ಶೂನ್ಯಕ್ಕಿಳಿದ ಹೊಸ ಕೊರೊನ ವೈರಸ್ ಪ್ರಕರಣಗಳು : ಚೀನಾ ಮೈಲಿಗಲ್ಲು

ಕೊರೋನ ವೈರಸ್ ವಿರುದ್ಧದ ಸಮರದಲ್ಲಿ ಚೀನಾ ಪ್ರಮುಖ ಮೈಲಿಗಲ್ಲನ್ನು ದಾಖಲಿಸಿದೆ. ಆಂತರಿಕವಾಗಿ ಚೀನಾ ದೇಶವು ಮೊದಲ ಬಾರಿಗೆ ಹೊಸ ಕೊರೊನ ವೈರಸ್ ಪ್ರಕರಣಗಳಲ್ಲಿ ಶೂನ್ಯಕ್ಕೆ ತಲುಪಿದೆ. ಆದರೆ ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ಹರಸಾಹಸಪಡುತ್ತಿವೆ.

ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಜನವರಿಯಲ್ಲಿ ಅಧಿಕಾರಿಗಳು ಅಂಕಿಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ವೈರಸ್ ಹೊರಹೊಮ್ಮಿದ ಕೇಂದ್ರ ನಗರವಾದ ವುಹಾನ್‌ನಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.

ಜನವರಿ 23 ರಂದು ವುಹಾನ್ ನಗರದ 11 ಮಿಲಿಯನ್ ಜನರನ್ನು ಕಟ್ಟುನಿಟ್ಟಿನ ಕ್ವಾರೆಂಟೈನ್‌ಗೆ ಒಳಪಡಿಸಲಾಯಿತು, ಮುಂದಿನ ದಿನಗಳಲ್ಲಿ ಹುಬೈ ಪ್ರಾಂತ್ಯದ ನಾಲ್ಕು ಕೋಟಿಗೂ ಹೆಚ್ಚು ಜನರು ಲಾಕ್‌ಡೌನ್‌ಗೆ ಒಳಗಾದರು.

ಚೀನಾದ ಉಳಿದ ಭಾಗಗಳು ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿ ಕಠಿಣ ಕ್ರಮಗಳನ್ನು ಜಾರಿಗೆ ತಂದವು. ಚೀನಾ ರಾಷ್ಟ್ರವ್ಯಾಪಿ ಒಟ್ಟು ಒಟ್ಟು ಸಾವಿನ ಸಂಖ್ಯೆ 3,245 ಕ್ಕೆ ಏರಿದೆ ಎಂದು ಆಯೋಗ ತಿಳಿಸಿದೆ.

ಚೀನಾದಲ್ಲಿ ಸುಮಾರು 81,000 ಜ್ವರದ ಪ್ರಕರಣಗಳು ಪತ್ತೆಯಾದರೆ, 7,263 ಜನರು ಮಾತ್ರ ಕೊರೊನ ವೈರಸ್ ಶಂಕಿತರಾಗಿದ್ದಾರೆ. ಜಾಗತಿಕ ಸೋಂಕಿತರ ಪ್ರಕರಣ 2 ಲಕ್ಷ ದಾಟಿದರೆ 8,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಮಾರ್ಚ್ 10 ರಂದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೋಂಕು ಪ್ರಾರಂಭವಾದ ನಂತರ ಮೊದಲ ಬಾರಿಗೆ ವುಹಾನ್‌ಗೆ ಭೇಟಿ ನೀಡಿದರು ಹಾಗೂ ರೋಗದ ಹರಡುವಿಕೆಯನ್ನು ಬಹುತೇಕ ನಿಗ್ರಹಿಸಲಾಗಿದೆ ಎಂದು ಘೋಷಿಸಿದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here