ಬೆಂಗಳೂರು: 99 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಗುಣಮುಖ

ತುಮಕೂರು: ಕೊರೊನಾ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ; ವೀಡಿಯೊ ವೈರಲ್

ವಯಸ್ಸಾಗಿರುವವರಿಗೆ ಕೊರೊನಾ ಸೋಂಕು ಅತೀ ಅಪಾಯಕಾರಿಯಾಗಿದೆ ಎಂದು ವೈದ್ಯಲೋಕ ಹೇಳುತ್ತಿದ್ದರೂ, ಬೆಂಗಳೂರಿನಲ್ಲಿ 99 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ ಎಂದು ವರದಿಯಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ಆಘಾತ ಮತ್ತು ತುರ್ತು ಆರೈಕೆ ಕೇಂದ್ರದ ನೋಡಲ್ ಅಧಿಕಾರಿ ಡಾ.ಅಸಿಮಾ ಬಾನು, “ಮಹಿಳೆಯೂ ಕಳೆದ ವಾರ ದಾಖಲಾಗಿದ್ದರು ಮತ್ತು ನಮ್ಮ ಆಸ್ಪತ್ರೆಯಲ್ಲಿ ವೈರಸ್‌ನಿಂದ ಚೇತರಿಸಿಕೊಂಡ ಅತ್ಯಂತ ಹಿರಿಯ ರೋಗಿಯಾಗಿದ್ದಾರೆ” ಎಂದು ಹೇಳಿದ್ದಾರೆ.

ಅಧಿಕ ರಕ್ತದೊತ್ತಡದಂತಹ ವೃದ್ಧಾಪ್ಯಕ್ಕೆ ಸಂಬಂಧಿಸಿದ ಕೊಮೊರ್ಬಿಡಿಟಿಗಳನ್ನು ಹೊಂದಿದ್ದ ಅವರು ತಮ್ಮ ಕುಟುಂಬದ ಸದಸ್ಯರು ಕೊರೊನಾ ಪಾಸಿಟಿವ್ ಆದಾಗ ಅವರಿಂದಾಗಿ ಸೋಂಕಿಗೆ ತುತ್ತಾಗಿದ್ದರು. ತೀವ್ರವಾದ ಉಸಿರಾಟದ ಕಾಯಿಲೆಯ ಲಕ್ಷಣಗಳೊಂದಿಗೆ ದಾಖಲಿಸಲಾದ ಅವರನ್ನು ಸಾಮಾನ್ಯ ರೋಗಿಗಳಿಗೆ ನೀಡಲಾಗುವ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗಿತ್ತು.

ಕೋವಿಡ್ -19 ಪ್ರಕರಣಗಳ ವಿಶೇಷ ಅಧಿಕಾರಿ ಡಾ. ಕೆ ವಿ ತ್ರಿಲೋಕ್ ಚಂದ್ರ “ಕೊರೊನಾ ಪ್ರಕರಣಗಳು ತಡವಾಗಿ ವರದಿಯಾಗಿರುವುದರಿಂದ ಅಪಾಯ ಹೆಚ್ಚಿರುತ್ತದೆ. ಅನಿಯಂತ್ರಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಹೊಂದಿರುವ ಪ್ರಕರಣಗಳು ಮೊದಲು ಇತರ ಆಸ್ಪತ್ರೆಗಳಿಗೆ ಹೋಗಿ ನಂತರ ಸರ್ಕಾರಕ್ಕೆ ವರದಿ ಮಾಡಿದ ಸಂದರ್ಭಗಳಲ್ಲಿ ಸಾವುನೋವುಗಳು ಸಂಭವಿಸುತ್ತವೆ. ಈ ಪ್ರಕರಣದಲ್ಲಿ ಮಹಿಳೆಯೂ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದರು” ಎಂದು ಹೇಳಿದ್ದಾರೆ.


ಓದಿ: ಪೌರಕಾರ್ಮಿಕರಿಗೂ ಕೊರೊನ ಸೋಂಕು; ಸಮುದಾಯದ ನಡುವೆ ಹರಡುವ ಆತಂಕದಲ್ಲಿ ಕುಟುಂಬಗಳು


Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here