Homeಮುಖಪುಟಕೊರೊನ ವೈರಸ್ ಕೇವಲ ವೈರಸ್‌ ಅಲ್ಲ. ‘ಮಾಂಸಾಹಾರಿಗಳನ್ನು ಶಿಕ್ಷಿಸಲು’ ಬಂದ ಅವತಾರ ಎಂದ ಹಿಂದೂ ಮಹಾಸಭಾ...

ಕೊರೊನ ವೈರಸ್ ಕೇವಲ ವೈರಸ್‌ ಅಲ್ಲ. ‘ಮಾಂಸಾಹಾರಿಗಳನ್ನು ಶಿಕ್ಷಿಸಲು’ ಬಂದ ಅವತಾರ ಎಂದ ಹಿಂದೂ ಮಹಾಸಭಾ ಮುಖ್ಯಸ್ಥ!

ದೇವರ ಆರಾಧನೆ ಮತ್ತು ಗೋರಕ್ಷಣೆಯನ್ನು ನಂಬುವ ಭಾರತೀಯರು ವೈರಸ್‌ನಿಂದ ಪ್ರತಿರಕ್ಷಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

- Advertisement -
- Advertisement -

ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚಕ್ರಪಾನಿ “1,700 ಕ್ಕೂ ಹೆಚ್ಚು ಜನರನ್ನು ಕೊಂದ  ಕೊರೊನ ವೈರಸ್ ಕೇವಲ ವೈರಸ್‌ ಅಲ್ಲ. ಅದು ಮಾಂಸಾಹಾರಿಗಳನ್ನು ಶಿಕ್ಷಿಸುವ ಅವತಾರ” ಎಂದು ಹೇಳುವ ಮೂಲಕ ನಗೆಪಾಟಲೀಗೀಡಾಗಿದ್ದಾರೆ.

ಕೊರೊನ ವೈರಸ್ ಅಲ್ಲ. ಅದು ಬಡ ಜೀವಿಗಳ ರಕ್ಷಣೆಗಾಗಿ ಬಂದ ಅವತಾರ ಎಂದು ಚಕ್ರಪಾನಿ ಹೇಳಿದ್ದಾರೆ. ಅದು ಮಾಂಸ ತಿನ್ನುವವರಿಗೆ ಮರಣ ಮತ್ತು ಶಿಕ್ಷೆಯ ಸಂದೇಶವನ್ನು ನೀಡಲು ಬಂದಿದೆ. ಅದು ಚೀನೀಯರಿಗೆ ಪ್ರಾಣಿಗಳನ್ನು ಕೊಲ್ಲಬಾರದು ಮತ್ತು ಸಸ್ಯಾಹಾರಿಗಳಾಗಬೇಕು ಎಂಬ ಪಾಠವನ್ನು ಕಲಿಸುತ್ತಿದೆ ಎಂದು ಹಿಂದೂ ಮಹಾಸಭಾ ನಾಯಕ ಹೇಳಿದ್ದಾರೆ.

ಕೊರೊನ ವೈರಸ್ ಹರಡುವುದನ್ನು ತಪ್ಪಿಸಲು ಚಕ್ರಪಾಣಿಯವರು ಒಂದು ಪರಿಹಾರವನ್ನು ಸಹ ಸೂಚಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕೂಡಲೇ “ಕೊರೊನ ವೈರಸ್ ವಿಗ್ರಹವನ್ನು ರಚಿಸಬೇಕು ಮತ್ತು ಅದರ ಕ್ಷಮೆ ಕೋರಬೇಕು”. ಆಗ ಅದರ “ಅವತಾರ” ದ ಕೋಪವನ್ನು ಶಾಂತಗೊಳಿಸುತ್ತದೆ ಎಂದು ಹೇಳಿದ್ದಾರೆ.

ತನ್ನ ಸಿದ್ಧಾಂತದ ಪ್ರಕಾರ ಭಾರತೀಯರು ವೈರಸ್‌ಗೆ ಹೆದರಬೇಕಾಗಿಲ್ಲ ಎಂದು ಚಕ್ರಪಾನಿ ಹೇಳಿದ್ದಾರೆ. ದೇವರ ಆರಾಧನೆ ಮತ್ತು ಗೋರಕ್ಷಣೆಯನ್ನು ನಂಬುವ ಭಾರತೀಯರು ವೈರಸ್‌ನಿಂದ ಪ್ರತಿರಕ್ಷಿತರಾಗಿದ್ದಾರೆ ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...