Homeಮುಖಪುಟಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್(42) ನಿಧನ

ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್(42) ನಿಧನ

- Advertisement -
- Advertisement -

ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (42) ಇಂದು ಮುಂಜಾನೆ ನಿಧನರಾಗಿದ್ದಾರೆ. ಗಾಯಕ ಸೋನು ನಿಗಮ್ ಇನ್‌ಸ್ಟಾಗ್ರಾಂನಲ್ಲಿ ಇದನ್ನು ಪ್ರಕಟಿಸಿದ್ದು, ನನ್ನ ಸಹೋದರ ವಾಜಿದ್ ನಮ್ಮನ್ನಗಲಿದ್ದಾರೆ ಎಂದು ಹೇಳಿದ್ದಾರೆ.

ವಾಜಿದ್‌ಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿತ್ತು ಎಂದು ಸೋನು ನಿಗಮ್ ದೃಢಪಡಿಸಿದ್ದಾಗಿ ಪತ್ರಕರ್ತ ಫರಿದೂನ್ ಶಹರಿಯಾರ್ ಟ್ವೀಟ್ ಮಾಡಿದ್ದಾರೆ.

ಅವರಿಗೆ ಹಲವಾರು ಆರೋಗ್ಯ ಸಮಸ್ಯೆ ಇದ್ದು, ಕಿಡ್ನಿ ಕಸಿ ನಡೆದಿತ್ತು ಎನ್ನಲಾಗಿದೆ. ಇತ್ತೀಚೆಗೆ ಅವರಿಗೆ ಕಿಡ್ನಿ ಸೋಂಕು ಕೂಡಾ ತಗುಲಿತ್ತು. ಕಳೆದ ನಾಲ್ಕು ದಿನಗಳಿಂದ ಅವರು ವೆಂಟಿಲೇಟರ್‌ನಲ್ಲಿದ್ದರೆಂದು ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

View this post on Instagram

My Brother Wajid left us.

A post shared by Sonu Nigam (@sonunigamofficial) on

ವಾಜಿದ್ ನಿಧನಕ್ಕೆ ಮಹಾರಾಷ್ಟ್ರ ಸರ್ಕಾರದ ಸಚಿವರು ಸೇರಿದಂತೆ, ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ ಪರಿಣಿತಿ ಚೋಪ್ರ “ವಾಜಿದ್ ಭಾಯ್ ನೀವು ಒಳ್ಳೆಯ ಮನುಷ್ಯ. ಯಾವಾಗಲೂ ನಗುತ್ತಾ,  ಹಾಡುತ್ತಿದ್ದವರು” ಎಂದು ಟ್ವೀಟ್ ಮಾಡಿದ್ಧಾರೆ.

ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ” ವಾಜಿದ್ ಖಾನ್ ಅವರ ನಿಧನದ ಸುದ್ದಿಗೆ ಆಘಾತಕ್ಕೊಳಗಾಗಿದ್ದೇನೆ. ಉಜ್ವಲ ನಗುತ್ತಿರುವ ಪ್ರತಿಭೆ ನಮ್ಮಿಂದ ಅಗಲಿದೆ. ಅವರಿಗೆ ನನ್ನ ಸಂತಾಪ” ಎಂದು ಹೇಳಿದ್ದಾರೆ.

ವಾಜಿದ್ ಖಾನ್ ಸೂಫಿ ಸಂಗೀತದಲ್ಲಿ ಕೂಡಾ ನಿಪುಣರಾಗಿದ್ದರು. ಐಪಿಎಲ್ 4 ಧ್ಯೇಯ ಗೀತೆ ಧೂಮ್ ಧೂಮ್ ಧೂಮ್ ದಡ್ಕಾಗೆ ಸಂಗೀತ ಸಂಯೋಜನೆ ಮಾಡಿದ್ದರು. 1998ರಲ್ಲಿ ಸಲ್ಮಾನ್ ಖಾನ್ ನಟನೆಯ ‘ಪ್ಯಾರ್ ಕೀಯಾ ತೋ ಡರ್‌ನಾ ಕ್ಯಾ’ ಎಂಬ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದ ಇವರು, ದಬಾಂಗ್, ಚೋರಿ ಚೋರಿ, ಹಲೋ ಬ್ರದರ್, ವಾಂಟೆಡ್ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಲ್ಲಿ ಹಾಡಿರುವ ವಾಜಿದ್ ಖಾನ್, ಉತ್ತಮ ಗಾಯಕರೂ ಆಗಿದ್ದರು. ವಾಜಿದ್ ಅವರು ತಮ್ಮ ಸಹೋದರ ಸಾಜಿದ್ ಜತೆ ಸ ರಿ ಗ ಮ ಪ-2012 ಮತ್ತು ಸ ರಿ ಗ ಮ ಪ ಸಿಂಗಿಂಗ್ ಸೂಪರ್ ‌ಸ್ಟಾರ್‌ನಂಥ ರಿಯಾಲಿಟಿ ಷೋಗಳಲ್ಲಿ ಮಾರ್ಗದರ್ಶಕರಾಗಿಯೂ ಹೆಸರು ಗಳಿಸಿದ್ದರು.


ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...