Homeಕರ್ನಾಟಕಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ...

ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬೂಸಿ ಬಿಟ್ಟ ಸುವರ್ಣ ಟಿವಿ!

- Advertisement -
| ನಾನುಗೌರಿ ಡೆಸ್ಕ್ |
ಕಳೆದ ನಾಲ್ಕೈದು ವರ್ಷಗಳಿಂದ ಮಾಧ್ಯಮಗಳು ಬಿಜೆಪಿ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿರುವುದು ಸರ್ವೇಸಾಮಾನ್ಯವಾಗೊ ಜಗಜ್ಜಾಹೀರಾಗಿರುವ ಸಂಗತಿ. ಅದರಲ್ಲೂ ಕನ್ನಡ ಮಾಧ್ಯಮಗಳಂತೂ ತಮಗೆ ಸರಿಸಾಟಿ ಯಾರು ಇಲ್ಲವೆಂಬಂತೆ ಮೋದಿಯ ಗುಣಗಾನ ಮಾಡುವುದಕ್ಕೆ ಪೈಪೋಟಿಗೆ ಬಿದ್ದಿವೆ. ಬೆಳಗ್ಗೆಯ ಸಮಯದಲ್ಲಿ ಸುಪ್ರಭಾತ, ಭಕ್ತಿದೇಗುಲಗಳಂತ ಮೌಢ್ಯತುಂಬುವ ಕಾರ್ಯಕ್ರಮ ಕೊಡುತ್ತಿದ್ದ ಮಾಧ್ಯಮಗಳು ಈಗ ಮೋದಿಯ ಮೌಢ್ಯವನ್ನು ತುಂಬಲು ಶುರುವಿಟ್ಟಿವೆ. ಇದರಲ್ಲಿ ಸುವರ್ಣ ಟಿವಿಯಂತೂ ಮೋದಿಯ ಹೆಸರನೇ ಜಪಿಸುವುದರಲ್ಲಿ ತಲ್ಲೀನವಾಗಿವೆ.
ಅಂದಹಾಗೆ ಮೊನ್ನೆ ಸುವರ್ಣ ನ್ಯೂಸ್‍ನಲ್ಲಿ ರಾತ್ರಿಯ ಸುವರ್ಣ ಫೋಕಸ್ ಕಾರ್ಯಕ್ರಮದ ಬಗ್ಗೆ ಬೆಳಗ್ಗೆ ಇಂದಲೇ ಜಾಹೀರಾತು ನೀಡಲು ಆರಂಭಿಸಿದ್ದರು. ಅಂತದ್ದೇನಿದೆ ಎಂದು ನೋಡಿದ್ರೆ ಅದರ ಟೈಟಲ್ ‘ಬಾಹುಬಲಿ ಮೋದಿ’ ಎಂದಿತ್ತು.
ಅಬ್ಬಾ… ನಮ್ ಪ್ರಧಾನಿ ಮೋದಿ ಏನಾದ್ರು ಬಾಹುಬಲಿ 3 ಸಿನಿಮಾ ಏನಾದ್ರು ಮಾಡಿದ್ದಾರ ಅಥವಾ ಬಂಡೆ ಮೇಲೆ ಮಲಗಿ ಯೋಗ ಮಾಡ್ತಿದ್ದೋರು ಆ ಬಂಡೆನೇನಾದ್ರು ಎತ್ತಿ ಹೆಗಲ ಮೇಲೆ ಇಟ್ಕೊಬಿಟ್ರಾ ಅಂತ ರಾತ್ರಿವರೆಗೆ ಕಾದು ನೋಡಿದ್ವಿ. ಅಲ್ಲಿ ನೋಡಿದ್ರ ಆ ವಿಷ್ಯಕ್ಕೂ ಮೋದಿಗೂ ಸಂಬಂಧನೇ ಇರಲಿಲ್ಲ. ಆದ್ರು ಮೋದಿ ಕಾರ್ಯಕ್ರಮದ ಹೀರೋ ಆಗಿದ್ದು ಸೋಜಿಗ.
ಆ ಕಾರ್ಯಕ್ರಮದ ವಿಷಯ ಬಾಹ್ಯಾಕಾಶ ಸಮರದ ಬಗ್ಗೆ ಇತ್ತು. ಒಂದು ಬಟನ್ ಒತ್ತಿದ್ರೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ. ಸೂಪರ್ ಸುಪ್ರಿಂ ರಾಷ್ಟ್ರಗಳಿಗೆ ಮೋದಿ ಹಾಕ್ತಿದ್ದಾರೆ ಚಾಲೆಂಜ್ ಎಂದೆಲ್ಲಾ ಬಿಲ್ಡಪ್ ಕೊಡಲಾಗುತ್ತಿತ್ತು. ನೋಡುಗರಲ್ಲಿ ಅದೆಂತಾ ಬಟನ್ ಇರಬಹುದು ಅದು, ಮೋದಿ ಏನಾದ್ರು ಕಂಡುಹಿಡಿದ್ರಾ ಎಂಬ ಕುತೂಹಲ ಕೆರಳಿಸಿತ್ತು.
ಮೊದಲನೆಯದಾಗಿ ಇಂದು ಎಲ್ಲಾ ದೇಶಗಳು ಯುದ್ಧ ಸಾಮಗ್ರಿಗಳಿಗೆ ಹೆಚ್ಚು ಹಣವನ್ನು ವ್ಯಯಿಸುತ್ತಿರುವುದು ಗೊತ್ತೇ ಇದೆ. ಅದರಲ್ಲಿ ಭಾರತವೂ ಒಂದು. ಭಾರತವು ಪ್ರಾನ್ಸ್, ರಷ್ಯಾದಂತಹ ದೇಶಗಳಿಂದ ಯುದ್ಧ ವಿಮಾನಗಳು, ತಂತ್ರಜ್ಞಾನಗಳನ್ನು ಪಡೆದುಕೊಳ್ಳುತ್ತಿದೆ. ಅಂತದ್ದೇ ವಿಮಾನ ಖರೀದಿಯ ಡೀಲ್‍ನಲ್ಲಿ ಮೋದಿ ಸಾಹೇಬರ ಪಾತ್ರ ಎಂತದ್ದು ಅಂತ ಇಡೀ ಜಗತ್ತೇ ನೋಡಿದೆ.
ಇತ್ತೀಚೆಗೆ ಯುದ್ದ ತಂತ್ರಜ್ಞಾನಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು ಸಾವಿರಾರು ಕಿಲೋ ಮೀಟರ್ ದೂರದ ಸ್ಥಳಗಳಿಗೆ ತಾವಿರುವ ಜಾಗದಿಂದಲೇ ಬಾಂಬ್ ಉಡಾಯಿಸುವ ತಂತ್ರಜ್ಞಾನ ಬಂದು ವರ್ಷಗಳೇ ಕಳೆದಿವೆ. ಅಂತಹ ತಂತ್ರಜ್ಞಾನವನ್ನು ಭಾರತ ಕೂಡ ಪಡೆದುಕೊಂಡಿದೆ. ಇದರಲ್ಲಿ ಅಂತಹ ತಂತ್ರಜ್ಞಾನವನ್ನು ಕಂಡುಹಿಡಿದವರಿಗೆ ಅದರ ಕ್ರೆಡಿಟ್ ಕೊಡುವುದು ಸಾಮಾನ್ಯ. ಆದರೆ ಒಂದು ಬಟನ್ ಒತ್ತಿದ್ರೆ ಸಾಕು ಅಂತ ಹೇಳುವಾಗ ಅಲ್ಲಿ ಮೋದಿಯ ಪಾತ್ರವೇನೂ ಇಲ್ಲ. ಅದರ ಕ್ರೆಡಿಟ್ ಅಂತಹ ತಂತ್ರ ಸಂಶೋಧಿಸಿದವರಿಗೆ ಸೇರಿದ್ದು.
ಇನ್ನು ಸುಪ್ರಿಂ ರಾಷ್ಟ್ರಗಳಿಗೆ ಚಾಲೆಂಜ್ ಹಾಕ್ತಿದ್ದಾರೆ ಮೋದಿ ಎಂದು ಬೇರೆ ಹೇಳಲಾಗಿತ್ತು. ಇಂದಿಗೂ ನೆರೆ ರಾಷ್ಟ್ರಗಳಿಂದ ಯುದ್ದ ಅಸ್ತ್ರಗಳನ್ನ ಕೊಂಡುಕೊಳ್ಳುತ್ತಿರುವಾಗ, ಇಡೀ ವಿಶ್ವಕ್ಕೆ ಯುದ್ದಾಸ್ತ್ರಗಳನ್ನ ಸಪ್ಲೇ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಂತಹ ಅಸ್ತ್ರಗಳು ಅದೆಷ್ಟಿರಬಹುದು ಎಂಬ ಅರಿವೂ ಈ ಸುವರ್ಣ ಚಾನೆಲ್‍ನವರಿಗೆ ಇದ್ದಂತಿಲ್ಲ.
ಯುದ್ದ ವಿಚಾರ ನೋಡುವುದಾದರೆ ಅದರಲ್ಲಿ ಸೈನ್ಯದ ಪಾತ್ರದ ಮಹತ್ವದ್ದು, ಯುದ್ದ ಮಾಡಿ ಎಂದು ಹೇಳುವಷ್ಟು ಸುಲಭವಾಗಿ ಯುದ್ದ ಮಾಡಲು ಸಾಧ್ಯವಿಲ್ಲ. ಆದರೆ ಅಂತಹ ಯುದ್ದವನ್ನು ಗೆಲ್ಲುವ ಸೈನಿಕರಿಗೆ ಆ ಕಾರ್ಯಕ್ರಮದಲ್ಲಿ ಯಾವ ಕ್ರೆಡಿಟ್ಟೂ ಇರಲಿಲ್ಲ.
ಇಷ್ಟೆಲ್ಲಾ ಇದ್ದರೂ ಕೂಡ ಸುವರ್ಣ ಚಾನೆಲ್ ಮೋದಿಯೇ ಯುದ್ಧಭೂಮಿಯಲ್ಲಿ ನಿಂತು ಯುದ್ಧ ಮಾಡಿ ಗೆದ್ದಿರುವಂತೆ, ಮೋದಿಯೇ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಂತೆ ಮೋದಿಯ ಬಗ್ಗೆ ಬಿಲ್ಡಪ್ ಕೊಡುತ್ತಿರುವುದು ಸೈನ್ಯಕ್ಕೆ ಮಾಡುವ ಅವಮಾನವೂ ಹೌದು. ವಿಶ್ಲೇಷಣೆ, ಮೌಲ್ಯಮಾಪನ, ಪ್ರತಿಕಾ ನೀತಿಗಳನ್ನೇ ಮರೆತಿರುವ ಇಂತಹ ನ್ಯೂಸ್ ಚಾನೆಲ್‍ಗಳು ಇನ್ನೆಂಥಾ ಸುದ್ದಿಯನ್ನು ಬಿತ್ತರಿಸಲು ಸಾಧ್ಯ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Super news from Nanu gouri it is an excellent news paper and it should cover all district of karnataka because other papers baise papers and TV channels…..

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...