Homeಕರ್ನಾಟಕಶುಲ್ಕ ಪಾವತಿಸದಿದ್ದರೆ ದಾಖಲಾತಿ ರದ್ದು ಬೆದರಿಕೆ: ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ಖಾಸಗಿ ಶಾಲೆಗಳು

ಶುಲ್ಕ ಪಾವತಿಸದಿದ್ದರೆ ದಾಖಲಾತಿ ರದ್ದು ಬೆದರಿಕೆ: ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ಖಾಸಗಿ ಶಾಲೆಗಳು

ಏಪ್ರಿಲ್ 28 ರ ಸುತ್ತೋಲೆಯಯಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರ್ಥಿಕ ಸಂಕಷ್ಟಗಳನ್ನು ಉಲ್ಲೇಖಿಸಿ ಪ್ರತಿವರ್ಷ ಹೆಚ್ಚಿಸುವ 15% ಶುಲ್ಕವನ್ನು ಹೆಚ್ಚಿಸದಂತೆ ಶಾಲೆಗಳನ್ನು ಕೇಳಿದೆ.

- Advertisement -
- Advertisement -

ಈ ವರ್ಷ ಶಾಲಾ ಶುಲ್ಕವನ್ನು ಹೆಚ್ಚಿಸಬೇಡಿ ಎಂದು ರಾಜ್ಯ ಸರ್ಕಾರ ಶಾಲೆಗಳನ್ನು ಕೇಳಿದ್ದರೂ, ಬೆಂಗಳೂರಿನ ಹೊರಮಾವುವಿನ ವಿಬ್ಗಯರ್ ಶಾಲೆ ಶುಲ್ಕವನ್ನು ಹೆಚ್ಚಿಸಿದೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸಿದ್ದಾರೆ. ಇದಲ್ಲದೆ, ನಿರ್ದಿಷ್ಟ ಅವಧಿಯೊಳಗೆ ಶಾಲಾ ಶುಲ್ಕ ಪಾವತಿಸಲು ವಿಫಲವಾದರೆ ತಮ್ಮ ಮಕ್ಕಳ ದಾಖಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಬೆದರಿಸಿ ಪೋಷಕರಿಗೆ ನೊಟೀಸ್ ಕಳುಹಿಸಲಾಗಿದೆ.

ರಾಜ್ಯಸರ್ಕಾರದ ಆದೇಶದ ಉಲ್ಲಂಘಿಸಿ ಶಾಲೆಯು ಶುಲ್ಕ ಸಂಗ್ರಹಿಸುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ವಿಬ್ಗಯರ್ ಶಾಲೆಯ ಪ್ರಾಂಶುಪಾಲರು ಜುಲೈ 1 ರಂದು ಕಳುಹಿಸಿದ ನೋಟಿಸ್ ಅನ್ನು (ಸುತ್ತೋಲೆ ಸಂಖ್ಯೆ VH43-CIRNO2489) ಪೋಷಕರು ಹಂಚಿಕೊಂಡಿದ್ದಾರೆ, ಇದರಲ್ಲಿ “ಈ ಶೈಕ್ಷಣಿಕ ವರ್ಷಕ್ಕೆ ಕೆಲವು ಪೋಷಕರು ಯಾವುದೇ ಶುಲ್ಕವನ್ನು ಪಾವತಿಸಿಲ್ಲ. ಇದರಿಂದ ನಮ್ಮ ಶಾಲೆಯಲ್ಲಿ ನಿಮ್ಮ ಮಗು ಮುಂದುವರಿಯುವುದಕ್ಕೆ ನಿಮಗೆ ಆಸಕ್ತಿ ಹೊಂದಿಲ್ಲ ಎಂದು ಊಹಿಸಲಾಗುವುದು. ಇದರ ಪರಿಣಾಮವಾಗಿ, 2020-21ರ ಶೈಕ್ಷಣಿಕ ವರ್ಷಕ್ಕೆ  2020 ರ ಜುಲೈ 13 ರಿಂದ ದಾಖಲಾತಿ ರದ್ದು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ನೀವು ಇನ್ನೂ ನಮ್ಮ ಶಾಲೆಯಲ್ಲಿ ಮುಂದುವರಿಯಲು ಬಯಸಿದರೆ, ಬಾಕಿ ಹಣವನ್ನು ತಕ್ಷಣ ಪಾವತಿಸಲು ನಾವು ವಿನಂತಿಸುತ್ತೇವೆ.” ಎಂದು ಬರೆಯಲಾಗಿದೆ.

ಪ್ರಸ್ತುತ ಆರೋಪಗಳ ಬಗ್ಗೆ ಶಾಲೆಯ ಪ್ರತಿನಿಧಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಲಾ ಆಡಳಿತ ಮಂಡಳಿಯು ಪೋಷಕರೊಂದಿಗೆ ನೇರವಾಗಿ ನಿಭಾಯಿಸುತ್ತದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರ್ಥಿಕ ತೊಂದರೆಯಿಂದಾಗಿ ಪ್ರಸ್ತುತ ವರ್ಷದ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಪೋಷಕರಿಗೆ ಶಾಲೆಯು ಯಾವ ರಿಯಾಯಿತಿಗಳನ್ನು ನೀಡಿದೆ ಎಂಬುದು ಸಹ ಸ್ಪಷ್ಟವಾಗಿಲ್ಲ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ಏಪ್ರಿಲ್ 28 ರ ಸುತ್ತೋಲೆಯಯಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರ್ಥಿಕ ಸಂಕಷ್ಟಗಳನ್ನು ಉಲ್ಲೇಖಿಸಿ ಪ್ರತಿವರ್ಷ ಹೆಚ್ಚಿಸುವ 15% ಶುಲ್ಕವನ್ನು ಹೆಚ್ಚಿಸದಂತೆ ಶಾಲೆಗಳನ್ನು ಕೇಳಿದೆ. ಇಲಾಖೆಯು ತರುವಾಯ ಇದೇ ವಿಷಯದ ಬಗ್ಗೆ ಸಹಾಯವಾಣಿ ಮತ್ತು ದೂರು ವಿಭಾಗಗಳನ್ನು ಪ್ರಾರಂಭಿಸಿತ್ತು. ವರದಿಗಳ ಪ್ರಕಾರ, ಮೇ ಅಂತ್ಯದ ವೇಳೆಗೆ ಸುಮಾರು 1,000 ದೂರುಗಳು ದಾಖಲಾಗಿವೆ.

ಮೇ 19 ರಂದು ಇಲಾಖೆ ಹೊರಡಿಸಿದ ಮತ್ತೊಂದು ಟಿಪ್ಪಣಿಯಲ್ಲಿ ಶಾಲೆಗಳು ಸಾಧ್ಯವಿರುವ ಪೋಷಕರಿಂದ ಮಾತ್ರ ಶುಲ್ಕವನ್ನು ಸಂಗ್ರಹಿಸಬಹುದು ಮತ್ತು ಕಳೆದ ವರ್ಷ ವಿಧಿಸಲಾಗಿದ್ದ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಿಲ್ಲ ಮತ್ತು ಆರ್ಥಿಕವಾಗಿ ತೊಂದರೆಗೀಡಾದ ಪೋಷಕರಿಗೆ ಅವರು ರಿಯಾಯಿತಿ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿದೆ.

“ಸರ್ಕಾರದಿಂದ ಸ್ಪಷ್ಟವಾದ ಸೂಚನೆಗಳ ಹೊರತಾಗಿಯೂ, ಶಾಲೆಯು ಶುಲ್ಕವನ್ನು ಹೆಚ್ಚಿಸಿದೆ. ಮುಂದಿನ ತರಗತಿಯ ಶುಲ್ಕವು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳುತ್ತದೆ. ಕಳೆದ ವರ್ಷಕ್ಕಿಂತ 68,000 ರೂ. ಹೆಚ್ಚು ಪಾವತಿಸಲು ನಾನು ಸಿದ್ಧನಾಗಿದ್ದೇನೆ” ಎಂದು ಪೋಷಕರೊಬ್ಬರು ಹೇಳಿದ್ದಾರೆ.


ಓದಿ: ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...