Homeಮುಖಪುಟ28‌ ಸಿಬ್ಬಂದಿಗೆ ಕೊರೊನಾ: ಝೀ ನ್ಯೂಸ್ ಕಛೇರಿ ಸೀಲ್‌ಡೌನ್‌ಗೆ ಒತ್ತಾಯ, ಚೌಧರಿ ವಿರುದ್ಧ ಆಕ್ರೋಶ

28‌ ಸಿಬ್ಬಂದಿಗೆ ಕೊರೊನಾ: ಝೀ ನ್ಯೂಸ್ ಕಛೇರಿ ಸೀಲ್‌ಡೌನ್‌ಗೆ ಒತ್ತಾಯ, ಚೌಧರಿ ವಿರುದ್ಧ ಆಕ್ರೋಶ

- Advertisement -
- Advertisement -

ಝೀ ನ್ಯೂಸ್ ಹಿಂದಿ ಸುದ್ದಿವಾಹಿನಿಯ‌ 28‌ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾರೀ ವಿವಾದ ಭುಗಿಲೆದ್ದಿದ್ದು ಕೂಡಲೇ ಝೀ ನ್ಯೂಸ್ ಕಛೇರಿ ಸೀಲ್‌ಡೌನ್ ಮಾಡಿ ಸಂಪಾದಕ ಸುಧೀರ್‌ ಚೌಧರಿ ಸೇರಿದಂತೆ ಪ್ರತಿಯೊಬ್ಬ ಉದ್ಯೋಗಿಗಳನ್ನು ಕ್ವಾರಂಟೈನ್‌ ಮಾಡುವಂತೆ ವ್ಯಾಪಕ ಒತ್ತಾಯ ಕೇಳಿಬಂದಿದೆ.

ನಿನ್ನೆ ಮಧ್ಯಾಹ್ನ ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್‌ ಚೌಧರಿಯವರು ಟ್ವೀಟ್‌ ಮಾಡಿ “ಇವು ಕಷ್ಟದ ಸಮಯಗಳು. ನನ್ನ 28 ಸಹೋದ್ಯೋಗಿಗಳು COVID-19 ಸೋಂಕಿಗೆ ತುತ್ತಾಗಿದ್ದಾರೆ. ನಾನು ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇನೆ ಮತ್ತು ಅವರ ಧೈರ್ಯ ಮತ್ತು ವೃತ್ತಿಪರತೆಗೆ ನಮಸ್ಕರಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದರು.

ಅಲ್ಲದೇ ಮುಂದುವರಿದ ಅವರು ಸೋಂಕಿತರಿಗೆ ಮನೆಯಲ್ಲಿಯೇ ಇರುವ ಅವಕಾಶವಿತ್ತು. ಆದರೂ ಅವರು ವೃತ್ತಪರರಾದ್ದರಿಂದ ಕೆಲಸಕ್ಕೆ ಬಂದಿದ್ದಾರೆ. ಅವರನ್ನು ಗೌರವಿಸದಿದ್ದರೂ ಪರವಾಗಿಲ್ಲ ಹಗೆತನ ಸಾಧಿಸಬೇಡಿ ಎರಡನೇ ಟ್ವೀಟ್‌ ಮಾಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾವುದೇ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಬಂದರೆ ಅವರ ಸಂಪರ್ಕದಲ್ಲಿದ್ದವರೆಲ್ಲರೂ ಕ್ವಾರಂಟೈನ್‌ಗೆ ಒಳಗಾಗಬೇಕೆಂಬ ನಿಯಮವಿದೆ. ಅದನ್ನು ಉಲ್ಲಂಘಿಸಿ ಅವರು ಕಚೇರಿಗೆ ಬಂದುದ್ದೇಕೆ ಎಂಬ ಪ್ರಶ್ನೆಯನ್ನು ಬಹಳಷ್ಟು ನೆಟ್ಟಿಗರು ಎತ್ತಿದ್ದಾರೆ.

ಸುಧೀರ್‌ ಚೌಧರಿತವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ಸೋಂಕಿತ ವ್ಯಕ್ತಿಗಳು ಕೆಲಸಕ್ಕೆ ಬಂದಿದ್ದರೆ ಅದು ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 269 ಮತ್ತು 188 ರ ಅಡಿಯಲ್ಲಿ ನೀಡಲಾದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಅರವಿಂದ್‌ ಗುಣಶೇಖರ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಇದಲ್ಲದೇ ಪತ್ರಕರ್ತ ಅವೀಕ್‌ ಸೇನ್‌ರವರು ಸಿಬ್ಬಂದಿಗಳನ್ನು ಒತ್ತಾಯಪೂರ್ವಕವಾಗಿ ಕಚೇರಿಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. ತನ್ನ ಸಿಬ್ಬಂದಗಳಿಗೆ ಭಾವನಾತ್ಮಕ ಭಾಷಣ ಮಾಡಿ, ಸೋಂಕು ಹರಡುತ್ತದೆ, ನಾವು ಅದನ್ನು ಹರಡಬಹುದು. ಹಾಗಂತ ಕಚೇರಿಗೆ ತಪ್ಪಿಸಿಕೊಳ್ಳುವವರ ಮೇಲೆ ಕಣ್ಣಿಡಲಾಗುತ್ತದೆ’ ಎಂದು ಬ್ಲಾಕ್‌ ಮೇಲ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಂತರ ಸುಧೀರ್‌ ಚೌಧರಿಯವರು ಶುಕ್ರವಾರದಿಂದಲೇ ನಮ್ಮ ಕಚೇರಿ ಸೀಲ್‌ಡೌನ್‌ ಆಗಿದೆ. ಸೋಮವಾರದಿಂದಲೇ ಸೋಂಕಿತರು ನಮ್ಮ ಕಚೇರಿಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡುವ ಕೆಲಸ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.

ತದನಂತರ ಶಟ್‌ಡೌನ್‌ಝೀನ್ಯೂಸ್ ಎಂಬ ಹ್ಯಾಸ್‌ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ. ಕೆಲ ಟ್ವೀಟ್‌ ಮತ್ತು ಫೇಸ್‌ಬುಕ್‌ ಅಭಿಪ್ರಾಯಗಳು ಕೆಳಗಿನಂತಿವೆ.

ಸುಧೀರ್ ಚೌಧರಿಯ ಹಿಪಾಕ್ರಸಿಗೆ ಒಂದು ಮಿತಿಯೇ ಇದ್ದಂತಿಲ್ಲ.‌ ತಬ್ಲೀಗಿ ಜಮಾತ್ ನವರಿಗೆ ಕೊರೋನಾ ಸೋಂಕು ಬಂದಾಗ ಅವರನ್ನು ಭಯೋತ್ಪಾದಕರು,…

Posted by Dinesh Kumar Dinoo on Monday, May 18, 2020


ಇದನ್ನೂ ಓದಿ: ರಾಹುಲ್‌ ಗಾಂಧಿ ಗಟ್ಸ್‌ ಪರೀಕ್ಷಿಸಿಲು ಹೋಗಿ ಅಪಹಾಸ್ಯಕ್ಕೊಳಗಾದ TV9 ರಂಗನಾಥ್ ಭಾರದ್ವಾಜ್! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...