Homeಮುಖಪುಟಟೆಲಿಕಾಂನಿಂದ ಬಾಕಿ ಹಣ: ಸರ್ಕಾರದಿಂದ BSNLಗೆ ನಾಮ, ಏರ್‌ಟೆಲ್, ವೊಡಾ ಮೇಲೇಕೆ ಪ್ರೇಮ?

ಟೆಲಿಕಾಂನಿಂದ ಬಾಕಿ ಹಣ: ಸರ್ಕಾರದಿಂದ BSNLಗೆ ನಾಮ, ಏರ್‌ಟೆಲ್, ವೊಡಾ ಮೇಲೇಕೆ ಪ್ರೇಮ?

ಕೇಂದ್ರ ಸರ್ಕಾರ ಈ ಖಾಸಗಿ ಮೊಬೈಲ್ ಕಂಪನಿಗಳ ಪರ ಮೃದು ಧೋರಣೆ ತೋರಿಸುತ್ತಿದ್ದು, ಅವುಗಳ ನೆರವಿಗೆ ಬರಲು ಯತ್ನಿಸುತ್ತಿದೆ ಎಂದು ಕೆಲವು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವೊಡಾ-ಐಡಿಯಾದ ಪಾಲುದಾರ ಕುಮಾರ ಮಂಗಲಂ ಬಿರ್ಲಾ ಕಂಪನಿ ಸಂಕಷ್ಟದಲ್ಲಿದೆ, ಕೇಂದ್ರ ನೆರವಿಗೆ ಬರಲಿ ಎಂಬರ್ಥದ ಮಾತು ತೇಲಿಬಿಟ್ಟಿದ್ದಾರೆ.

- Advertisement -
- Advertisement -

ಕಳೆದ 14 ವರ್ಷಗಳಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಮತ್ತು ಖಾಸಗಿ ಮೊಬೈಲ್ ಸೇವಾ ಕಂಪನಿಗಳ ನಡುವೆ ನಡೆಯುತ್ತ ಬಂದಿದ್ದ ವ್ಯಾಜ್ಯವೊಂದನ್ನು ಸುಪ್ರೀಂಕೋರ್ಟ್ ತಾರ್ಕಿಕ ಅಂತ್ಯಕ್ಕೆ ಒಯ್ದಿದೆ.
ಕೇಂದ್ರ ಸರ್ಕಾರ, ದೂರ ಸಂಪರ್ಕ ಇಲಾಖೆ ಮತ್ತು ಖಾಸಗಿ ಮೊಬೈಲ್ ಕಂನಿಗಳಿಗೆ ಕಳೆದ ವಾರ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್, ಖಾಸಗಿ ಮೊಬೈಲ್ ಸೇವಾ ಕಂಪನಿಗಳು ಮುಂದಿನ ವಿಚಾರಣೆ (ಮಾರ್ಚ್17)ಗೆ ಮುನ್ನ ತಮ್ಮ ಬಾಕಿಯನ್ನು ಸರ್ಕಾರಕ್ಕೆ ಕಟ್ಟಬೇಕು ಮತ್ತು ದೂರ ಸಂಪರ್ಕ ಇಲಾಖೆ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ತಪ್ಪಿದಲ್ಲಿ ಕಂಪನಿಗಳ ಲೈಸೆನ್ಸ್ ಕೂಡ ರದ್ದಾಗಬಹುದು ಎಂದು ಎಚ್ಚರಿಸಿದೆ.

ಆದರೆ, ಕೇಂದ್ರ ಸರ್ಕಾರ ಈ ಖಾಸಗಿ ಮೊಬೈಲ್ ಕಂಪನಿಗಳ ಪರ ಮೃದು ಧೋರಣೆ ತೋರಿಸುತ್ತಿದ್ದು, ಅವುಗಳ ನೆರವಿಗೆ ಬರಲು ಯತ್ನಿಸುತ್ತಿದೆ ಎಂದು ಕೆಲವು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವೊಡಾ-ಐಡಿಯಾದ ಪಾಲುದಾರ ಕುಮಾರ ಮಂಗಲಂ ಬಿರ್ಲಾ ಕಂಪನಿ ಸಂಕಷ್ಟದಲ್ಲಿದೆ, ಕೇಂದ್ರ ನೆರವಿಗೆ ಬರಲಿ ಎಂಬರ್ಥದ ಮಾತು ತೇಲಿಬಿಟ್ಟಿದ್ದಾರೆ.

ಈ ಕಂಪನಿಗಳಿಗೆ ಬಾಕಿ ತೀರಿಸಲು ಹೆಚ್ಚಿನ ಕಾಲಾವಕಾಶ ಒದಗಿಸಲು ಕೇಂದ್ರ ಹೊಸ ಶಾಸನ ಅಥವಾ ಹೊಸ ಟೆಲಿಕಾಂ ನೀತಿಯೊಂದನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ ಎನ್ನಲಾಗಿದೆ. ಕೋರ್ಟಿನ ಗಡುವಿನ ಕುರಿತಂತೆ, ದೂರ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು, ಈ ಗಡುವಿನೊಳಗೆ ಬಾಕಿ ತೀರಿಸಿ ಎಂದು ನಾವು ಒತ್ತಾಯ ಮಾಡುವಂತಿಲ್ಲ ಎಂದಿದ್ದರು. ಇದರ ವಿರುದ್ಧ ಸಿಟ್ಟಿಗೆದ್ದ ಸುಪ್ರೀಂಕೋರ್ಟ್, ಅಧಿಕಾರಿಯೊಬ್ಬರಿಗೆ ಕೋರ್ಟ್ ಆದೇಶಕ್ಕಿಂತ ಕಂಪನಿಗಳ ಹಿತವೇ ಮುಖ್ಯವಾಗಿತೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಎಲ್ಲ ಖಾಸಗಿ ಮೊಬೈಲ್ ಕಂಪನಿಗಳ ಬಾಕಿ ಒಟ್ಟು 1,45,000 ಕೋಟಿ ರೂ. ಇದ್ದು, ಅದರಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾ-ಐಡಿಯಾ (ವೊಡಾಫೋನ್ ಐಡಿಯಾ) ಈ ಎರಡು ಕಂಪನಿಗಳು ಒಟ್ಟು 88 ಸಾವಿರ ಕೋಟಿ ರೂ. ಬಾಕಿಯನ್ನು ದೂರಸಂಪರ್ಕ ಇಲಾಖೆಗೆ ಕಟ್ಟಬೇಕಿದೆ. ಈ ಮೊತ್ತದಲ್ಲಿ ಲೈಸೆನ್ಸ್ ಫೀ, ತರಂಗಾಂತರ (ಸ್ಪೆಕ್ಟ್ರಂ) ಬಳಕೆ ಮತ್ತು ಬಾಕಿ ಮೇಲಿನ ದಂಡ ಸೇರಿವೆ.

ಇಲ್ಲಿ ಕೇಳಬೇಕಾದ ಪ್ರಶ್ನೆ ಎಂದರೆ, 14 ವರ್ಷಗಳಿಂದ ದೂರಸಂಪರ್ಕ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿಲ್ಲವೇಕೆ? ಖಾಸಗಿ ಮೊಬೈಲ್ ಕಂಪನಿಯ ‘ಹೊಂದಿತ ನಿವ್ವಳ ಆದಾಯ’ (AGR-Adjusted Gross Revenue) ಆಧಾರದಲ್ಲಿ ಎಷ್ಟು ಮೊತ್ತ ಕಟ್ಟಬೇಕು ಎಂದು ನಿರ್ಧರಿಸುವ ಸೂತ್ರವಿದೆ. ಆದರೆ ದೂರಸಂಪರ್ಕ ಇಲಾಖೆ ಮಾಡಿದ ಲೆಕ್ಕಾಚಾರದಲ್ಲಿ ದೋಷವಿದೆ ಎಂದು ಈ ಖಾಸಗಿ ಮೊಬೈಲ್ ಕಂಪನಿಗಳು ಕೋರ್ಟುಗಳಲ್ಲಿ ವಾದಿಸುತ್ತ ಬಂದಿದ್ದವು. ದೂರ ಸಂಪರ್ಕ ಇಲಾಖೆಯ ಕೆಲವು ಅಧಿಕಾರಿಗಳು ಕೋರ್ಟಿನಲ್ಲಿ ಮೃದು ವಾದ ಮಂಡನೆಯಾಗುವಂತೆ ನೋಡಿಕೊಂಡರು ಎಂಬ ಅಪಾದನೆಯಿದೆ.

ಆದರೆ ಈಗ ಸುಪ್ರೀಂಕೋರ್ಟ್ ಖಡಕ್ ಆದೇಶ ನೀಡಿರುವುದರಿಂದ, ಕಂಪನಿಗಳು ಬಾಕಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ವೋಡಾ-ಐಡಿಯಾ 53 ಸಾವಿರ ಕೋಟಿ ರೂ, ಏರ್‌ಟೆಲ್ 35 ಸಾವಿರ ಕೋಟಿ ರೂ. ಬಾಕಿಯನ್ನು ಮಾರ್ಚ್ 17ರೊಳಗಾಗಿ ಪಾವತಿಸಬೇಕಾಗಿದೆ. ವೋಡಾ-ಐಡಿಯಾ ತನ್ನದು ಕೇವಲ 23 ಸಾವಿರ ಕೋಟಿ ರೂ ಮತ್ತು ಏರ್‌ಟೆಲ್ ತನ್ನದು 15-18 ಸಾವಿರ ಕೋಟಿ ರೂ ಎಂದು ವಾದ ಮಾಡುತ್ತ ಬಂದಿದ್ದವು. ಸೋಮವಾರ ಏರ್‌ಟೆಲ್ 10 ಸಾವಿರ ಕೋಟಿ ರೂ. ಡಿಪಾಸಿಟ್ ಮಾಡಿ, ಸದ್ಯದಲ್ಲೇ ಎಲ್ಲವನ್ನೂ ಭರಿಸುವ ಭರವಸೆ ನೀಡಿದೆ. ಆದರೆ ಆರ್ಥಿಕವಾಗಿ ಕಷ್ಟದಲ್ಲಿರುವ ವೋಡಾ-ಐಡಿಯಾ ಕೇವಲ 3500ಕೋಟಿರೂ ಮಾತ್ರ ಕಟ್ಟಿದ್ದು ಪೂರ್ಣ ಹಣ 53 ಸಾವಿರ ಕೋಟಿ ರೂ. ಭರಿಸುವುದು ಕಷ್ಟ ಎನ್ನಲಾಗಿದೆ.

ಈ ನಡುವೆ ಕೇಂದ್ರವು ಒಂದು ಶಾಸನ ಅಥವಾ ಹೊಸ ನೀತಿ ಜಾರಿಗೆ ತಂದು ಈ ಕಂಪನಿಗಳಿಗೆ ಕೊಂಚ ಕಾಲಾವಕಾಶ ಸಿಗುವಂತೆ ಮಾಡಬೇಕು ಎಂಬ ವಾದವನ್ನು ಕೆಲವರು ತೇಲಿಬಿಟ್ಟಿದ್ದಾರೆ. ಸಾರ್ವಜನಿಕ ಕಂಪನಿಗಳಾದ ಬಿಎಸ್‌ಎನ್‌ಎಲ್, ಏರ್ ಇಂಡಿಯಾಗಳ ನೆರವಿಗೆ ಬಾರದ ಕೇಂದ್ರ ಸರ್ಕಾರವೇನಾದರೂ ಈ ಕಂಪನಿಗಳ ಪರ ನಿಂತರೆ, ಅದು ಜನದ್ರೋಹವಾಗಲಿದೆ.

ಅಂತಿಮದಲ್ಲಿ ವೊಡಾ-ಐಡಿಯಾ ಮುಚ್ಚುವ ಎಲ್ಲ ಲಕ್ಷಣಗಳಿವೆ. ಅದರ ಗ್ರಾಹಕರು ಮತ್ತು ನೌಕರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...