HomeUncategorizedಕಚ್ಚಾ ತೈಲಬೆಲೆಯಲ್ಲಿ 30% ಕುಸಿತ: 30 ವರ್ಷಗಳಲ್ಲೇ ಅತ್ಯಧಿಕ ಇಳಿಕೆ

ಕಚ್ಚಾ ತೈಲಬೆಲೆಯಲ್ಲಿ 30% ಕುಸಿತ: 30 ವರ್ಷಗಳಲ್ಲೇ ಅತ್ಯಧಿಕ ಇಳಿಕೆ

- Advertisement -
- Advertisement -

ಕೊರೋನಾ ವೈರೆಸ್‌ ಭೀತಿ ಸಮಯದಲ್ಲಿ ರಷ್ಯಾದೊಂದಿಗೆ ದರಸಮರಕ್ಕೆ ಇಳಿದಿರುವ ಸೌದಿಯು ಬೆಲೆಗಳನ್ನು ಕಡಿತಗೊಳಿಸಿದ ನಂತರ 1991 ರ ನಂತರದ ಕಚ್ಚಾ ತೈಲಬೆಲೆಯಲ್ಲಿ ಅತಿದೊಡ್ಡ ಕುಸಿತ ಉಂಟಾಗಿದೆ.

ಬ್ರೆಂಟ್ ಕಚ್ಚಾ ತೈಲಬೆಲೆಯು ಬ್ಯಾರೆಲ್‌ ಒಂದಕ್ಕೆ $ 14.25 ಡಾಲರ್‌ (31.5%)ಕುಸಿದಿದ್ದು $ 31.02 ಡಾಲರ್‌ಗೆ ತಲುಪಿದೆ. ಇದು ಜನವರಿ 17, 1991 ರ ನಂತರ ಅತಿ ಹೆಚ್ಚಿನ ಇಳಿಕೆಯಾಗಿದೆ.

ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾ, ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ರಷ್ಯಾದ ವಿರುದ್ಧ ದರ ಸಮರಕ್ಕೆ ಮುಂದಾಗಿದೆ. ಆ ಮೂಲಕ ದರ ಕಡಿಮೆ ಮಾಡಿ ಹೆಚ್ಚಿನ ಗ್ರಾಹಕ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಇದರ ಉದ್ದೇಶವಾಗಿದೆ.

ಕರೋನವೈರಸ್ ಭೀತಿಯಿಂದ ಏಕಾಏಕಿ ಉಂಟಾದ ಆರ್ಥಿಕ ಕುಸಿತದಿಂದ ತೈಲ ಆಮದು ದಿನೇ ದಿನೇ ಕಡಿಮೆಯಾಗುತ್ತಿರುವುದು ಸಹ ದರ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ.

ಈ ದರ ಇಳಿಕೆಯ ಪ್ರಯೋಜನ ಜನಸಾಮಾನ್ಯರಿಗೆ ದಕ್ಕುವುದೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...