ಮಾಸ್ಕ್ ಧರಿಸಲು ಹೇಳಿದ ಮಹಿಳಾ ಅಧಿಕಾರಿಯ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ದಾಖಲು, ಆರೋಪಿ ಬಂಧನ

“ಮಹಿಳೆಯರ ಮೇಲಿನ ಅಪರಾಧ ಸ್ವೀಕಾರಾರ್ಹವಲ್ಲ. ನೆಲ್ಲೂರು ಘಟನೆಯನ್ನು ನಾವು ಖಂಡಿಸುತ್ತೇವೆ ಮತ್ತು ಮಹಿಳಾ ಅಧಿಕಾರಿಯ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ”

0

ಕೋವಿಡ್ -19 ನಿಯಮವಳಿಗಳ ಭಾಗವಾಗಿ ಫೇಸ್ ಮಾಸ್ಕ್ ಧರಿಸಲು ಹೇಳಿದ್ದಕ್ಕಾಗಿ ಮಹಿಳಾ ಸಹೋದ್ಯೋಗಿಯನ್ನು ಕೋಲಿನಿಂದ ಹೊಡೆದು ನಿಂದಿಸಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಆರೋಪಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಉದ್ಯೋಗಿಯಾಗಿದ್ದು, ಅವರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮಧ್ಯಾಹ್ನ ನೆಲ್ಲೂರು ಪಟ್ಟಣದ ದರ್ಗಮಿಟ್ಟಾದ ಎಪಿ ಟೂರಿಸಂ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೋಟೆಲ್‌ನ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾಗಳಿಂದ ಪಡೆದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

“ಎಪಿ ಪ್ರವಾಸೋದ್ಯಮ ಹೋಟೆಲ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ಸಿ ಭಾಸ್ಕರ್ ಅವರನ್ನು ನಾವು ಬಂಧಿಸಿದ್ದೇವೆ ಮತ್ತು ಅವರನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಸೆಕ್ಷನ್ 354, 355 (ವ್ಯಕ್ತಿಯನ್ನು ಅವಮಾನಿಸಲು ಬಲವನ್ನು ಬಳಸುವುದು) ಮತ್ತು 324 (ಶಸ್ತ್ರಾಸ್ತ್ರ ಬಳಸಿ ಗಾಯಗಳಿಗೆ ಕಾರಣ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ”ಎಂದು ದರ್ಗಮಿಟ್ಟಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆ ವೇಣುಗೋಪಾಲ್ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಭಾಸ್ಕರ್ ಅವರು ತಮ್ಮ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ 43 ವರ್ಷದ ಮಹಿಳೆ ವಿರುದ್ಧ ಹಗೆತನ ಸಾಧಿಸುತ್ತಿದ್ದರು ಎನ್ನಲಾಗಿದೆ.

ಶನಿವಾರ, ಭಾಸ್ಕರ್ ಹಿರಿಯ ಅಕೌಂಟೆಂಟ್ ನರಸಿಂಹ ರಾವ್ ಅವರೊಂದಿಗೆ ಮಾಸ್ಕ್ ಧರಿಸದೆ ಮಾತನಾಡುತ್ತಿದ್ದಾಗ, ಕೋವಿಡ್ -19 ಪರಿಸ್ಥಿತಿಯಿಂದಾಗಿ ಆ ಮಹಿಳೆಯು ಮಾಸ್ಕ್ ಧರಿಸಲು ಸೂಚಿಸಿದ್ದರು ಎನ್ನಲಾಗಿದೆ.

“ಇದರಿಂದ ಕೋಪಗೊಂಡ ಭಾಸ್ಕರ್ ಅವಳನ್ನು ನಿಂದಿಸಿದ್ದಾನೆ, ಅವಳನ್ನು ಕುರ್ಚಿಯಿಂದ ಎಳೆದೊಯ್ದನು, ಅವಳ ಕೂದಲನ್ನು ಹಿಡಿದು ಕೋಲಿನಿಂದ ಅವಳ ಮುಖ ಮತ್ತು ತಲೆಗೆ ಹೊಡೆಯಲು ಪ್ರಾರಂಭಿಸಿದನು. ಅವನು ಇತರರ ಮುಂದೆ ಅವಳನ್ನು ಅವಮಾನಿಸಿದನು” ಎಂದು ದೂರನ್ನು ಉಲ್ಲೇಖಿಸಿ ಎಸ್‌ಐ ಹೇಳಿದ್ದಾರೆ.

ಇತರ ಸಹೋದ್ಯೋಗಿಗಳು ಅವಳ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಬಹಳ ಪ್ರಯತ್ನಿಸಿದರೂ, ಅವನು ಅವಳನ್ನು ಹೊಡೆಯುತ್ತಿದ್ದನು. ನಂತರ ಮಹಿಳೆ ಇತರ ಸಹೋದ್ಯೋಗಿಗಳ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

ನೆಲ್ಲೂರು ಪ್ರವಾಸೋದ್ಯಮ ಹೋಟೆಲ್ ಘಟನೆಯ ತನಿಖೆಯನ್ನು ಕೈಗೆತ್ತಿಕೊಳ್ಳಲು ಮತ್ತು ಒಂದು ವಾರದೊಳಗೆ ಚಾರ್ಜ್‌ಶೀಟ್ ಸಲ್ಲಿಸುವಂತೆ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌತಮ್ ಸಾವಂಗ್ ದಿಶಾ ಪೊಲೀಸ್ ಠಾಣೆಗೆ (ಮಹಿಳೆಯರ ಮೇಲಿನ ಅಪರಾಧಗಳನ್ನು ಎದುರಿಸಲು ವಿಶೇಷ ಪೊಲೀಸ್ ಠಾಣೆ) ನಿರ್ದೇಶಿಸಿದ್ದಾರೆ.

“ಮಹಿಳೆಯರ ಮೇಲಿನ ಅಪರಾಧ ಸ್ವೀಕಾರಾರ್ಹವಲ್ಲ. ನೆಲ್ಲೂರು ಘಟನೆಯನ್ನು ನಾವು ಖಂಡಿಸುತ್ತೇವೆ ಮತ್ತು ಮಹಿಳಾ ಅಧಿಕಾರಿಯ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here