ಫ್ಯಾಕ್ಟ್‌ಚೆಕ್: ಹೈದರಾಬಾದ್‌ನಲ್ಲಿ ಕೊರೊನಾ ರೋಗಿಗಳು ಹಾಸಿಗೆ ಸಿಗದೆ ರಸ್ತೆಯಲ್ಲಿದ್ದಾರೆಯೆ?

ಹೈದರಾಬಾದ್‌

ಆಸ್ಪತ್ರೆಯ ಹೊರಗಿನ ರಸ್ತೆಗಳಲ್ಲಿ ಹಾಸಿಗೆಗಳ ಮೇಲೆ ರೋಗಿಗಳಿರುವ ವೀಡಿಯೊವನ್ನು ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿ ನಡೆದಿದ್ದು ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲಾಗುತ್ತಿದೆ.

ಆದರೆ, ಈ ವೀಡಿಯೊ ಹೈದರಾಬಾದ್‌ನ ಓಲ್ಡ್ ಸಿಟಿಯದ್ದಲ್ಲ ಪಾಕಿಸ್ತಾನದ ಲಾಹೋರ್‌ನದ್ದಾಗಿದ್ದು, ಅದೂ ಅಲ್ಲದೆ ಇದು ಕೊರೊನಾ ರೋಗಿಗಳ ವೀಡಿಯೋ ಅಲ್ಲ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ, ಈ ವಿಡಿಯೋವನ್ನು ಹೆಚ್ಚಿನ ಜನರು ನಿಜವೆಂದೇ ನಂಬಿದ್ದಾರೆ, ಯಾಕೆಂದರೆ ವೀಡಿಯೋದಲ್ಲಿ ಕಾಣುವ ರೋಗಿಗಳು ಮತ್ತು ಅವರ ಸಂಬಂಧಿಗಳು ಮಾಸ್ಕ್‌ಗಳನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಹಾಸಿಗೆಗಳ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ಕೊರೊನಾ ರೋಗಿಗಳು ರಸ್ತೆಗಳಲ್ಲಿ ಇರುವಂತಾಗಿದೆ ಎಂದು ವೈರಲ್ ಸಂದೇಶದಲ್ಲಿ ಹೇಳಲಾಗಿದೆ.

ಕಟ್ಟಡದ ಹೊರಗೆ ಹೆಚ್ಚಿನ ಸಂಖ್ಯೆಯ ಜನರು ಕಾಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ರೋಗಿಗಳ ಕೆಲವು ಸಂಬಂಧಿಕರು ರೋಗಿಗಳ ಬೆನ್ನನ್ನು ಉಜ್ಜಿಕೊಳ್ಳುವುದು ಕಂಡುಬರುತ್ತದೆ. ಅಷ್ಟೇ ಅಲ್ಲದೆ ಒಬ್ಬ ವ್ಯಕ್ತಿ ಪಿಪಿಇ ಕಿಟ್‌ನಂತೆ ತೋರುವ ದಿರಿಸು ಧರಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.

“ಓಲ್ಡ್ ಸಿಟಿಯಲ್ಲಿರುವ (ಹೈದರಾಬಾದ್) ಅಪಾಯಕಾರಿ ಪರಿಸ್ಥಿತಿ” ಎಂಬ ಸಂದೇಶದೊಂದಿಗೆ ಅನೇಕ ಜನರು ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

 

ವಿಡಿಯೊವನ್ನು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ ತಿಳಿದು ಬಂದಿದ್ದೇನೆಂದರೆ, ಪಾಕಿಸ್ತಾನದ ಲಾಹೋರ್‌ನ ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಜನರು ಹೀಗೆ ಹೊರಗೆ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Patients Waited Outside Lahore Hospital Due To Fire – They Are Not COVID Positive

ಪಾಕಿಸ್ತಾನದ ನ್ಯೂಸ್ ಚಾನೆಲ್ ಸಮಾ.ಟಿ.ವಿ ಯ ವರದಿಯು, ಇದು ಜೂನ್ 13 ರ ಶನಿವಾರದಂದು ಲಾಹೋರ್‌ನ ಸರ್ವೀಸಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ತುರ್ತು ವಾರ್ಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದಾಗಿನದ್ದು ಎಂದು ದೃಡಪಡಿಸುತ್ತದೆ.

Patients rescued as fire rages at Lahore’s Services Hospital

ಇದರಿಂದಾಗಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 40 ರೋಗಿಗಳನ್ನು ಸ್ಥಳಾಂತರಿಸಿ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಯಿತು ಎಂದು ವರದಿ ಉಲ್ಲೇಖಿಸಿದೆ.

ಅಷ್ಟೇ ಅಲ್ಲದೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ ಕೂಡಾ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದೆ.

 

ಆದ್ದರಿಂದ, ಲಾಹೋರ್ ಆಸ್ಪತ್ರೆಯೊಂದರ ವಿಡಿಯೋವೊಂದನ್ನು ಭಾರತದ ಹೈದರಾಬಾದ್‌ನ ಪರಿಸ್ಥಿತಿಯೆಂಬತೆ ಚಿತ್ರಿಸಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.


ಓದಿ: PM CARES ಗೆ ಚೀನಾ ಕಂಪನಿಗಳಿಂದ ದೇಣಿಗೆ ಏಕೆ?: ಕಾಂಗ್ರೆಸ್ ಪ್ರಶ್ನೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here