Homeಮುಖಪುಟನಿರುದ್ಯೋಗ ದರ ಶೇ.7.2ಕ್ಕೆ ಏರಿಕೆ: ಮೋದಿಗೆ ಸಂಕಷ್ಟ ತಂದಿಟ್ಟ ಸಿಎಂಇಐ ವರದಿ

ನಿರುದ್ಯೋಗ ದರ ಶೇ.7.2ಕ್ಕೆ ಏರಿಕೆ: ಮೋದಿಗೆ ಸಂಕಷ್ಟ ತಂದಿಟ್ಟ ಸಿಎಂಇಐ ವರದಿ

- Advertisement -

ಭಾರತೀಯ ಆರ್ಥಿಕ ಉಸ್ತುವಾರಿ ಕೇಂದ್ರವು (ಸಿ.ಎಂ.ಐ.ಇ) ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ ಫೆಬ್ರವರಿ 2019ರಲ್ಲಿ ಭಾರತದ ನಿರುದ್ಯೋಗ ದರ ಶೇ.7.2ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 2016ರಿಂದ ಈಚೆಗಿನ ಅತಿ ಹೆಚ್ಚಿನ ನಿರುದ್ಯೋಗ ದರ ಇದಾಗಿದೆ ಎಂದು ನಿನ್ನೆಯಷ್ಟೇ (ಮಾರ್ಚ್ 5, 2019) ಬಿಡುಗಡೆಯಾದ ಸಿಎಂಇಐ ವರದಿಯನ್ನು ರಾಯಿಟರ್ಸ್  ಸುದ್ದಿಸಂಸ್ಥೆ ವಿಶ್ಲೇಷಿಸಿದೆ. 2018ರ ಫೆಬ್ರವರಿಯಲ್ಲಿ ಈ ದರ ಶೇ.5.8ರಷ್ಟಿತ್ತು. ಭಾರತದಾದ್ಯಂತ ನಡೆಸಲಾದ ಲಕ್ಷಾಂತರ ಕುಟುಂಬಗಳ ಸಮೀಕ್ಷೆಯನ್ನು ಈ ವರದಿ ಒಳಗೊಂಡಿದೆ.

- Advertisement -

ಮೇನಲ್ಲಿ ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿರುವ ಪ್ರಧಾನಿ ಮೋದಿಯವರಿಗೆ ಈ ವರದಿ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ವಿರೋಧ ಪಕ್ಷಗಳು ರೈತರಿಗೆ ಸಿಗುತ್ತಿರುವ ಕಡಿಮೆ ಬೆಲೆ ಮತ್ತು ಕುಸಿತಗೊಂಡಿರುವ ಉದ್ಯೋಗ ಸೃಷ್ಟಿಯನ್ನು ತಮ್ಮ ಮುಖ್ಯ ಚುನಾವಣಾ ವಿಷಯಗಳಾಗಿ ಪ್ರಸ್ತಾಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ವರದಿ ನಿರುದ್ಯೋಗ ನಿಯಂತ್ರಣದಲ್ಲಿ ಮೋದಿಯವರ ವೈಫಲ್ಯವನ್ನು ಎತ್ತಿ ತೋಸಿರುತ್ತಿದೆ.

ಈಗಾಗಲೇ ನ್ಯಾಶನಲ್ ಸ್ಯಾಂಪಲ್ ಸರ್ವೇ ಆಫೀಸಸ್ (ಎನ್‌ಎಸ್‌ಎಸ್‌ಒ) ವರದಿಯಲ್ಲಿ, ನಿಯಮಿತ ಕಾರ್ಮಿಕ ವರ್ಗ ಸಮೀಕ್ಷೆಯ ಪ್ರಕಾರ 2017-18ರಲ್ಲಿ ಶೇ.6.1 ತಲುಪಿದ್ದ ನಿರುದ್ಯೋಗ ದರವು ಕಳೆದ 45 ವರ್ಷಗಳ ಇತಿಹಾಸದಲ್ಲಿ ಅತಿಹೆಚ್ಚು ನಿರುದ್ಯೋಗ ದರವಾಗಿದೆ ಎಂದು ಉಲ್ಲೇಖಿಸಿರುವುದಾಗಿ Business Standard ವರದಿ ಮಾಡಿತ್ತು. ತನಗೆ ಲಭ್ಯವಾದ ದಾಖಲೆಪತ್ರಗಳ ಪ್ರಕಾರ, ಉದ್ಯೋಗಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲು ಶುರು ಮಾಡಲಾದ 1972-73ರಿಂದ ಈಚೆಗೆ 2017-18ರ ನಿರುದ್ಯೋಗ ದರವೇ ದಾಖಲೆಯ ಏರಿಕೆಯದ್ದು ಎಂದು ಅದು ತಿಳಿಸಿತ್ತು.

ಎನ್.ಎಸ್.ಎಸ್.ಒ ವರದಿಯಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲೇ ಹೆಚ್ಚು ನಿರುದ್ಯೋಗ ಪ್ರಮಾಣವಿದೆ ಎಂದು Business Standard ಉಲ್ಲೇಖಿಸಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಶೇ.5.3ರಷ್ಟಿದ್ದರೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ಶೇ.7.8 ರಷ್ಟಿದೆ ಎಂಬುದು ವರದಿಯಿಂದ ತಿಳಿದುಬಂದಿದೆ. ಪ್ರಸ್ತುತ 201-18ನೇ ಸಾಲಿನಲ್ಲಿ ನಿರುದ್ಯೋಗ ದರವು ನಗರ ಪ್ರದೇಶದ 15 ರಿಂದ 29 ವರ್ಷ ವಯೋಮಾನದ ಪುರುಷರಲ್ಲಿ ಶೇ.18.7ರಷ್ಟು (2011ರಲ್ಲಿ ಈ ಪ್ರಮಾಣ ಶೇ.8.1ರಷ್ಟಿತ್ತು) ಹಾಗೂ ನಗರವಾಸಿ ಮಹಿಳೆಯರಲ್ಲಿ ಶೇ.27.2ರಷ್ಟು (2011ರಲ್ಲಿ ಈ ಪ್ರಮಾಣ ಶೇ.13.1ರಷ್ಟಿತ್ತು) ಇದೆ ಎಂದು Business Standard ವರದಿ ಮಾಡಿತ್ತು.

ವಿಪರ್ಯಾಸವೆಂದರೆ, ಮೊದಲಿನಿಂದಲೂ ಬಿಜೆಪಿ ನಗರ ಪ್ರದೇಶಗಳಲ್ಲೇ ತನ್ನ ವೋಟ್‌ಬ್ಯಾಂಕ್ ಸಾಮರ್ಥ್ಯವನ್ನು ಬಲವಾಗಿ ನಂಬಿಕೊಂಡು ಬಂದಿದೆ. ಈಗಲೂ ಅದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಹೇಳಿಕೊಳ್ಳುವಂತಹ ಬಲವಿಲ್ಲ. ಹೀಗಿರುವಾಗ ನಗರ ಪ್ರದೇಶಗಳಲ್ಲೇ ನಿರುದ್ಯೋಗ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಚುನಾವಣಾ ದೃಷ್ಟಿಯಿಂದ ಮೋದಿಯವರಿಗೆ ಶುಭ ಸೂಚಕವಂತೂ ಅಲ್ಲ.

ಈ ಹಿಂದೆ ಇದೇ ಸರ್ಕಾರ ಉದ್ಯೋಗಕ್ಕೆ ಸಂಬಂಧಿಸಿದ ವರದಿಗಳನ್ನು ಬಿಡುಗಡೆ ಮಾಡಿದಾಗ ಅವು ಔಟ್-ಆಫ್-ಡೇಟ್ ಆಗಿರುತ್ತಿದ್ದವು ಎಂಬ ಅಪವಾದಗಳು ಕೇಳಿಬರುತ್ತಿದ್ದವು. ಆದರೆ ಚುನಾವಣಾ ಸಿದ್ಧತೆಯ ಈ ವರ್ಷದಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಎನ್.ಎಸ್.ಎಸ್.ಒ ವರದಿಯನ್ನು ಅಧಿಕಾರಿಗಳು ಅಂಕಿಅಂಶಗಳನ್ನು ಪುನರ್‌ಪರಿಶೀಲಿಸಬೇಕು ಎಂಬ ನೆಪ ನೀಡಿ ಬಿಡುಗಡೆಯನ್ನೇ ಮಾಡಲಿಲ್ಲ. ನಿರುದ್ಯೋಗ ಪ್ರಮಾಣ ಈ ಪರಿಯಲ್ಲಿ ಏರಿಕೆಯಾಗಿರುವುದು ಬಹಿರಂಗಗೊಂಡರೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಂದಾಜಿನಿಂದಲೇ ವರದಿಯನ್ನು ಬಿಡುಗಡೆ ಮಾಡದಂತೆ ಸರ್ಕಾರದಿಂದ ತಡೆಹಿಡಿಯಲಾಗಿದೆ ಎಂಬ ಹೇಳಿಕೆಗಳು ಕೇಳಿ ಬಂದ ಬೆನ್ನಲ್ಲೇ Business Standard ಪತ್ರಿಕೆಯು ತನಗೆ ಎನ್.ಎಸ್.ಎಸ್.ಒ ವರದಿ ಅದರ ಸದಸ್ಯರೊಬ್ಬರಿಂದಲೇ ಸೋರಿಕೆಯಾಗಿದೆ ಎಂದು ಅಂಕಿಅಂಶಗಳನ್ನು ಬಹಿರಂಗಗೊಳಿಸಿತ್ತು.

ಆದಾಗ್ಯೂ ಸರ್ಕಾರ ಅದನ್ನು ತಿರಸ್ಕರಿಸಿ ಅವು ಸತ್ಯಕ್ಕೆ ದೂರವಾದ ಸಂಗತಿಗಳು ಎಂದು ಆರೋಪಿಸಿತ್ತೇ ವಿನಾಃ ಯಾವ ಕಾರಣಕ್ಕೆ ಎನ್‌ಎಸ್‌ಎಸ್‌ಒ ವರದಿ ತಡೆಹಿಡಿಯಲಾಗಿದೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿರಲಿಲ್ಲ. ಇದೀಗ ಸಿ.ಎಂ.ಐ.ಇ ವರದಿ ನಿನ್ನೆ ಬಿಡುಗಡೆಗೊಂಡಿದ್ದು ನಿರುದ್ಯೋಗ ದರವನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ತೆರೆದಿಟ್ಟಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...