Homeಮುಖಪುಟರಸ್ತೆಯಲ್ಲಿ ಕೊರೊನಾ ಸೋಂಕಿತರ ಶವ: ಗುಜರಾತ್‌ ಮಾಡೆಲ್ ಧ್ವಂಸ ಮಾಡಬೇಕೆಂದು ಜಿಗ್ನೇಶ್‌ ಮೇವಾನಿ ಆಕ್ರೋಶ

ರಸ್ತೆಯಲ್ಲಿ ಕೊರೊನಾ ಸೋಂಕಿತರ ಶವ: ಗುಜರಾತ್‌ ಮಾಡೆಲ್ ಧ್ವಂಸ ಮಾಡಬೇಕೆಂದು ಜಿಗ್ನೇಶ್‌ ಮೇವಾನಿ ಆಕ್ರೋಶ

- Advertisement -
- Advertisement -

ಮೇ 10 ರಂದು ಅಹಮದಾಬಾದ್‌ ಸಿವಿಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರ ಶವವು ರಕ್ತಸಿಕ್ತವಾಗಿ ಬೀದಿಯಲ್ಲಿ ಪತ್ತೆಯಾಗಿದೆ. ಈ ರಾಜ್ಯದಲ್ಲಿ ಏನಾಗುತ್ತಿದೆ ಎಂದು ಶಾಸಕ ಜಿಗ್ನೇಶ್‌ ಮೇವಾನಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು “ಏನು ನಡೆಯುತ್ತಿದೆ ಇಲ್ಲಿ? ಗುಣವಂತ್ ಮಕ್ವಾನಾ ಎಂಬ 70 ವರ್ಷದ ಕೋವಿಡ್ -19 ರೋಗಿಯನ್ನು ಮೇ 10 ರಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಈಗ ಅವರ ಶವ ಬೀದಿಯಲ್ಲಿ ಪತ್ತೆಯಾಗಿದೆ! ಹೌದು, ಬೀದಿಯಲ್ಲಿ ರಕ್ತಸಿಕ್ತವಾಗಿ ಸಿಕ್ಕಿದೆ. ಸಿಎಂ ವಿಜಯ್‌ ರೂಪಾಣಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಬಹುದೊಡ್ಡ ಅಪರಾಧ” ಎಂದು ಜಿಗ್ನೇಶ್‌ ಟ್ವೀಟ್ ಮಾಡಿದ್ದಾರೆ.

ಮುಂದುವರೆದು ವಿಡಿಯೋವೊಂದನ್ನು ಟ್ವೀಟ್‌ ಮಾಡಿರುವ ಅವರು ಭಾರತದ ಒಳ್ಳೆಯ ಆಸ್ಪತ್ರೆ ಎಂದು ಹೇಳಿಕೊಳ್ಳುವ ಅಹಮದಾಬಾದ್‌ ಆಸ್ಪತ್ರೆಯ ಸಿಬ್ಬಂದಿ ಗುಣವಂತ್ ಮಕ್ವಾನಾರವರ ಕುಟುಂಬ ಸದಸ್ಯರಿಗೆ ಫೋನ್‌ ಮಾಡಿ “ಮಕ್ವಾನಾರವರ ಮೃತದೇಹವು 8 ಕಿ.ಮೀ ದೂರದ ಬಸ್‌ ಸ್ಟಾಪ್‌ನಲ್ಲಿದೆ ಎಂದು ತಿಳಿಸುತ್ತಾರೆ. ಕೊರೊನಾ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಆಸ್ಪತ್ರೆಯ ಸಿಬ್ಬಂದಿ ಮತ್ತು ಸರ್ಕಾರ ಭಾರೀ ನಿರ್ಲಕ್ಷ್ಯ ವಹಿಸಿದೆ” ಎಂದು ಆರೋಪಿಸಿದ್ದಾರೆ.

ಇಂತ ಕ್ರೂರ ನಿರ್ಲಕ್ಷ್ಯವನ್ನು ದೇಶದ ಎಲ್ಲಿಯೂ ನಾನು ನೋಡಿಲ್ಲ. ಸರ್ಕಾರವು ತನ್ನ ಗುಜರಾತ್‌ ಮಾಡೆಲ್‌ನ ಇಮೇಜ್‌ಗೆ ಚ್ಯುತಿ ಬಾರದಂತೆ ಈ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗದಂತೆ ನೋಡಿಕೊಂಡಿದೆ. ಈ ರೀತಿ ಕೊರೊನ ರೋಗಿಗಳು ಬೀದಿಯಲ್ಲಿ ಶವವಾಗುತ್ತಿರುವುದು ಎರಡನೇ ಪ್ರಕರಣವಾಗಿದ್ದು ಇದೊಂದು ಕ್ರಿಮಿನಲ್‌ ಅಪರಾಧವಾಗಿದ್ದು, ಸಿಎಂ ವಿಜಯ್‌ ರೂಪಾಣಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇದು ‘ಗುಜರಾತ್ ಮಾದರಿ’ಯಾದರೆ ಇದನ್ನು ನಾವು ಧ್ವಂಸಗೊಳಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: N-95 ಮಾಸ್ಕ್ ಕೊರತೆ ಬಗ್ಗೆ ದನಿಯೆತ್ತಿದ್ದ ವೈದ್ಯನಿಗೆ ಕೈಕಟ್ಟಿ, ಥಳಿಸಿದ ಪೊಲೀಸರು ; ತೀವ್ರ ಖಂಡನೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...