Homeಮುಖಪುಟ‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI - ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI – ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

- Advertisement -
- Advertisement -

ಬುಧವಾರ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತರಾತುರಿಯಲ್ಲಿ ಒಂದು ಹೇಳಿಕೆ ಬಿಡುಗಡೆ ಮಾಡಿ, ಆಧಾರ್ ಪೌರತ್ವ ದಾಖಲೆಯಲ್ಲ ಮತ್ತು ಪೌರತ್ವದ ಕುರಿತಾಗಿ ತನಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಲು ಹೋದ ಯುಐಡಿಎಐ, ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೈದರಾಬಾದಿನ ಪೊಲೀಸರು, 127 ಜನರನ್ನು (ಎಲ್ಲರೂ ಮುಸ್ಲಿಮರು) ಅಕ್ರಮ ವಲಸೆಗಾರರು ಎಂದು ಗುರುತಿಸಿ, ಇವರೆಲ್ಲರ ಆಧಾರ್ ಕಾರ್ಡ್‌ಗೆ ಕ್ರಮಬದ್ಧವಾದ ದಾಖಲೆ ಇವೆಯೇ? ಇಲ್ಲದಿದ್ದರೆ ಇವರ ಆಧಾರ್ ಕಾರ್ಡ್ ರದ್ದು ಮಾಡಿ ಎಂದು ಯುಐಡಿಎಐಗೆ ಪತ್ರ ಬರೆದಿದ್ದರು.

127 ಜನರು ಆಧಾರ್ ಪಡೆಯಲು ಸೂಕ್ತ ದಾಖಲೆ ನೀಡಿದ್ದಾರೋ ಇಲ್ಲವೋ, ಅದರಲ್ಲಿ ಫೋರ್ಜರಿ ಆಗಿದೆಯಾ ಅಥವಾ ಅನಧಿಕೃತ ಮೂಲಗಳಿಂದ ದಾಖಲೆ ಪಡೆದಿರುವರಾ ಎಂದು ಚೆಕ್ ಮಾಡಿ, ಅಲ್ಲಿ ಅಕ್ರಮ ಕಂಡು ಬಂದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ರದ್ದು ಮಾಡಬೇಕಾಗಿತ್ತು.

ಆದರೆ, ತನ್ನ ಅಧಿಕಾರ ವ್ಯಾಪ್ತಿ ಮೀರಿದ ಯುಐಡಿಎಐ, ನೀವು ಭಾರತೀಯ ಪೌರತ್ವ ಹೊಂದಿದ್ದೀರಾ? ಅಕ್ರಮ ವಲಸೆ ಬಂದಿದ್ದೀರಾ ಎಂದೆಲ್ಲ ನೋಟಿಸ್ ನೀಡುವ ಮೂಲಕ ಈಗಾಗಲೇ ಪೌರತ್ವದ ದಾಖಲೆಗಳ ಕುರಿತು ಎದ್ದಿರುವ ಗೊಂದಲವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಯುಐಡಿಎಐ ಮತ್ತು ಹೈದರಾಬಾದ್ ಪೊಲೀಸರ ನಡೆ 127 ಜನರ ಕುಟುಂಬಗಳಿಗೆ ಮಾರಕವಾಗಿ ಪರಿಣಮಿಸಿದೆ.

2016ರ ಆಧಾರ್‌ ಆ್ಯಕ್ಟ್ ಯುಐಡಿಎಐಗೆ ನೀಡಿರುವ ಅಧಿಕಾರ ಸಿಮೀತ ಸ್ವರೂಪದ್ದು ಅಷ್ಟೇ. ಈ ಆ್ಯಕ್ಟ್‌ನ 9ನೇ ಸೆಕ್ಷನ್ ಪ್ರಕಾರ, ಆಧಾರ್ ಯಾವುದೇ ಬಗೆಯ ಪೌರತ್ವ ಅಥವಾ ವಲಸೆಗೆ ಸಂಬಂಧಿಸಿದ ದಾಖಲೆಯಲ್ಲ. ಆಧಾರ್ ಪಡೆಯಲು ನೀಡಿದ ದಾಖಲೆಗಳು ಅಸಮರ್ಪಕ ಅಥವಾ ನಕಲಿಯಾಗಿದ್ದಾಗ ಮಾತ್ರ ಯುಐಡಿಎಐ ಅಂತಹ ಆಧಾರ್ ಸಂಖ್ಯೆಯನ್ನು ರದ್ದು ಮಾಡಬಹುದು ಅಷ್ಟೇ. ಸೆಕ್ಷನ್ 3ರ ಪ್ರಕಾರ, ವಾಸದ ವಿಳಾಸದ ದಾಖಲೆ ಇದ್ದರೆ ಸಾಕು, ಆಧಾರ್ ಪಡೆಯಬಹುದು. ವಿದೇಶದಿಂದ ಬಂದು ಇಲ್ಲಿ ಆರು ತಿಂಗಳು ನೆಲೆಸಿದವರಿಗೂ ಆಧಾರ್ ಸಿಗುತ್ತದೆ. ಹೀಗಿರುವಾಗ ಯುಐಡಿಐಎ ಅಕ್ಟ್‌ ವಲಸೆ ವಿಚಾರದಲ್ಲಿ ಮೂಗು ತೂರಿಸಿ, ಜನರ ಪೌರತ್ವವನ್ನು ಪ್ರಶ್ನಿಸಲು ಹೊರಟಿದೆ.

ಇಲ್ಲಿ ಒಂದಿಷ್ಟು ಪ್ರಶ್ನೆಗಳು ಏಳುತ್ತವೆ: 2018ರ ಜೂನ್‌ನಲ್ಲಿ ಯುಐಡಿಎಐ ಸ್ಪಷ್ಟಪಡಿಸಿದಂತೆ, ಒಟ್ಟು ಆಧಾರ್ ನೋಂದಣಿ ಪೈಕಿ ಶೇ.38ರಷ್ಟು ನೋಂದಣಿ ವಿವರಗಳು (ಗುರುತು ಮತ್ತು ವಿಳಾಸದ ದಾಖಲೆ) ತನಗೆ ಲಭ್ಯ (access) ಆಗುತ್ತಿಲ್ಲ ಎಂದಿತ್ತು. ಈ 127 ಜನರು ‘ಆ ಲಭ್ಯವಿಲ್ಲದ’ ನೋಂದಣಿಯಲ್ಲಿರಬಹುದೇ ಎಂದು ಹೇಗೆ ದೃಢೀಕರಿಸುತ್ತಾರೆ? ನಿಮ್ಮ ದಾಖಲೆಗಳನ್ನು ಸಲ್ಲಿಸಿ ಅವು ಅಸಲಿ ಎಂದು ರುಜುವಾತು ಮಾಡಿ ಎಂದಷ್ಟೇ 127 ಜನರಿಗೆ ಸೂಚಿಸಿದ್ದರೆ ಸಾಕಿತ್ತು. ಆದರೆ ಒಂದು ಹೆಜ್ಜೆ ಮುಂದೆ ಹೋದ ಯುಐಡಿಎಐ, ವಲಸೆ, ಪೌರತ್ವದ ಪ್ರಶ್ನೆ ಎತ್ತಿ ವಿವಾದಕ್ಕೆ ಈಡಾಗಿದೆ.

ಹೈದರಾಬಾದ್ ಪೊಲೀಸರಿಗೆ 127 ಜನ ಅಕ್ರಮ ವಲಸೆಗಾರರು ಎಂಬ ಸಂಶಯ ಬಂದಿದ್ದರೆ, ಅವರು ವಿವರಣೆ ಪಡೆಯಬೇಕಾದುದು ಆಧಾರ್ ಕುರಿತಲ್ಲ ಮತ್ತು ಯುಐಡಿಎಐನಿಂದಲ್ಲ. ಅವರು ವಲಸೆ ವಿಭಾಗವನ್ನು ಸಂಪರ್ಕಿಸಿ, ವಿದೇಶಿಗರ ಆ್ಯಕ್ಟ್ ಅಡಿ 127 ಜನ ಅಕ್ರಮ ವಲಸಿಗರೇ ಎಂಬುದನ್ನು ಪರೀಕ್ಷಿಸಿ ಎಂದು ಕೇಳಬೇಕಿತ್ತು. ಆಮೇಲೆ ಆಧಾರ್ ರದ್ದಿನ ವಿಷಯ ನೋಡಬೇಕಿತ್ತು.

ಈಗ ನೋಡಿ, ಸರಿಯಾದ ವಿಚಾರಣೆಯಿಲ್ಲದೇ ಅಥವಾ ವಿಚಾರಣೆ ಮುಗಿಯುವವರೆಗೆ ಕಾಯದೆ 127 ಜನರ ಆಧಾರ್ ಕಿತ್ತುಕೊಂಡು ಬಿಟ್ಟರೆ, 127 ಕುಟುಂಬಗಳು ರೇಷನ್‌ನಿಂದ ಹಿಡಿದು ಚಿಕಿತ್ಸೆವರೆಗೆ ಎಲ್ಲ ಸೌಲಭ್ಯ ಕಳೆದುಕೊಳ್ಳಲಿವೆ.

ಅಕ್ರಮ ವಲಸಿಗರಾ ಎಂದು ಕೇಳಲು ಈ ಯುಐಡಿಎಐ ಯಾರು? ಅಕ್ರಮ ವಲಸೆಗಾರರ ವಿಷಯವನ್ನು ವಲಸೆ ವಿಭಾಗಕ್ಕೆ ತಲುಪಿಸಬೇಕಿದ್ದ ಪೊಲೀಸರು, ಯುಐಡಿಎಐ ಮೊರೆ ಹೋದರೇಕೆ? ಈಗಲೇ ಹೀಗೆ, ಈ ಎನ್‌ಪಿಆರ್, ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ಬಂದರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...