Homeಮುಖಪುಟವಲಸೆ ಕಾರ್ಮಿಕರಿಗೆ ಬಡಿಯುವುದು ಗುಜರಾತ್‌ ಮಾದರಿಯೇ? ಆಪ್‌ ಸಂಸದ ಸಂಜಯ್‌ ಪ್ರಶ್ನೆ

ವಲಸೆ ಕಾರ್ಮಿಕರಿಗೆ ಬಡಿಯುವುದು ಗುಜರಾತ್‌ ಮಾದರಿಯೇ? ಆಪ್‌ ಸಂಸದ ಸಂಜಯ್‌ ಪ್ರಶ್ನೆ

- Advertisement -
- Advertisement -

ಬಡ ವಲಸೆ ಕಾರ್ಮಿಕರಿಗೆ ಪ್ರಾಣಿಗಳ ರೀತಿ ಬಡಿಯುವುದು ಬಿಜೆಪಿಯ ಗುಜರಾತ್‌ ಮಾದರಿಯೇ? ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ‌ ಸಂಸದರಾದ ಸಂಜಯ್‌ ಸಿಂಗ್‌ ಪ್ರಶ್ನಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿರುವ ಅವರು ಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾಣಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೊಟ್ಟಿಗಳನ್ನು ನೀಡಬೇಕಾದ ಬಡ ಕಾರ್ಮಿಕರಿಗೆ ಲಾಠಿಗಳಿಂದ ಹೊಡೆಸುತ್ತಿದ್ದೀರಲ್ಲ ವಿಜಯ್ ರೂಪಾಣಿಯವರೆ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಸಂಜಯ್‌ ಸಿಂಗ್‌ ಟೀಕಿಸಿದ್ದಾರೆ.

ಅವರು ಟ್ವೀಟ್‌ ಮಾಡಿರುವ ವಿಡಿಯೋದಲ್ಲಿ ಟ್ರಕ್‌ ಒಂದರ ಒಳಗ ಕುಳಿತಿರುವ ವಲಸೆ ಕಾರ್ಮಿಕರಿಗೆ ಲಾಠಿಗಳಿಂದ ಪೊಲೀಸರು ಮನಬಂದಂತೆ ಹೊಡೆಯುತ್ತಾರೆ. ಅಲ್ಲದೇ ಕಾರ್ಮಿಕರನ್ನು ಹೊರಗೆಳೆದು ಬಡಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸುಮಾರು 30ಕ್ಕೂ ಹೆಚ್ಚು ಪೊಲೀಸರು ವಲಸೆ ಕಾರ್ಮಿಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದಕ್ಕೆ ಹಲವಾರು ಜನ ಗುಜರಾತ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ಬಿಜೆಪಿಯ ಗುಜರಾತ್‌ ಮಾದರಿ. ಬಡ ವಲಸೆ ಕಾರ್ಮಿಕರನ್ನು ಪ್ರಾಣಿಗಳ ರೀತಿಯಲ್ಲಿ ಹಿಂಸಿಸಲಾಗುತ್ತಿದೆ ಎಂದು ಸಂಜಯ್‌ ಸಿಂಗ್‌ ಟ್ವೀಟ್‌ ಅನ್ನು ಸಾಕಷ್ಟು ಜನರು ಹಂಚಿಕೊಂಡಿದ್ದಾರೆ.

ನಿನ್ನೆ ಸಹ ಕೊರೊನಾ ರೋಗಿಯೊಬ್ಬರ ಶವವು ಅಹಮದಾಬಾದಿನ ರಸ್ತೆಯಲ್ಲಿ ಪತ್ತೆಯಾದ ನಂತರ ಶಾಸಕರಾದ ಜಿಗ್ನೇಶ್‌ ಮೇವಾನಿಯವರು ಮುಖ್ಯಮಂತ್ರಿ ವಿಜಯ್‌ ರೂಪಾಣಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.


ಇದನ್ನೂ ಓದಿ: ರಸ್ತೆಯಲ್ಲಿ ಕೊರೊನಾ ಸೋಂಕಿತರ ಶವ: ಗುಜರಾತ್‌ ಮಾಡೆಲ್ ಧ್ವಂಸ ಮಾಡಬೇಕೆಂದು ಜಿಗ್ನೇಶ್‌ ಮೇವಾನಿ ಆಕ್ರೋಶ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...