Homeನಿಜವೋ ಸುಳ್ಳೋFact Check: ಕೊರೊನಾ ಕಾಲದಲ್ಲಿ ಜೀವಂತವಾಗಿರುವುದೇ ಲಾಭ ಎಂದು ರತನ್‌ ಟಾಟಾ ಹೇಳಿದ್ದಾರೆಯೇ?

Fact Check: ಕೊರೊನಾ ಕಾಲದಲ್ಲಿ ಜೀವಂತವಾಗಿರುವುದೇ ಲಾಭ ಎಂದು ರತನ್‌ ಟಾಟಾ ಹೇಳಿದ್ದಾರೆಯೇ?

- Advertisement -
- Advertisement -

ಉದ್ಯಮಿ ರತನ್‌ ಟಾಟಾ ರವರು ಹೇಳಿದ್ದಾರೆ ಎಂಬ ಹಲವಾರು ಫೇಕ್‌ ನ್ಯೂಸ್‌ಗಳು ಸಾಮಾಜಿಕ ಜಾಲತಾಣದಲ್ಲಿ, ಪತ್ರಿಕೆಗಳಲ್ಲಿ ವೈರಲ್‌ ಆಗುತ್ತಿವೆ. ಈ ಕುರಿತು ಅವರು ಅಸಮಾಧಾನಗೊಂಡು ಟ್ವೀಟ್‌ ಮಾಡಿದ್ದಾರೆ.

‘2020 ಬದುಕುಳಿಯುವ ವರ್ಷ, ಲಾಭ ಮತ್ತು ನಷ್ಟಗಳ ಬಗ್ಗೆ ಚಿಂತಿಸಬೇಡಿ’ ಎಂಬ ಶೀರ್ಷಿಕೆಯೊಂದಿಗೆ ವ್ಯಾಪಾರ ವೃತ್ತಿಪರರಿಗಾಗಿ, ರತನ್ ಟಾಟಾ ಒಂದು ಸಣ್ಣ ಸಂದೇಶವನ್ನು ನೀಡಿದ್ದು, ಅದರಲ್ಲಿ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಪ್ರೇರೇಪಿಸಿದ್ದಾರೆ. “ವ್ಯಾಪಾರ ಕ್ಷೇತ್ರದ ನನ್ನ ಸ್ನೇಹಿತರೆ, 2020 ಬದುಕುಳಿಯುವ ವರ್ಷ ಎಂದು ನೆನಪಿಡಿ. ಈ ವರ್ಷ ಲಾಭ ಮತ್ತು ನಷ್ಟಗಳ ಬಗ್ಗೆ ನೀವು ಚಿಂತಿಸಬಾರದು. ಯೋಜನೆಗಳು ಮತ್ತು ಕನಸುಗಳ ಬಗ್ಗೆಯೂ ಮಾತನಾಡಬೇಡಿ. ಈ ವರ್ಷದ ಪ್ರಮುಖ ವಿಷಯವೆಂದರೆ ನಿಮ್ಮನ್ನು ಜೀವಂತವಾಗಿರಿಸಿಕೊಳ್ಳುವುದು. ಜೀವಂತವಾಗಿರುವುದೇ ಲಾಭ” ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ವೈರಲ್‌ ಆಗಿದೆ.

ಈ ಕುರಿತು ಸ್ವತಃ ಅವರೆ ಟ್ವೀಟ್‌ ಮೂಲಕ ಉತ್ತರ ನೀಡಿದ್ದಾರೆ. ಅದರಲ್ಲಿ “ಇದರಿಂದ ಭಯವಾಗಿದೆ. ನಾನೆಲ್ಲಿಯೂ ಆ ರೀತಿಯ ಹೇಳಿಕೆ ಕೊಟ್ಟಿಲ್ಲ. ಸಾಧ್ಯವಾದಾಗಲೆಲ್ಲಾ ಫೇಕ್‌ನ್ಯೂಸ್‌ಗಳನ್ನು ನಾನು ಬಯಲುಗೊಳಿಸುತ್ತೇನೆ. ಆದರು ನೀವು ಸಹ ಸುದ್ದಿಯ ಮೂಲಗಳನ್ನು ಹುಡುಕಿ ಪರೀಶಿಲಿಸಲು ಪ್ರಯತ್ನಿಸಿ. ಯಾವುದೇ ಹೇಳಿಕೆಯ ಜೊತೆಗೆ ನನ್ನ ಫೋಟೊವಿದ್ದರೆ ಅದು ನಾನು ಹೇಳಿದ್ದು ಎಂದು ಖಾತರಿಪಡಿಸುವುದಿಲ್ಲ. ಇದು ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ” ಎಂದು ತಿಳಿಸಿದ್ದಾರೆ.

ಈ ಹಿಂದೆಯೇ ಸಹ ಕೊರನಾ ವೈರಸ್‌ ನಂತರ ಭಾರತದ ಆರ್ಥಿಕತೆ ಪುಟಿದೇಳುತ್ತದೆ ಎಂದು ರತನ್‌ ಟಾಟಾ ರವರು ಹೇಳಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದು ವೈರಲ್‌ ಆಗಿತ್ತು. ಅದನ್ನು ಸಹ ಅವರು ಅದು ನನ್ನ ಹೇಳಿಕೆಯಲ್ಲ ಎಂದು ನಿರಾಕರಿಸಿದ್ದರು.


ಇದನ್ನೂ ಓದಿ: ಅಮೀರ್‌ ಖಾನ್‌ ಮೈದಾ ಹಿಟ್ಟಿ‌ನಲ್ಲಿ 15 ಸಾವಿರ ಹಂಚಿದ್ದು ಶುದ್ದ ಸುಳ್ಳು ಸುದ್ದಿ: ಹೀಗೆಳಿದ್ದು ಯಾರು ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...