Homeಮುಖಪುಟಕೊರೊನಾ: ಧರಿಸುವವರ ಮುಖ ಮಾಸ್ಕ್‌ನಲ್ಲೇ ಪ್ರಿಂಟ್; ಕೇರಳದಲ್ಲಿ ವಿಭಿನ್ನ ಪ್ರಯತ್ನ...!!

ಕೊರೊನಾ: ಧರಿಸುವವರ ಮುಖ ಮಾಸ್ಕ್‌ನಲ್ಲೇ ಪ್ರಿಂಟ್; ಕೇರಳದಲ್ಲಿ ವಿಭಿನ್ನ ಪ್ರಯತ್ನ…!!

- Advertisement -
- Advertisement -

ಕೊರೊನಾ ವೈರಸ್ ಎಲ್ಲರನ್ನೂ ಮಾಸ್ಕ್ ಹಾಕಿ ಓಡಾಡುವಂತೆ ಮಾಡಿದೆ. ಇದರಿಂದಾಗಿ ನಮ್ಮ ಸ್ನೇಹಿತರನ್ನೂ ಪರಸ್ಪರ ಗುರುತು ಹಿಡಿಯುವುದೆ ಕಷ್ಟಕರವಾಗಿದೆ. ಆದರೆ ಕೇರಳದ ಕೋಟಯಂ ನ ‘ಬೀನಾ ಸ್ಟುಡಿಯೋ’ ವಿಭಿನ್ನ ಪ್ರಯತ್ನ ಮಾಡಿರುವುದನ್ನು ಮೀಡಿಯಾ ಒನ್ ವರದಿ ಮಾಡಿದೆ.

ಸಾಂಕ್ರಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ತೆಡೆದು ಮಾದರಿಯಾದ ಕೇರಳದಲ್ಲೇ ಮಾಸ್ಕ್ ನಲ್ಲಿಯೂ ವಿಭಿನ್ನ ಪ್ರಯೋಗ ನಡೆದಿದೆ. ಮಾಸ್ಕ್ ಹಾಕಿರುವುದರಿಮದ ಪರಸದ್ಪರ ಪರಿಚಯ ಸಿಗುವುದು ಕಷ್ಟವಾಗಿರುವುದರಿಂದ ಕೋಟಯಂ ನ “ಬೀನಾ ಲೇಸರ್ ಟೆಕ್” ಸ್ಟುಡಿಯೊ ಮಾಸ್ಕ್ ನಲ್ಲಿಯೆ ಮಾಸ್ಕ್ ಧರಿಸುವವರ ನಗುವ ಮುಖದ ಅರ್ಧ ಭಾಗವನ್ನು ಪ್ರಿಂಟ್ ಮಾಡಿ ಕೊಡುತ್ತಿದೆ. ಇದರಿಂದ ಎದುರಿಗೆ ಇರುವವರು ಮಾಸ್ಕ್ ಧರಿಸುವವರನ್ನು ಗುರುತಿಸಲು ಸಾಧ್ಯವಾಗುತ್ತದೆ.

ಕೇರಳದಲ್ಲಿ ವಿಶೇಷ ಮಾಸ್ಕ್ ಕಂಡುಹಿಡಿದಿದ್ದಾರೆ. ಇಲ್ಲಿ ಮುಖವನ್ನೇ ಹೋಲುವ ಮಾಸ್ಕ್ ಪ್ರಿಂಟ್ ಮಾಡಿಕೊಡಲಾಗುತ್ತದೆ.#NaanuGauri #facemask #corona

Posted by Naanu Gauri on Saturday, May 23, 2020

ಬೀನಾ ಸ್ಟುಡಿಯೋ ಕೇವಲ ಹದಿನೈದು ನಿಮಿಷದಲ್ಲಿ ಮುಖವನ್ನು ಮಾಸ್ಕ್ ನಲ್ಲಿ ಪ್ರಿಂಟ್ ಮಾಡಿ ಕೊಡುತ್ತದೆ. ಇಂತಹಾ ಮಾಸ್ಕಿಗೆ ಬೀನಾ ಸ್ಟುಡಿಯೋ ಕೇವಲ 60 ರೂ. ಗಳನ್ನು ಚಾರ್ಜ್ ಮಾಡುತ್ತಿದೆ.

“ಮಾಸ್ಕ್ ಹಾಕಿರುವುದರಿಂದ ಹೆಸರು ಹೇಳಿದರಷ್ಟೇ ಜನರು ಗುರುತಿಸುತ್ತಿದ್ದರು. ಟೀ ಷರ್ಟುಗಳಿಗೆ ಪ್ರಿಂಟ್ ಮಾಡುವ ನಾವು ಮಾಸ್ಕ್ ನಲ್ಲಿಯೂ ಯಾಕೆ ಪ್ರಿಂಟ್ ಮಾಡಬಾರದು ಎಂದು ಅನಿಸಿತು. ಇದರಿಂದಾಗಿ ಈಗ ಜನರಿಗೆ ಪ್ರಯೋಜನವಾಗುತ್ತಿದೆ, ಯಾಕೆಂದರೆ ಮಾಸ್ಕ್ ಹಾಕಿದ್ದರು ಯಾರು ಎಂದು ಗುರುತಿಸಲು ಸಾಧ್ಯವಾಗುತ್ತಿದೆ.” ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.

ಮಾಹಿತಿಯೂ ಎಲ್ಲಡೆ ಹರಡುತ್ತಿದ್ದಂತೆ ಹಲವಾರು ಜನರು ಬೀನಾ ಸ್ಟುಡಿಯೋದತ್ತ ಜನರು ದೌಡಾಯಿಸುತ್ತಿದ್ದಾರೆ ಎನ್ನಲಾಗಿದೆ.


ಓದಿ: ಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...