Homeಮುಖಪುಟವಿಕಾಸಸೌಧ ಸಿಬ್ಬಂದಿಗೆ ಕೊರೊನಾ: ಶಕ್ತಿಸೌಧ ಸೇರಿದಂತೆ ಹಲವು ಕಚೇರಿಗಳು ಸೀಲ್‌ಡೌನ್!

ವಿಕಾಸಸೌಧ ಸಿಬ್ಬಂದಿಗೆ ಕೊರೊನಾ: ಶಕ್ತಿಸೌಧ ಸೇರಿದಂತೆ ಹಲವು ಕಚೇರಿಗಳು ಸೀಲ್‌ಡೌನ್!

- Advertisement -
- Advertisement -

ತೀವ್ರವಾಗಿ ಹರಡುತ್ತಿರುವ ಕೊರೊನಾ ಸೋಂಕು ಇದೀಗ ವಿಕಾಸಸೌಧಕ್ಕೂ ಕಾಲಿಟ್ಟಿದೆ. ಅಲ್ಲಿನ ಆಹಾರ ಇಲಾಖೆ ಮಹಿಳಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಖಚಿತವಾದ ಬೆನ್ನಲ್ಲೇ ಹಲವು ಕಚೇರಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಅಲ್ಲದೇ ಶಕ್ತಿಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ತಗುಲಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇದೀಗ ಎರಡೂ ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿದೆ.

ವಿಕಾಸಸೌಧದ ಆಹಾರ ಇಲಾಖೆ ಮಹಿಳಾ ಸಿಬ್ಬಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಕುರಿತು ವರದಿ ಇಂದು ಹೊರ ಬಂದಿದ್ದು ಪಾಸಿಟಿವ್ ಆಗಿದೆ. ಇದರಿಂದ ಇಡೀ ವಿಕಾಸಸೌಧ ಹಾಗೂ ಶಕ್ತಿಸೌಧದ ಸಿಬ್ಬಂದಿಗಳು ಕೊರೋನಾ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಪಕ್ಕದಲ್ಲೇ ವಿಧಾನಸೌಧವಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಪರಿಣಾಮ ವಿಧಾನಸೌಧದ ಎಲ್ಲಾ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿರುವ ಸಚಿವಾಲಯದ ನೌಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಮತ್ತು ನಿಯೋಗ ಇಂದು ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಸದ್ಯಕ್ಕೆ ಕರ್ನಾಟಕವು 7213 ಪ್ರಕರಣಗಳೊಂದಿಗೆ ಹತ್ತನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಮಾಸ್ಕ್ ಧರಿಸಿಲ್ಲವೆಂದು ರೈತನ ಮೇಲೆ ಹಲ್ಲೆ: ಹೆಡ್‌ಕಾನ್‌ಸ್ಟೇಬಲ್ ವಿರುದ್ಧ FIR

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...