Homeಅಂಕಣಗಳುಲೋಕಪಾಲ್‌ರನ್ನು ನೇಮಕ ಮಾಡದಿರುವುದು ಹೇಗೆ ?

ಲೋಕಪಾಲ್‌ರನ್ನು ನೇಮಕ ಮಾಡದಿರುವುದು ಹೇಗೆ ?

- Advertisement -
- Advertisement -

| ಕೆ.ಎನ್ ದಿನೇಶ್ |

ತನ್ನನ್ನು ತಾನು ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿಯ ಆಡಳಿತಾವಧಿಯಲ್ಲಿ ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಸ್ವತಂತ್ರ ಮತ್ತು ವಿಶ್ವಾಸಾರ್ಹ ಲೋಕಪಾಲರನ್ನು ಬಲಿಕೊಡಲಾಗಿದೆ.

2014 ರ ಜನವರಿ 1 ರಲ್ಲಿಯೇ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯು ಸಂಸತ್ತಿನಲ್ಲಿ ಪಾಸ್ ಆಗಿ ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿತು. ಸ್ವತಂತ್ರ ಅಧಿಕಾರವನ್ನು ಹೊಂದಿರುವ ಮತ್ತು ಶಕ್ತಿಯುತವಾದ ಭ್ರಷ್ಟಾಚಾರ ವಿರೋಧಿ ಆಂಬುಡ್ಸ್ಮನ್ ಸ್ಥಾಪನೆಗೆ ಒತ್ತಾಯಿಸಿ ಸಾರ್ವಜನಿಕರ ಬಲವಾದ ಒತ್ತಡದ ಪರಿಣಾಮವಾಗಿ ಈ ಕಾನೂನು ಜಾರಿಗೆ ತರಲಾಯಿತು. ಯಾವುದೇ ಭಯ ಮತ್ತು ಪಕ್ಷಪಾತವಿಲ್ಲದೇ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೊಳಪಡಿಸುವ ಅಧಿಕಾರ ಇದಕ್ಕಿತ್ತು.

ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ನಂತಹ ಆಗಿನ ತನಿಖಾ ಸಂಸ್ಥೆಗಳು ಪಂಜರದ ಗಿಳಿಯಂತಾಗಿ, ಆಳುವ ಸರ್ಕಾರದ ಕೈ ಗೊಂಬೆಯಾಗಿ ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರು ಅವುಗಳ ಮೇಲೆ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದ್ದು ಲೋಕಪಾಲ್ನ ಜಾರಿಗೆಯ ಬೇಡಿಕೆಗೆ ಕಾರಣವಾಗಿತ್ತು.  2014ರ ಸಾರ್ವತ್ರಿಕ ಚುನಾವಣೆಯಲ್ಲಿ ಭ್ರಷ್ಟಾಚಾರ-ವಿರೋಧಿ ಅಜೆಂಡಾದ ಮೂಲಕ ಅಧಿಕಾರಕ್ಕೆ ಏರಿದ ನಂತರ ಮೋದಿಯವರು, ಲೋಕಪಾಲ್‌ರನ್ನು ನೇಮಕ ಮಾಡುವ ಮೂಲಕ ಲೋಕ್‌ಪಾಲ್ ಸಂಸ್ಥೆಯ ವಿಶ್ವಾಸವನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು

ಅದರೆ ಆಗಿದ್ದೇ ಬೇರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಒಂದು ಶಕ್ತಿಶಾಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯನ್ನು ರಚಿಸುವಲ್ಲಿ ಬರೀ ನಿರಾಸಕ್ತಿಯೇ ಕಂಡುಬಂದಿದೆ. ಅಧಿಕಾರಕ್ಕೆ ಬಂದು ಸುಮಾರು ಐದು ವರ್ಷಗಳ ತನಕ ಲೋಕಪಾಲ ನೇಮಕ ಮಾಡಲೇ ಇಲ್ಲ.   ಕೊನೆಗೆ 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮೂರು ವಾರಗಳ ಮುಂಚೆ,  ಲೋಕಪಾಲ್‌ನ ಛೇರ್‌ಪರ್ಸನ್ ಮತ್ತು ಇತರೆ ಸದಸ್ಯರು ನೇಮಕವಾದರೂ ಸಹ ನೇಮಕಾತಿ ಪ್ರಕ್ರಿಯೆಯ ಎಲ್ಲಾ ವಿಧಾನಗಳು ಸಂಪೂರ್ಣ ರಾಜಿಕೋರತನದಿಂದ ಕೂಡಿದ್ದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಮೊದಲನೇಯದಾಗಿ, ಲೋಕ್ ಪಾಲ್ ನ ಅಧ್ಯಕ್ಷ ಮತ್ತು ಸದಸ್ಯರ ಪದಕ್ಕಾಗಿ ಹೆಸರನ್ನು ಸೂಚಿಸುವ ಒಂದು ಆಯ್ಕೆ ಸಮಿತಿಯಲ್ಲಿ ಸರಕಾರದ ಪ್ರತಿನಿಧಿಗಳು ಮತ್ತು ಸರಕಾರ ನೇಮಿಸಿರುವವರೇ ಹೆಚ್ಚಿನ ಸಂಖ್ಯೆ ಮತ್ತು ಪ್ರಾಬಲ್ಯ ಹೊಂದಿದ್ದು.

ಈ ಆಯ್ಕೆ ಸಮಿತಿಯಲ್ಲಿ ಆಡಳಿತ ಪಕ್ಷದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಂತೆ ನೋಡಿಕೊಳ್ಳುವುದು ಆ ಸಂಸ್ಥೆಯ ಸ್ವಾತಂತ್ರö್ಯ ಮತ್ತು ಸ್ವಾಯುತ್ತತೆಯನ್ನು ಖಾತರಿಪಡಿಸುವ ಪ್ರಮುಖ ತತ್ವವಾಗಿರುತ್ತದೆ.

ಹಾಗಾಗಿ ಲೋಕಪಾಲ್ ಆಕ್ಟ್, ಪ್ರಕಾರ ಪ್ರಧಾನಮಂತ್ರಿ,ಲೋಕಸಭೆಯ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷದನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಥವಾ ಸಿಜೆಐನಿಂದ ನಾಮನಿರ್ದೇಶನಗೊಂಡ ಸವೋಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ಈ ನಾಲ್ಕು ಜನರೂಒಪ್ಪುವ ಒಬ್ಬ ನ್ಯಾಯಾಧೀಶರನ್ನು ಒಳಗೊಂಡ ಸಮತೋಲಿತ ಆಯ್ಕೆ ಸಮಿತಿ ಇರಬೇಕು.

2014ರ ಸಾರ್ವತ್ರಿಕ ಚುನಾವಣೆಯ ನಂತರ, ವಿರೋಧ ಪಕ್ಷದ ನಾಯಕರು ಎಂದು ಯಾರೂ ಇಲ್ಲ ಎನ್ನುವ ಕಾರಣಕ್ಕಾಗಿ ಆಯ್ಕೆ ಸಮಿತಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಆದರೆ ಸಿಬಿಐ ನಿರ್ದೇಶಕರ ನೇಮಕಾತಿ ವಿಚಾರದಲ್ಲಿ ಇಂತಹ ಸಮಸ್ಯೆ ಎದುರಾದಾಗ ಮಾತ್ರ ನೇಮಕಾತಿ ವಿಧಾನಕ್ಕೆ ಸಂಸತ್ತಿನಲ್ಲಿ ತಿದ್ದುಪಡಿ ಮಾಡಿ ಆಯ್ಕೆ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ಇಲ್ಲದಿದ್ದ ಸಂದರ್ಭದಲ್ಲಿ ಆಡಳಿತ ಪಕ್ಷದ ನಂತರ ಹೆಚ್ಚಿನ ಸ್ಥಾನಗಳನ್ನು ಪಡೆದ ಪ್ರತಿಪಕ್ಷದ ನಾಯಕನ್ನು ಸೇರಿಸಿಕೂಳ್ಳಲಾಯಿತು. ಇದೇ ವಿಧಾನವನ್ನು ಲೋಕಪಾಲ್‌ಗೆ ಅನ್ವಯಿಸದೇ ಹೆಚ್ಚು ಕಾಲ ಏಕೆ ಬಿಟ್ಟರು ಎನ್ನುವುದು ಮೋದಿಗೆ ಆಸಕ್ತಿ ಇರಲಿಲ್ಲ ಎಂಬುದನಷ್ಟೇ ತೋರಿಸುತ್ತದೆ.

ಲೋಕಪಾಲ್ ನೇಮಕಾತಿಯ ಆಯ್ಕೆ ಸಮಿತಿಯ ಸಂಯೋಜನೆಯನ್ನು ತಿದ್ದುಪಡಿ ಮಾಡುವ ಬದಲು ಮೋದಿ ಸರಕಾರವು 10 ಪುಟಗಳ ತಿದ್ದುಪಡಿ ಮಸೂದೆಯನ್ನು ಮುಂದಿಟ್ಟು, ಲೋಕಪಾಲ ಕಾಯಿದೆ ಮೂಲಭುತವಾಗಿ ದುರ್ಬಲವಾಗುವಂತೆ ಮಾಡಿತು; ಇದರಿಂದ ಲೋಕಪಾಲ ಅನುಷ್ಠಾನಗೊಳಿಸುವಲ್ಲಿ ಸರಕರಕ್ಕಿಂದ್ದ ನಿರಾಸಕ್ತಿ ಇನ್ನೊಂದು ಸಲ ಸಾಬೀತಾಯಿತು. ಆದರೆ ಸರಕಾರ ಮುಂದಿಟ್ಟ ತಿದ್ದುಪಡಿಗಳ ಸ್ವರೂಪವೇ ವಿವಾದಾತ್ಮಕವಾಗಿದ್ದರಿಂದ  ಈ ಮಸೂದೆಯನ್ನು ಸಂಸದೀಯ ಸ್ಥಾಯೀ ಸಮಿತಿಗೆ ಕಳುಹಿಸಲಾಯಿತು. ಹಾಗೂ ಅಂದಿನಿಂದ ಅಲ್ಲಿಯೇ ಬಿದ್ದುಕೊಂಡಿತು.

ಲೋಕಪಾಲ್ ನೇಮಕಾತಿಗಾಗಿ ಸುಪ್ರೀಂ ಕೋಟನಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರಿಂದ ದಾವೆ ಹೊಡಲಾಯಿತು. ವಿರೋಧ ಪಕ್ಷದ ನಾಯಕ ಇಲ್ಲದಿರುವ ಒಂದು ಸಮಿತಿಯೇ ಲೋಕಪಾಲರನ್ನು ನೇಮಕ ಮಾಡಬಹುದು ಎಂದು ಎಪ್ರಿಲ್ 2017 ರಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿತು ಅದರೂ ಲೋಕಪಾಲರನ್ನು ನೇಮಕ ಮಾಡಲಿಲ್ಲ. ಹಾಗೂ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ದಾಖಲಿಸಿದ ನಂತರವೇ, ಅಧಿಕಾರಕ್ಕೆ ಬಂದು 45 ತಿಂಗಳ ನಂತರ ಆಯ್ಕೆ ಸಮಿತಿ ಪ್ರಧಾನಮಂತ್ರಿಯ ನೇತೃತ್ವದಲ್ಲಿ ಮೊದಲ ಬಾರಿ ಸಭೆ ಸೇರಿತು.

ಪ್ರಧಾನಮಂತ್ರಿ ಮತ್ತು ಲೋಕಸಭೆಯ ಸ್ಪೀಕರ್ರೊಂದಿಗೆ ಸಿಜೆಐಯಿಂದ ನೇಮಿಸಲಾದ  ಮೊಕುಲ್ ರೊಹಟ್ಗಿಯರವನ್ನು ಆಯ್ಕೆ ಸಮಿತಿಗೆ ಸೇರಿಸಿಕೊಳ್ಳಲಾಯಿತು. ಈ ಮುಕುಲ್ ರೋಹಟ್ಗಿ ಅವರು ಮೋದಿ ಆಡಳಿತದ ಮೊದಲ ಮೂರು ವರ್ಷಗಳಲ್ಲಿ ಅಟಾರ್ನಿ ಜನರಲ್ ಆಗಿ ಸೇವೆಸಲ್ಲಿಸಿದ್ದರು.

ನಂತರ ಲೋಕಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕೇವಲ ನಾಮಕಾವಸ್ಥೆಗೆ ಆಯ್ಕೆ ಸಮಿತಿಯ ಸಭೆಗಳಿಗೆ ಆಹ್ವಾನಿಸಲಾಯಿತಾದರೂ, ಅವರಿಗೆ ಯಾವುದೇ ನಿರ್ಣಯ ಮಾಡುವ ಅಧಿಕಾರ   ನೀಡಿದ್ದಿಲ್ಲ. ಎಲ್ಲರೂನಿರೀಕ್ಷಿಸಿದಂತೆ ಅವರು ಹಾಜರಾಗಲು ನಿರಾಕರಿಸಿದರು.

ಇದರ ಪರಿಣಾಮವಾಗಿ, ಆಡಳಿತ ಪಕ್ಷಕ್ಕೆ ನಿಷ್ಠೆಯನ್ನು ತೋರಿಸುವವರು ಮಾತ್ರ ಲೋಕಪಾಲದ ಆಯ್ಕೆ ಸಮಿತಿಯ ಸದಸ್ಯರಾಗಿರುವುದು ಹಾಗಾಗಿ, ಸರಕಾರ ಬಯಸುವ ಅಭ್ಯರ್ಥಿಗಳನ್ನೇ ಲೋಕಪಾಲ್ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗೆ ನೇಮಕ ಮಾಡುವಂತಹ ಪಕ್ಷಪಾತ ಮೂಲದಲ್ಲೇ ಕಾಣಿಸಿಕೊಂಡಿದೆ. ಇದು ಈ ಕಾನೂನಿನ ಮೂಲ ಉದ್ದೇಶವನ್ನೇ ಸೋಲಿಸುತ್ತದೆ.

ಎರಡನೆಯಾದಾಗಿ ಲೋಕಪಾಲ್ ಆಯ್ಕೆ ಸಮಿತಿಯ ಕಾರ್ಯಗಳನ್ನು ಗೌಪ್ಯವಾಗಿ ಮಾಡಲಾಗುತ್ತಿದೆ. ಅದರೆ ಈ ಎಲ್ಲ ಪ್ರಕ್ರಿಯೆಗಳ ಸರಿಯಾಗಿ ಆಗುವಂತೆ ಸಾರ್ವಜನಿಕರ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು ಹಾಗೂ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಿಕವಾಗಿರಬೇಕು ಎಂದು ಲೋಕಪಾಲ್ ಕಾಯ್ದೆ 4(4)  ಹೇಳುತ್ತದೆ. “ಆಯ್ಕೆ ಸಮಿತಿಯು ಲೋಕಪಾಲದ ಅಧ್ಯಕ್ಷ ಮತ್ತು ಸದಸ್ಯರನ್ನು ಆಯ್ಕೆ ಮಾಡುವಾಗ ತನ್ನ ಪ್ರಕ್ರಿಯೆಯನ್ನು ಪಾರದರ್ಶಕವಾಗಿರುವಂತೆ ನಿಯಂತ್ರಿಸಬೇಕು”

ಆದರೆ ಈ ನಿಯಮದ ಸಂಪೂರ್ಣ ಉಲ್ಲಂಘನೆ ಮಾಡುತ್ತ, ಲೋಕಪಾಲ ಆಯ್ಕೆಯ ಪ್ರಕ್ರಿಯೆಯಲ್ಲಿ ಪಾರದರ್ಶಿಕತೆಯನ್ನು ತರಲೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಭ್ಯಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಾರ್ವಜನಿಕಗೊಳಿಸಿಲ್ಲ. ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ, ಆಯ್ಕೆ ಸಮಿತಿ ಸಭೆಯ ನಡಾವಳಿಗಳನ್ನು  ರಹಸ್ಯ ಮಾಹಿತಿಯೆಂದು ಹೇಳಿಸಾರ್ವಜನಿಕರಿಗೆ ಬಹಿರಂಗಪಡಿಸಲು ನಿರಾಕರಿಸಲಾಯಿತು!ಪ್ರತಿಪಕ್ಷದ ನಾಯಕರನ್ನು ಒಳಗೊಳ್ಳದೇ ಇರುವಂತಹ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಪಾರದರ್ಶಕತೆಯನ್ನು ತೋರದೇ ಇರುವುದು ಇನ್ನಷ್ಟು ಸಮಸ್ಯಾತ್ಮಕವಾಗಿದೆ.

ಹೊಸ ಲೋಕಪಾಲ್: ಪಿ.ಸಿ ಘೋಷ್

ದುರದೃಷ್ಟವಶಾತ್, ಆಯ್ಕೆ ಪ್ರಕ್ರಿಯೆಯನ್ನು ರಾಜಿ ಮಾಡಿಕೊಳ್ಳುವುದರ ಮೂಲಕ, ಲೋಕಪಾಲ್ ಸಂಸ್ಥೆಯು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮುಂಚೆಯೇ ಮೋದಿ ಸರಕಾರ ಅದನ್ನು ದುರ್ಬಲಗೊಳಿಸಿದೆ. ಈ ರೀತಿಯಲ್ಲಿ, ಭ್ರಷ್ಟಾಚಾರವನ್ನು ನಿಗ್ರಹಿಸುವ ಇತರೆ ಸಂಸ್ಥೆಗಳಿಗೆ ಅಂಟಿಕೊಂಡಿರುವ ರೋಗ ಈ ಸಂಸ್ಥೆಗೂ ಹುಟ್ಟಿನಿಂದಲೇ ಅಂಟಿಕೊಂಡಿದೆ. ಸ್ವಘೋಷಿತ ಚೌಕಿದಾರ್ ಅವರ ನೇತೃತ್ವದಲ್ಲಿ ಸ್ವತಂತ್ರ ಮತ್ತು ವಿಶ್ವಾಸಾರ್ಹ ಲೋಕಪಾಲನ್ನು ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದೊಡ್ಡ ದುರಂತವಾಗಿದೆ.

 ಕೃಪೆ: ದಿವೈರ್.ಇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...