Homeನಿಜವೋ ಸುಳ್ಳೋFact check: ಸುಳ್ಳು ಸುದ್ದಿ ಟ್ವೀಟ್‌ ಮಾಡಿ ಮುಖಭಂಗಕ್ಕೊಳಗಾದ ಉತ್ತರ ಪ್ರದೇಶ ANI

Fact check: ಸುಳ್ಳು ಸುದ್ದಿ ಟ್ವೀಟ್‌ ಮಾಡಿ ಮುಖಭಂಗಕ್ಕೊಳಗಾದ ಉತ್ತರ ಪ್ರದೇಶ ANI

- Advertisement -
- Advertisement -

ಸೆಕ್ಟರ್ 5 ನೇ ಹರೋಲಾದ ಕೆಲವರು ತಬ್ಲಿಘಿ ಜಮಾತ್‌ ಜೊತೆ ಸಂಪರ್ಕ ಹೊಂದಿದ್ದರು. ಹಾಗಾಗಿ ಅವರಿಗೂ ಸೋಂಕು ಹರಡಿದ್ದು ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಗೌತಮ್‌ ಬುಧ್‌ ನಗರದ ಡಿಸಿಪಿ ಸಂಕಲ್ಪ ಶರ್ಮಾ ಹೇಳಿದ್ದಾರೆ ಎಂದು ಉತ್ತರ ಪ್ರದೇಶ ಟ್ವಿಟ್ಟರ್ ಹ್ಯಾಂಡಲ್ UP ANI ತಪ್ಪು ಸುದ್ದಿ ಪ್ರಸಾರ ಮಾಡಿದೆ.

ಕೂಡಲೇ ಗೌತಮ್‌ ಬುಧ್‌ ನಗರದ ಡಿಸಿಪಿ ಟ್ವಿಟ್ಟರ್‌ ಹ್ಯಾಂಡಲ್ ಟ್ವೀಟ್‌ ಮಾಡಿ “ಸೋಂಕು ಬಂದವರನ್ನು ಎಂದಿನಂತೆ ಕ್ವಾರಂಟೈನ್‌ ಮಾಡಿದ್ದೇವೆ. ಅದಕ್ಕೂ ತಬ್ಲಿಘಿ ಜಮಾತ್‌ಗೂ ಯಾವುದೇ ಸಂಬಂಧವಿಲ್ಲ. ನೀವು ತಪ್ಪು ವರದಿ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ ಎಂದು ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ANI ಉತ್ತರ ಪ್ರದೇಶ ತನ್ನ ಟ್ವೀಟ್‌ನಲ್ಲಿ, ಸೆಕ್ಟರ್ 5 ಹರೋಲಾದಲ್ಲಿ ನೋಯ್ಡಾದ ತಬ್ಲಿಘಿ ಜಮಾಅತ್ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಿದ್ದೇವೆ ಎಂದು ವರದಿ ಮಾಡಿತ್ತು. ಆದರೆ ಯಾವಾಗ ಡಿಸಿಪಿಯವರು ಅವರಿಗೂ ತಬ್ಲಿಘ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ತನ್ನ ಟ್ವೀಟ್‌ ಅನ್ನು ANI ಉತ್ತರ ಪ್ರದೇಶ ಅಳಿಸಿದೆ.

 

ನಂತರ ANI UP ಅದನ್ನು ತಿದ್ದುಪಡಿ ಮಾಡಿದೆಯಾದರೂ ಆ ಹೊತ್ತಿಗೆ ಆ ಸುದ್ದಿಯೂ ಭಾರತದಾದ್ಯಂತ ಹಲವು ಮಾಧ್ಯಮಗಳಲ್ಲಿ ಹರಡಿಯಾಗಿತ್ತು.

ಮಾರ್ಚ್ ನಲ್ಲಿ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಜಮಾಅತ್‌ನ ಹಲವಾರು ಸದಸ್ಯರಲ್ಲಿ, ಕೊರೊನ ವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು. ಇದರ ನಂತರ ದೇಶದಾದ್ಯಂತ ಈ ಘಟನೆಯನ್ನು ಇಟ್ಟುಕೊಂಡು ಮುಸ್ಲಿಮರ ವಿರುದ್ದ ಮುಖ್ಯವಾಹಿನಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಅಭಿಯಾನವನ್ನು ಉದ್ದೇಶಪೂರ್ವಕವಾಗಿ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ANI ಉತ್ತರ ಪ್ರದೇಶದ ತಪ್ಪಿನಿಂದಾಗಿ ಬಾರಿ ಅಪಪ್ರಚಾರ ಉಂಟಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...