಳು ಅನೇಕ ಸಲ ವ್ಯಕ್ತವಾಗುತ್ತಲೇ ಇರುತ್ತವೆ.
ಈ ನೈತಿಕ ಅಧಃಪತನ, ರಾಜಿಕೀಯ ವೈರತ್ವ ಮತ್ತು ನಗರದಲ್ಲಿರುವ ಗಣ್ಯರ ಸಾಮಾಜಿಕ ಅನಕ್ಷರತೆಯ ಇಂತಹ ಪ್ರದರ್ಶನದಿಂದ ನನಗೆ ದೊಡ್ಡ ಆಘಾತವೇ ಆಯಿತು. ಆದರೆ ಈಗ ನಾನು ಈ ಪ್ರಮುಖ ಅಂಶಗಳ ಬಗ್ಗೆ ಸದ್ಯಕ್ಕೆ ಚರ್ಚಿಸಲು ಹೋಗುವುದಿಲ್ಲ. ಎಲ್ಲಿಂದಲೋ ಕಲೆಹಾಕಲಾದ 16% ಮಾತ್ರ ರೈತರು ಎನ್ನುವ ಈ ಅಂಕಿಯ ಬಗ್ಗೆ ಮಾತ್ರ ಬರೆಯಲು ನನ್ನನ್ನು ನಾನು ನಿರ್ಬಂಧಿಸುತ್ತಿದ್ದೇನೆ. ಹಾಗಾಗಿ, ನಾನು ಶ್ರೀ ಪೈ ಅವರಿಗೆ ಈ ಅಂಕಿಅಂಶದ ಮೂಲವನ್ನು ಕೇಳಿದೆ, ಅದಕ್ಕೆ ಉತ್ತರ ಕೊಡಲು ಪೈ ಅವರು ಖುಷಿಯಿಂದಲೇ ಒಪ್ಪಿಕೊಂಡರು. ಅವರ ಅಂಕಿಅಂಶ ಕೆಳಗೆ ಬರೆದ ತರ್ಕದಿಂದ …….. ; ‘ಭಾರತದ ಉದ್ಯೋಗಸ್ಥ ಜನಸಂಖ್ಯೆಯ 43% ಜನರು ಮಾತ್ರ ಕೃಷಿ ವಲಯದಲ್ಲಿದ್ದಾರೆ. ಗ್ರಾಮೀಣ ಭಾರತದಲ್ಲಿ ಬರೀ 44% ಜನರು ಕೃಷಿಭೂಮಿಯನ್ನು ಹೊಂದಿದವರಾಗಿದ್ದಾರೆ. ಅದರರ್ಥ ಭಾರತದ ಬರೀ 18.9% ಜನಸಂಖ್ಯೆ ಮಾತ್ರ ಕೃಷಿಯಲ್ಲಿರುವವರು ಮತ್ತು ಕೃಷಿಭೂಮಿಯನ್ನು ಹೊಂದಿದವರು. ಮತ್ತು ಈ ಅಂಕಿಅಂಶಗಳು 2010-11 ಕ್ಕೆ ಸಂಬಂಧಿಸಿರುವುದರಿಂದ ಈಗ ಆ ಸಂಖ್ಯೆ 16% ಗೆ ಬಂದಿಳಿದಿರಬೇಕು.’
ಈ ತರ್ಕ ಹಲವಾರು ದೋಷಗಳಿಂದ ತುಂಬಿದ್ದು ನಾನು ಅವರ ಗಮನಕ್ಕೆ ತಂದೆ. ಮೊದಲನೆಯದಾಗಿ, ಇದರಲ್ಲಿ ಗಣಿತದ ಒಂದು ಸರಳ ದೋಷವಿದೆ, ಅವರು ಕೃಷಿಯಾಧಾರಿತ ಜನಸಂಖ್ಯೆಯ ಅನುಪಾತವನ್ನು ಗ್ರಾಮೀಣ ಭಾಗದ ಭೂಒಡೆತನವುಳ್ಳ ಜನಸಂಖ್ಯೆಯೊಂದಿಗೆ ತಾಳೆಹಾಕುತ್ತಾರೆ, ಇವೆರಡೂ ವಿಭಿನ್ನ ವರ್ಗಗಳು ಎನ್ನುವುದನ್ನು ಅವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇನ್ನೂ ಆಳಕ್ಕೆ ಹೋದರೆ ಅವರ ತರ್ಕ ಮೂಲತಃ ಪರಿಕಲ್ಪನೆಯ ಒಂದು ದೋಷದ ಆಧಾರದ ಮೇಲೆ ನಿಂತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಶ್ರೀ ಪೈ ಅವರ ವ್ಯಾಖ್ಯಾನದ ಪ್ರಕಾರ ಕೃಷಿಕರೆಂದರೆ, ತಾವು ಊಳುತ್ತಿರುವ ಭೂಮಿಯ ಒಡೆತನವಿದ್ದವರು ಮಾತ್ರ. ಊಳುವವನು/ಳು ತಾನು ಊಳುತ್ತಿರುವ ಭೂಮಿಯ ಒಡೆತನವನ್ನು ಹೊಂದಿರಬಹುದು ಅಥವಾ ಹೊಂದದೇ ಇರಬಹುದು ಎನ್ನುವ ಕಾಮನ್‍ಸೆನ್ಸ್ ನ ವಿರುದ್ಧ. ಇದು ವ್ಯಾಖ್ಯಾನ ‘ಕೃಷಿಕ’ನ ಭಾರತ ಸರಕಾರದ ಅಧಿಕೃತ ವ್ಯಾಖ್ಯಾನದ ವಿರುದ್ಧವೂ ಇದೆ. ಕೃಷಿಕರ ರಾಷ್ಟ್ರೀಯ ನೀತಿ, 2007 ರ ಪ್ರಕಾರ, ಕೃಷಿಕನ/ಳ ಎಂದರೆ, ‘ಬೆಳೆಗಳನ್ನು ಬೆಳೆಯುವ ಆರ್ಥಿಕ ಮತ್ತು/ಅಥವಾ ಜೀವನಾಧಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಪ್ರಾಥಮಿಕ ಕೃಷಿ ಸರಕುಗಳನ್ನು ಉತ್ಪಾದಿಸುವ ಹಾಗೂ ಎಲ್ಲಾ ಕೃಷಿ ಕೆಲಸದ ಚಿgಡಿiಛಿuಟಣuಡಿಚಿಟ oಠಿeಡಿಚಿಣioಟಿಚಿಟ hoಟಜeಡಿs. ಊಳುವವರು, ಕೃಷಿಕಾರ್ಮಿಕರು, ಪಾಲುದಾರರು, ಗೇಣಿದಾರು……” (ಪುಟ 4). ಪ್ಲ್ಯಾಂಟೇಷನ್ ಕಾರ್ಮಿಕರು, ಅರಣ್ಯದ ಉತ್ಪಾದನೆಯನ್ನು ಸಂಗ್ರಹಿಸುವವರು ಮತ್ತು ಅರಣ್ಯಕೃಷಿಯಲ್ಲಿ ತೊಡಗಿಸಿಕೊಂಡವರನ್ನೂ ಈ ವ್ಯಾಖ್ಯಾನ ಒಳಗೊಳ್ಳುತ್ತದೆ ಎಂದು ರಾಷ್ಟ್ರೀಯ ಕೃಷಿ ನೀತಿ ಸ್ಪಷ್ಟಪಡಿಸುತ್ತದೆ.
ನಿಜವಾದ ಸಮಸ್ಯೆ ಅವರ ಅಂಕಿಅಂಶಗಳ ಆಧಾರದಲ್ಲಿದೆ. ಶ್ರೀಯುತ ಪೈ ಅವರು ಕೃಷಿಕರ ಜನಸಂಖ್ಯೆಯನ್ನು ಅರಿಯಲು ಸಹಜವಾಗಿ ನೋಡಬೇಕಿದ್ದ ದೇಶದ ಎರಡು ವಿಶ್ವಾಸಾರ್ಹ ಮತ್ತು ಅಧಿಕೃತ ಮೂಲಗಳನ್ನು ನೋಡುವ ಗೋಜಿಗೆ ಹೋಗಲಿಲ್ಲ: ಭಾರತದ ಜನಗಣತಿ ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷೆ (ಓSS). ಅದರೊಂದಿಗೆ ಕೃಷಿ ಸೆನ್ಸಸ್ ಕೂಡ ಇದೆ ಆದರೆ ಅದು ಕಾರ್ಯಾತ್ಮಕ ಹಿಡುವಳಿಗಳನ್ನು ಮಾತ್ರ ಪರಿಗಣಿಸಿ, ಆ ಹಿಡುವಳಿಗಳನ್ನು ಊಳುವ ರೈತರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಸೆನ್ಸಸ್ ಕೃಷಿ ಪ್ರಾಥಮಿಕ ಅಥವಾ ಎರಡನೆಯ ಉದ್ಯೋಗವಾಗಿರುವುವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಹಾಗಾಗಿ ಇದನ್ನು ಮಕ್ಕಳು, ವೃದ್ಧರು, ಗೃಹಿಣಿಯರನ್ನು ಬಿಟ್ಟು ಬೇರೆ ಯಾವುದೇ ‘ಆರ್ಥಿಕ ಚಟುವಟಿಕೆ’ಗಳಲ್ಲಿ ತೊಡಗಿಸಿಕೊಂಡ ಒಟ್ಟು ಜನರ ಅನುಪಾತವೆಂದೇ ಪರಿಗಣಿಸಬೇಕಾಗುತ್ತದೆ. ಆದರೆ ಓSS ಹಾಗೆ ಮಾಡುವುದಿಲ್ಲ. ಅದು ಕೃಷಿಯು ಪ್ರಾಥಮಿಕ ಮತ್ತು ಎರಡನೆಯ ಆದಾಯದ ಮೂಲವಾದ, ಊಳುವಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆದುದರಿಂದ ಈ ಮೂಲಗಳಿಂದ ನಮಗೆ ವಿಭಿನ್ನವಾದ ಅಂಕಿಅಂಶಗಳು ಸಿಗುತ್ತವೆ.
2011ರ ಜನಗಣತಿಯ ಪ್ರಕಾರ, ದುಡಿಯುವ ಜನರಲ್ಲಿ 54.6% ಜನರು ಕೃಷಿವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. (ಶ್ರೀಯುತ ಪೈ ಹೇಳಿದಂತೆ 43% ಅಲ್ಲ). ಇದರಲ್ಲಿ ಬಹುತೇಕರು ಅಂದರೆ ಸುಮಾರು 30% ಜನರು ಕೃಷಿ ಕಾರ್ಮಿಕರಾಗಿದ್ದು ಹಾಗೂ ಕೇವಲ 24.6% ಜನರು ಭೂಒಡೆತನವುಳ್ಳವರಾಗಿದ್ದಾರೆ. ಹಾಗಾಗಿ ನಾವು ಭೂಒಡೆತನವುಳ್ಳವರನ್ನು ಮಾತ್ರ ಕೃಷಿಕರು ಎಂದು ಪರಿಗಣಿಸಿ ತೀರಾ ಕಿರಿದಾಗಿ ವ್ಯಾಖ್ಯಾನಿಸಿದರೂ ಭಾರತದ ಜನಸಂಖ್ಯೆಯ ಒಂದನೇ ನಾಲ್ಕು ಭಾಗದಷ್ಟು ಜನ ಕೃಷಿಕರಾಗಿದ್ದಾರೆ. ಕೃಷಿವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪಾಲಿನಲ್ಲಿ ಕೆಲವು ಅಂಶಗಳಷ್ಟು ಕಡಿತವಾಗಿದೆಯೆಂದು ಅಂದುಕೊಂಡರೂ, ಕೃಷಿಕರು ಮತ್ತು ಭೂಒಡೆತನವುಳ್ಳ ಕೃಷಿಕರು ದೇಶದ ಒಟ್ಟಾರೆ ಕಾರ್ಮಿಕರಿಗಿಂತ ಹೆಚ್ಚೇ ಇರುವುದು ಸ್ಪಷ್ಟವಿದೆ.
ಡೇಟಾದ ಇನ್ನೊಂದು ಮೂಲ 2012 ಮತ್ತು 2013 ರಲ್ಲಿ ನಡೆಸಲಾದ ರಾಷ್ಟ್ರೀಯ ಮಾದರಿ ಸಮೀಕ್ಷೆಯ 70ನೇ ಸುತ್ತಿನ ವರದಿ. ಈ ಸಮೀಕ್ಷೆ ಕಾರ್ಮಿಕರ ಸಂಖ್ಯೆ ಮತ್ತು ಜನಸಂಖ್ಯೆಯ ಮೇಲೆ ಒತ್ತು ನೀಡದೆ ಕುಟುಂಬಗಳ ಸಂಖ್ಯೆಗಳ ಮೇಲೆ ಒತ್ತು ನೀಡಿದೆ. ಇದು ಕೃಷಿಕುಟುಂಬವನ್ನು ಈ ರೀತಿಯ ನಿಖರವಾದ ವ್ಯಾಖ್ಯಾನವನ್ನು ಅಳವಡಿಸಿಕೊಂಡಿದೆ. ‘ಕಳೆದ 365 ದಿನಗಳಲ್ಲಿ ಕೃಷಿ ಚಟುವಟಿಕೆಗಳಿಂದ ಕೆಲವು ಉತ್ಪನ್ನಗಳನ್ನು ಪಡೆಯುತ್ತಿರುವ ಒಂದು ಕುಟುಂಬ’. ಹಾಗಾಗಿ ಈ ವ್ಯಾಖ್ಯಾನ, ಜನಗಣತಿಯ ಹಾಗೆ, ಗೇಣಿಕಾರು ಮತ್ತು shಚಿಡಿe-ಛಿಡಿoಠಿಠಿeಡಿs ಅವರುಗಳನ್ನು ಒಳಗೊಂಡಿರುತ್ತದೆ. ಆದರೆ, ಇದು ಕೃಷಿ ದುಡಿತದ ಮೇಲೆ ಅವಲಂಬಿತವಾದ ಎಲ್ಲ ಕುಟುಂಬಗಳನ್ನು, ಕಡಲುತೀರದ ಮೀನುಗಾರಿಕೆಯಿಂದ ಆದಾಯ ಗಳಿಸುತ್ತಿರುವ ಎಲ್ಲಾ ಕುಟುಂಬಗಳನ್ನೂ, ಗ್ರಾಮೀಣ ಕರಕುಶಲಕರ್ಮಿಗಳನ್ನೂ ಮತ್ತು ಕೃಷಿ ಚಟುವಟಿಕೆಗಳಿಂದ ತೀರ ಕಡಿಮೆ ಆದಾಯ ಪಡೆದ ಕುಟುಂಬಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಡುತ್ತದೆ.
ಈ ಸಮೀಕ್ಷೆಯಲ್ಲಿ ಕಂಡುಕೊಂಡ ಅಂಶಗಳನ್ನು ‘Some ಅhಚಿಡಿಚಿಛಿಣeಡಿisಣiಛಿs oಜಿ ಂgಡಿiಛಿuಟಣuಡಿಚಿಟ ಊouseಊoಟಜs iಟಿ Iಟಿಜiಚಿ, 2012-13 (ಓSS ಡಿeಠಿoಡಿಣ ಟಿo. 569)’ ಯಲ್ಲಿ ವರದಿ ಮಾಡಲಾಗಿದೆ. ಈ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಒಟ್ಟು 9.02 ಕೋಟಿ ಕೃಷಿ ಕುಟುಂಬಗಳಿವೆ. ಅಂದರೆ, ಎಲ್ಲಾ ಗ್ರಾಮೀಣ ಕುಟುಂಬಗಳ 55.8% ಹಾಗೂ ದೇಶದ (ಗ್ರಾಮೀಣ ಮತ್ತು ನಗರ ಸೇರಿ) ಎಲ್ಲಾ ಕುಟುಂಬಗಳ 38.1% ಆಗುತ್ತದೆ. ಈ ಸಮೀಕ್ಷೆ ನಗರಪ್ರದೇಶದ ಕುಟುಂಬಗಳನ್ನು ಒಳಗೊಂಡಿರಲಿಲ್ಲ. ಈಗ ನಗರಪ್ರದೇಶಗಳು ತನ್ನ ವ್ಯಾಪ್ತಿಯಲ್ಲಿ ಹಳ್ಳಿಗಳನ್ನೂ ಒಳಗೊಂಡಿದ್ದರಿಂದ ಹಾಗು ಸಣ್ಣ ಮಂಡಿ ನಗರಗಳಿಂದಾಗಿ ಅಲ್ಲಿಯ ಕುಟುಂಬಗಳಲ್ಲಿ ಒಂದು ಸಣ್ಣದಾದರೂ ಗಣನೀಯ ಸಂಖ್ಯೆಯಲ್ಲಿ ಕೃಷಿ ಕುಟುಂಬಗಳಿವೆ. ಒಂದು ವೇಳೆ ಈ ನಗರಪ್ರದೇಶದ (ಇಪ್ಪತ್ತರಲ್ಲಿ ಒಂದರಂತೆ) ಕುಟುಂಬಗಳನ್ನೂ ಓSS ವ್ಯಾಪ್ತಿಗೆ ಸೇರಿಸಿದರೆ, ಒಟ್ಟು ಕುಟುಂಬಗಳ ಕನಿಷ್ಠ 40% ಕುಟುಂಬಗಳು ಕೃಷಿಕುಟುಂಬಗಳಾಗುತ್ತವೆ. ಮತ್ತು ಕೃಷಿಕುಟುಂಬಗಳ ಜನಸಂಖ್ಯೆ ಇತರ ಸೇವಾ ವಲಯ, ಉದ್ಯಮದಂತಹ ಕೃಷಿಯೇತರ ಕುಟುಂಬಗಳಿಗಿಂತ ಹೆಚ್ಚಾಗಿರುವುದು. ಹಾಗಾಗಿ, ಕೃಷಿಕುಟುಂಬಗಳ ಜನಸಂಖ್ಯೆ ಒಟ್ಟಾರೆ ಜನಸಂಖ್ಯೆಯ 45% ಇದೆ. ಈ ಕುಟುಂಬಗಳು ಕೃಷಿ ಆದಾಯದ ಮೇಲೆ ಮಾತ್ರ ಅವಲಂಬಿತವಾಗಿಲ್ಲವೆನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಪಶುಸಂಗೋಪನೆ, ಇತರ ದುಡಿಮೆ, ಸಣ್ಣ ವ್ಯಾಪಾರದ ಆದಾಯ ಈ ಕೃಷಿ ಕುಟುಂಬಗಳ ಆದಾಯದ ಅರ್ಧದಷ್ಟಿರುತ್ತದಾದರೂ ಕೃಷಿಯೇ ಇವರುಗಳ ಆದಾಯದ ಪ್ರಮುಖ ಮೂಲವಾಗಿರುತ್ತದೆ.
ಸಾರಾಂಶದಲ್ಲಿ, ಭಾರತದಲ್ಲಿ 16% ಮಾತ್ರ ಕೃಷಿಕರಿದ್ದಾರೆ ಎಂದು ಸೂಚಿಸುವುದು ಸಂಪೂರ್ಣ ತಪ್ಪು. ನಾವು ಕೃಷಿಯಾಧಾರಿತ ಜನಸಂಖ್ಯೆಯ ವ್ಯಾಖ್ಯಾನವನ್ನು ವಿಶಾಲವಾಗಿ ಮಾಡುತ್ತೇವೆಯೋ ಅಥವಾ ಸಂಕುಚಿತ ದೃಷ್ಟಿಯಲ್ಲಿ ಮಾಡುತೇವೆಯೋ ಆ ಆಧಾರದ ಮೇಲೆ ಭಾರತದಲ್ಲಿ 45% ರಿಂದ 50% ಜನಸಂಖ್ಯೆ ಕೃಷಿಯ ಮೇಲೆ ಅವಲಂಬಿತವಾಗಿವೆ ಎಂದು ಖಚಿತವಾಗಿ ಹೇಳಬಹುದು. ಹಾಗಾಗಿ ಅತ್ಯಂತ ಭಾರಿ ಪ್ರಮಾಣದ ಆರ್ಥಿಕ ಮತ್ತು ಡೆಮಾಗ್ರಾಫಿಕ್ ಪರಿವರ್ತನೆ ಆಗಿದ್ದರೂ ಭಾರತೀಯ ಸಮಾಜ ಕೃಷಿ ಸಮಾಜವೇ ಆಗಿ ಉಳಿದಿದೆ. ಆದರೆ, ನಾವು ಕೃಷಿಯಾಧಾರಿತ ಆರ್ಥಿಕತೆಯಾಗಿ ಉಳಿದಿಲ್ಲ. ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಚಟುವಟಿಕೆಗಳ ಪಾಲು 1950ರಲ್ಲಿ ರಾಷ್ಟ್ರೀಯ ಜಿಡಿಪಿಯ 58%ರಷ್ಟಿತ್ತು, ಈಗ ಅದು 17%ಗೆ ಇಳಿದಿದೆ. ಸಾಮಾಜಿಕವಾಗಿ ಕೃಷಿಸಮಾಜವಾಗಿದ್ದು ಆರ್ಥಿಕತೆ ಕೃಷಿಯೇತರವಾಗಿರುವ ಈ ವೈರುದ್ಧ ನಮ್ಮ ಕಾಲದ ಅತಿದೊಡ್ಡ ರಾಜಕೀಯ ಸವಾಲಾಗಿದೆ.

– ಯೋಗೇಂದ್ರ ಯಾದವ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...