59 ಚೀನಿ ಆಪ್‌ಗಳ ನಿಷೇಧ: ಸ್ಪಷ್ಟೀಕರಣ ನೀಡಿದ ಟಿಕ್‌ಟಾಕ್

ಸುಮಾರು 60 ಬಿಲಿಯನ್ ಮೌಲ್ಯದ ಸರಕುಗಳನ್ನು ಭಾರತಕ್ಕೆ ರಫ್ತು ಮಾಡುವ ಚೀನೀ ವ್ಯವಹಾರಗಳನ್ನು ನಿಷೇಧಿಸಲು ಒತ್ತಾಯ ಬಂದಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ.

0

ರಾಷ್ಟ್ರೀಯ ಭದ್ರತೆ ಮತ್ತು ಗೌಪ್ಯತೆ ವಿಚಾರದಲ್ಲಿ 59 ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಸೋಮವಾರ ನಿರ್ಬಂಧಿಸಿದ ನಂತರ ಸ್ಪಷ್ಟೀಕರಣ ನೀಡಲು ಟಿಕ್‌ಟಾಕ್ ಇಂಡಿಯಾ ಮುಂದಾಗಿದೆ. ಜನಪ್ರಿಯ ವೀಡಿಯೊ ಹಂಚಿಕೆ ಅಪ್ಲಿಕೇಶನ್ ಸರ್ಕಾರದ ಆದೇಶವನ್ನು ಪಾಲಿಸುವ ಪ್ರಕ್ರಿಯೆಯಲ್ಲಿದೆ ಮತ್ತು “ಭಾರತೀಯ ಕಾನೂನಿನಡಿಯಲ್ಲಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳನ್ನು ಅನುಸರಿಸುತ್ತಲೇ ಇದೆ” ಎಂದು ಹೇಳಿದೆ.

ಲಡಾಖ್‌ನಲ್ಲಿ ಜೂನ್ 15 ರಂದು ನಡೆದ ಭೀಕರ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಸರ್ಕಾರವು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ತನ್ನ ಹೇಳಿಕೆಯಲ್ಲಿ, ಟಿಕ್‌ಟಾಕ್ ಇಂಡಿಯಾ ಭಾರತದಲ್ಲಿನ ಬಳಕೆದಾರರ ಯಾವುದೇ ಮಾಹಿತಿಯನ್ನು “ಚೀನಾ ಸರ್ಕಾರ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದೊಂದಿಗೆ” ಹಂಚಿಕೊಂಡಿಲ್ಲ ಎಂದು ಹೇಳಿದೆ.

“ಭವಿಷ್ಯದಲ್ಲಿಯೂ ಸಹ ನಾವು ನಾವು ಹಾಗೆ ಮಾಡುವುದಿಲ್ಲ” ಎಂದಿರುವ ಟಿಕ್‌ಟಾಕ್ ಇದು ಬಳಕೆದಾರರ ಗೌಪ್ಯತೆ ಮತ್ತು ಸಮಗ್ರತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರತಿಪಾದಿಸಿದೆ.

“ನಿಷೇಧ ಕುರಿತು ಪ್ರತಿಕ್ರಿಯಿಸಲು ಮತ್ತು ಸ್ಪಷ್ಟೀಕರಣಗಳನ್ನು ಸಲ್ಲಿಸಲು ಅವಕಾಶಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಮಧ್ಯಸ್ಥಗಾರರನ್ನು ಭೇಟಿ ಮಾಡಲು ನಮ್ಮನ್ನು ಆಹ್ವಾನಿಸಲಾಗಿದೆ” ಎಂದು ಟಿಕ್‌ಟಾಕ್‌ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ.

“ಟಿಕ್‌ಟಾಕ್ 14 ಭಾರತೀಯ ಭಾಷೆಗಳಲ್ಲಿ ಲಭ್ಯಗೊಳಿಸುವ ಮೂಲಕ ಅಂತರ್ಜಾಲವನ್ನು ಪ್ರಜಾಪ್ರಭುತ್ವಗೊಳಿಸಿದೆ. ನೂರಾರು ಮಿಲಿಯನ್ ಬಳಕೆದಾರರು, ಕಲಾವಿದರು, ಕಥೆ ಹೇಳುವವರು, ಶಿಕ್ಷಣತಜ್ಞರು ಮತ್ತು ಪ್ರದರ್ಶಕರು ತಮ್ಮ ಜೀವನೋಪಾಯಕ್ಕಾಗಿ ಅದನ್ನು ಅವಲಂಬಿಸಿರುತ್ತಾರೆ, ಅವರಲ್ಲಿ ಅನೇಕರು ಮೊದಲ ಬಾರಿಗೆ ಇಂಟರ್ನೆಟ್ ಬಳಕೆದಾರರಾಗಿದ್ದಾರೆ” ಎಂದು ನಿಖಿಲ್ ಗಾಂಧಿ ಹೇಳಿದ್ದಾರೆ.

“ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹಪೀಡಿತ ಚಟುವಟಿಕೆಗಳಲ್ಲಿ ತೊಡಗುವುದು, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ” ಗಾಗಿ ಭಾರತವು ಹಲವು ಆಪ್‌ಗಳನ್ನು ನಿರ್ಬಂಧಿಸಿದೆ. ಅವುಗಳಲ್ಲಿ ಟಿಕ್‌ಟಾಕ್, ಯುಸಿ ಬ್ರೌಸರ್ ಮತ್ತು ವೀಚಾಟ್ ಸೇರಿವೆ.

ಕೆಲವು ಅಪ್ಲಿಕೇಶನ್‌ಗಳ ಬಳಕೆಯನ್ನು ನಿರ್ಬಂಧಿಸುವ ನಿರ್ಧಾರವು “ಭಾರತೀಯ ಸೈಬರ್‌ಸ್ಪೇಸ್‌ನ ಸುರಕ್ಷತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿತ ಕ್ರಮವಾಗಿದೆ” ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ ತಿಳಿಸಿದೆ.
ಬಳಕೆದಾರರ ದತ್ತಾಂಶ ಕಳ್ಳತನ ಮತ್ತು ಬಳಕೆದಾರರ ಗೌಪ್ಯತೆ ಉಲ್ಲಂಘನೆ ಎಂದು ಆರೋಪಿಸಿ ಸಚಿವಾಲಯಕ್ಕೆ ಹಲವಾರು ದೂರುಗಳು ಬಂದಿವೆ ಎಂದು ಸರ್ಕಾರ ಹೇಳಿದೆ.

ಸುಮಾರು 60 ಬಿಲಿಯನ್ ಮೌಲ್ಯದ ಸರಕುಗಳನ್ನು ಭಾರತಕ್ಕೆ ರಫ್ತು ಮಾಡುವ ಚೀನೀ ವ್ಯವಹಾರಗಳನ್ನು ನಿಷೇಧಿಸಲು ಒತ್ತಾಯ ಬಂದಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ.

ಚೀನೀ ಮೊಬೈಲ್‌ಗಳು ಸ್ಥಳೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸುಮಾರು 65 ಪ್ರತಿಶತದಷ್ಟು ಪಾಲನ್ನು ಹೊಂದಿವೆ ಮತ್ತು ಟಿಕ್‌ಟಾಕ್ ಮತ್ತು ಹೆಲೋನಂತಹ ವೀಡಿಯೊ-ಹಂಚಿಕೆ ಅಪ್ಲಿಕೇಶನ್‌ಗಳು ಕಿರಿಯ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಭಾರತದಲ್ಲಿ ಸುಮಾರು 12ಕೋಟಿ ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್‌ ಅತಿದೊಡ್ಡ ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿದೆ ಎಂದು ಹೇಳಲಾಗುತ್ತದೆ.


ಟಿಕ್‌‌ಟಾಕ್ ಸೇರಿದಂತೆ 59 ಚೀನಿ ಆಪ್‌ಗಳನ್ನು ನಿಷೇಧಿಸಿದ ಭಾರತ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here