Homeಮುಖಪುಟಜಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ: ವಿಡಿಯೋಗಳಿಂದ ಬಯಲು

ಜಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ: ವಿಡಿಯೋಗಳಿಂದ ಬಯಲು

- Advertisement -
- Advertisement -

ದೆಹಲಿಯ ಜಾಮಿಯಾ ಮಿಲಿಯ ಇಸ್ಲಾಮಿಯ ಘಟನೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಲೇ ಇದೆ. ಸಿಎಎ, ಎನ್.ಆರ್.ಸಿ ವಿರುದ್ದ ವಿದ್ಯಾರ್ಥಿಗಳು ನಡೆಸುತ್ತಿದ್ದ ವೇಳೆ ಕಲ್ಲುತೂರಾಟ ನಡೆದಿತ್ತು. ಇದೀಗ ಈ ಪ್ರಕರಣದ ವಿವಿಧ ಸಿಸಿಟಿವಿ ವಿಡಿಯೋಗಳು ಬಹಿರಂಗಗೊಳ್ಳುತ್ತಿವೆ. ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಅದಕ್ಕೆ ಪ್ರತಿಯಾಗಿ ವಿಡಿಯೋಗಳು ಬಿಡುಗಡೆಗೊಂಡಿದ್ದು ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿರುವ ದೌರ್ಜನ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಜಾಮಿಯ

ಜಾಮಿಯ ಮಿಲಿಯ ವಿವಿಯ ಲೈಬ್ರರಿಗೆ ನುಗ್ಗಿ ಪೊಲೀಸರ ದೌರ್ಜನ್ಯ.. ಮೊದಲನೇ ವಿಡಿಯೋ

Posted by Naanu Gauri on Monday, February 17, 2020

ಜಾಮಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಲೈಬ್ರರಿಗೆ ಬರುತ್ತಿರುವ ದೃಶ್ಯಗಳಿರುವ 30 ಸೆಕೆಂಡಿನ ವಿಡಿಯೋ ವನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಇದನ್ನು ಕರ್ನಾಟಕ ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿ ವಿದ್ಯಾರ್ಥಿಗಳು ಲೈಬ್ರರಿಗೆ ಓದಲು ಬರುವ ಪರಿ ಇದು ಎಂದು ವ್ಯಂಗ್ಯ ಮಾಡಿತ್ತು. ಅಷ್ಟೇ ಅಲ್ಲ ಮಾಸ್ಕ್ ಧರಿಸಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ವಿದ್ಯಾರ್ಥಿಗಳು ಲೈಬ್ರರಿಗೆ ಬಂದು ಪುಸ್ತಕ ತೆಗೆದು ಓದುತ್ತಿದ್ದಾರೆ. ಅವರೆಲ್ಲ ಅಮಾಯಕರು. ಅವರಿಗೆ ಪೊಲೀಸರು ಸರಿಯಾದ ಉಪಚಾರವನ್ನೇ ಮಾಡಿದ್ದಾರೆ ಎಂದು ಗೇಲಿ ಮಾಡಿತ್ತು. ಈ ದೃಶ್ಯಾವಳಿ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.

ಬಿಜೆಪಿ ಬಿಡುಗಡೆ ಮಾಡಿರುವ ದೃಶ್ಯಾವಳಿಗೆ ಪ್ರತಿಯಾಗಿ ಮತ್ತೊಂದು ದಶ್ಯದ ತುಣುಕೊಂದನ್ನು ಬಿಡುಗಡೆ ಮಾಡಲಾಗಿದೆ. ಇದು ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡತೊಡಗಿದೆ. ಈ ದೃಶ್ಯದಲ್ಲಿ ಪೊಲೀಸರು ಲೈಬ್ರರಿ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸುತ್ತಿದ್ದಾರೆ. ತಾವು ವಿದ್ಯಾರ್ಥಿಗಳನ್ನು ಥಳಿಸುವುದು ಸಿಸಿ ಟಿವಿಗಳಲ್ಲಿ ದಾಖಲಾಗುತ್ತಿದೆ ಎಂಬುದು ಗೊತ್ತಾದ ಮೇಲೆ ಪೊಲೀಸರು ಸಿಸಿಟಿವಿಗಳನ್ನು ಹುಡುಕಿಹುಡುಕಿ ಲಾಠಿಗಳಿಂದ ನಾಶಪಡಿಸುತ್ತಿದ್ದಾರೆ. ಸಿಸಿಟಿವಿಗಳನ್ನು ಹುಡುಕುವ ಮತ್ತು ನಾಶಪಡಿಸುವ ದೃಶ್ಯಗಳು ಸೆರೆಯಾಗಿವೆ.

ವಿದ್ಯಾರ್ಥಿಗಳು ಪೊಲೀಸರ ಮೇಲೆ ದೌರ್ಜನ್ಯ ಎಸಗಿರುವುದು ಮತ್ತು ಸಾಕ್ಷ್ಯ ನಾಶಪಡಿಸುತ್ತಿರುವುದಕ್ಕ ಟ್ವಿಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿಗಳಿಂದ ಥಳಿಸಿದ ನಂತರ ಸಿಸಿಟಿವಿಗಳನ್ನು ನಾಶಪಡಿಸುವ ಅಗತ್ಯವೇನಿತ್ತು? ಪೊಲೀಸರು ತಾವು ತಪ್ಪು ಮಾಡಿಲ್ಲದಿದ್ದರೆ ಸಿಸಿಟಿವಿಗಳನ್ನು ಧ್ವಂಸ ಮಾಡಿದ್ದು ಏಕೆ ಎಂದು ಖ್ಯಾತ ಯೂಟ್ಯೂಬರ್‌ ಧೃವ್‌ ರಾಠೀ ಪ್ರಶ್ನೆ ಮಾಡಿದ್ದಾರೆ.

ಜಾಮಿಯ

ದೆಹಲಿ ಪೊಲೀಸರಿಂದ ಜಾಮಿಯ ವಿದ್ಯಾರ್ಥಿಗಳ ಮೇಲೆ ಪೈಶಾಚಿಕ ದಾಳಿ: ಎರಡನೇ ವಿಡಿಯೋ

Posted by Naanu Gauri on Monday, February 17, 2020

ಜಾಮಿಯ ಮಿಲ್ಲಿಯಾ ಇಸ್ಲಾಮಿಯ ಆಡಳಿತ ಸಮಿತಿ ಕೂಡ ಡಿಸೆಂಬರ್ 15ರಂದು ಪೊಲೀಸರು ನಡೆಸಿದ ಬರ್ಬರ ದಾಳಿಯ ವಿಡಿಯೋಗಳನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದೆ. ಸಜಾಉಲ್ ಹಕ್, ಸಿಸಿಟಿವಿ ನಾಶ ಪಡಿಸಿರುವ ಪೊಲೀಸರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರೇ ಹೀಗೆ ಸಾಕ್ಷ್ಯ ನಾಶಪಡಿಸಬಹುದೇ ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಪೊಲೀಸರು ಜಾಮಿಯ ಮಿಲ್ಲಿಯಾ ಇಸ್ಲಾಮಿಯಾ ಲೈಬ್ರರಿ ಪ್ರವೇಶಿಸಿದ್ದನ್ನು ಮೊದಲು ನಿರಾಕರಿಸಿದ್ದರು. ಆದರೆ ಸಿಸಿಟಿವಿ ವಿಡಿಯೋಗಳು ಹರಿದಾಡಿದ ನಂತರ ಭಾನುವಾರ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ಹೌದು ಲೈಬ್ರಿಗೆ ಹೋಗಿದ್ದೆವು. ಆದರೆ ಈಗ ಬಿಡುಗಡೆ ಮಾಡಿರುವ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಹೈಕೋರ್ಟ್ ಜಾಮಿಯ ಪ್ರಕರಣದ ಸಂಬಂಧ ಕೇಂದ್ರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಜಾಮಿಯಾ ವಿವಿ ಲೈಬ್ರರಿಯಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದೆ.

ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೇಂದ್ರದ ಅಧೀನದಲ್ಲಿ ಬರುವ ಪೊಲೀಸ್ ಇಲಾಖೆ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಜನರನ್ನು ರಕ್ಷಿಸಬೇಕಾದ ಪೊಲೀಸರು ಗೂಂಡಾಗಳಂತೆ ವರ್ತಿಸಿರುವುದು ಸಮಂಜಸವಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಾಲಾಯಕ್ ಕೇಂದ್ರ ಸರ್ಕಾರ; ನಾಲಾಯಕ್ ದೆಹಲಿ ಪೋಲಿಸ್. ಇಂಥವರಿಂದ ಇಂಥಹ ಕೆಲಸಗಳೇ ಆಗೋದು.

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...