HomeUncategorizedದೇಶೀಯ ನಾಗರಿಕ ವಿಮಾನಯಾನಗಳು ಸೋಮವಾರದಿಂದ ಪ್ರಾರಂಭ

ದೇಶೀಯ ನಾಗರಿಕ ವಿಮಾನಯಾನಗಳು ಸೋಮವಾರದಿಂದ ಪ್ರಾರಂಭ

- Advertisement -
- Advertisement -

ಕೊರೊನಾ ಕಾರಣಕ್ಕೆ ಹಾಕಲಾಗಿದ್ದ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ನಾಗರಿಕ ವಿಮಾನ ಯಾನಗಳು ಸೋಮವಾರದಿಂದ  ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ.

ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

“ದೇಶೀಯ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳು 2020 ರ ಮೇ 25 ರಿಂದ ಸೋಮವಾರ ಮಾಪನಾಂಕ ವಿಧಾನದ ರೀತಿಯಲ್ಲಿ ಪುನರಾರಂಭಗೊಳ್ಳಲಿವೆ. ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ವಾಯುಯಾನ ಸಂಸ್ಥೆಗಳು ಮೇ 25 ರಿಂದ ಕಾರ್ಯಾಚರಣೆಗೆ ಸಿದ್ಧವಾಗುವಂತೆ ತಿಳಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಯಾಣಿಕರ ಸಂಚಾರಕ್ಕಾಗಿ ಎಸ್‌ಒಪಿಗಳನ್ನು ಪ್ರತ್ಯೇಕವಾಗಿ ಸಚಿವಾಲಯ ನೀಡುತ್ತಿದೆ ಎಂದು ಅವರು ಟ್ವಿಟ್ಟರಿನಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಾಗ ಮಾರ್ಚ್ ಅಂತ್ಯದಲ್ಲಿ ವಿಮಾನ ಯಾನಗಳನ್ನು ಕೂಡಾ ನಿಲ್ಲಿಸಲಾಗಿತ್ತು.


ಓದಿ: ಬೇಕಾದರೆ ಬಿಜೆಪಿ ಪಕ್ಷದ ಧ್ವಜ ಮತ್ತು ಪೋಸ್ಟರ್‌ ಅಂಟಿಸಿ, ದಯವಿಟ್ಟು ಬಸ್‌ಗಳಿಗೆ ಅನುಮತಿಸಿ – ಪ್ರಿಯಾಂಕ ಗಾಂಧಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...