ವಿಡಿಯೋ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಇಟಲಿಗೆ ಬಂದಿಳಿದ ವೈದ್ಯರಿಗೆ ಭವ್ಯ ಸ್ವಾಗತ

ಕೊರೊನ ವೈರಸ್‌ ಸೋಕಿನಿಂದಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿರುವ ಇಟಲಿಯ ನೆರವಿಗೆ ದ್ವೀಪ ರಾಷ್ಟ್ರವಾದ ಕ್ಯೂಬಾದಿಂದ ಬಲಿಷ್ಠ ವೈದ್ಯರು ಮತ್ತು ದಾದಿಯರ ತಂಡ ಧಾವಿಸಿದ್ದು ಅವರಿಗೆ ಇಟಲಿಯ ಲೊಂಬಾರ್ಡ್‌ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಕ್ಯೂಬಾದ 52 ವೈದ್ಯರ ಬಲಿಷ್ಠ ತಂಡವು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಇಟಲಿಗೆ ತುರ್ತು ದಳವನ್ನು ಕಳುಹಿಸಿದ್ದು ಇದೇ ಮೊದಲಾಗಿದೆ. “ನಮಗೆಲ್ಲರಿಗೂ ಹೆದರಿಕೆಯಿದೆ. ಆದರೆ ನಮಗೆ ಒಂದು ಕ್ರಾಂತಿಕಾರಿ ಕರ್ತವ್ಯವಿದೆ, ಆದ್ದರಿಂದ ನಾವು ಭಯವನ್ನು ಬದಿಗೆ ಇಡುತ್ತೇವೆ” ಎಂದು 68 ವರ್ಷದ ತೀವ್ರ ನಿಗಾ ತಜ್ಞ ಲಿಯೊನಾರ್ಡೊ ಫರ್ನಾಂಡೀಸ್ ತಿಳಿಸಿದ್ದಾರೆ.

ವಿಡಿಯೋ ನೋಡಿ:

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಇಟಲಿಗೆ ಬಂದಿಳಿದ ಕ್ಯೂಬಾದ ವೈದ್ಯರ ತಂಡಕ್ಕೆ ಅಭೂತಪೂರ್ವ ಸ್ವಾಗತ..

Posted by Naanu Gauri on Monday, March 23, 2020

ವಿದೇಶದಲ್ಲಿ ಹೊಸ ರೋಗ ಹರಡುವುದನ್ನು ಎದುರಿಸಲು ಕ್ಯೂಬಾ ಇತ್ತೀಚಿನ ದಿನಗಳಲ್ಲಿ ಕಳುಹಿಸಿದ ಆರನೇ ವೈದ್ಯಕೀಯ ತಂಡ ಇದಾಗಿದೆ. ಇದು ಸಮಾಜವಾದಿ ಮಿತ್ರರಾಷ್ಟ್ರಗಳಾದ ವೆನೆಜುವೆಲಾ, ನಿಕರಾಗುವಾ, ಜಮೈಕಾ, ಸುರಿನಾಮ್ ಮತ್ತು ಗ್ರೆನಡಾಗಳಿಗೆ ತನ್ನ ತುಕಡಿಗಳನ್ನು ಕಳುಹಿಸಿದೆ.

ತಂಡದ ಮುಖ್ಯಸ್ತರಾದ ಲಿಯೊನಾರ್ಡೊ ಫರ್ನಾಂಡೀಸ್ ತನ್ನ ತನ್ನ ತಂಡದ ನಿರ್ಗಮನಕ್ಕೆ ಮೊದಲು “ತಾನು ಹೆದರುವುದಿಲ್ಲ ಎಂದು ಹೇಳುವವನು ಸೂಪರ್ ಹೀರೋ, ಆದರೆ ನಾವು ಸೂಪರ್ ಹೀರೋಗಳಲ್ಲ, ಕ್ರಾಂತಿಕಾರಿ ವೈದ್ಯರು” ಎಂದು ಹೇಳಿದ್ದಾರೆ. ಎಬೊಲಾ ವಿರುದ್ಧದ ಹೋರಾಟದ ಸಮಯದಲ್ಲಿ ಲೈಬೀರಿಯಾ ಸೇರಿದಂತೆ ಇದು ಅವರ ಎಂಟನೇ ಅಂತರರಾಷ್ಟ್ರೀಯ ಮಿಷನ್ ಎಂದು ಫರ್ನಾಂಡೀಸ್ ಹೇಳಿದ್ದಾರೆ.

ಚೀನಾದಲ್ಲಿ ಹುಟ್ಟಿದ ಸಾಂಕ್ರಾಮಿಕ ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ದೇಶ ಇಟಲಿಯಗಿದೆ. ಅಲ್ಲಿ ಸಾವಿನ ಸಂಖ್ಯೆ ಶನಿವಾರ 546 ರಿಂದ 3,095 ಕ್ಕೆ ಏರಿದೆ ಎಂದು ತಿಳಿದುಬಂದಿದೆ.

ಬ್ರಿಟಿಷ್ ಕ್ರೂಸ್ ಹಡಗನ್ನು ದ್ವೀಪದಲ್ಲಿ ಕಟ್ಟಲು ಅನುಮತಿಸಿದ್ದಕ್ಕಾಗಿ ಮತ್ತು ವಿಮಾನದಲ್ಲಿ 600 ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳಾಂತರಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಬ್ರಿಟನ್ ಕಳೆದ ವಾರ ಕ್ಯೂಬಾಗೆ ಧನ್ಯವಾದ ಅರ್ಪಿಸಿತ್ತು.

ವಿಪತ್ತು ಸನ್ನದ್ಧತೆಗೆ ಹೆಸರುವಾಸಿಯಾದ ಕ್ಯೂಬಾ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತನ್ನ ದೇಶದಲ್ಲಿಯೂ ಅಗತ್ಯ ಕ್ರಮಗಳನ್ನು ಹೆಚ್ಚಿಸುತ್ತಿದೆ. ಈವರೆಗೆ ಅಲ್ಲಿ ಇಪ್ಪತ್ತೈದು ಪ್ರಕರಣಗಳು ದೃಡಪಟ್ಟಿವೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here