Homeಮುಖಪುಟಲಾಕ್‌ಡೌನ್‌ನಿಂದ ಮುಚ್ಚಿದ ಜನರಿಕ್‌ ಮಳಿಗೆಗಳು : ಬಡವರ ಕೈಗೆಟುಕದ ಜನೌಷಧಿ

ಲಾಕ್‌ಡೌನ್‌ನಿಂದ ಮುಚ್ಚಿದ ಜನರಿಕ್‌ ಮಳಿಗೆಗಳು : ಬಡವರ ಕೈಗೆಟುಕದ ಜನೌಷಧಿ

- Advertisement -
- Advertisement -

ಕೊರೊನ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಮಾಡಿದ ಮೇಲೆ ರಾಜ್ಯದಲ್ಲಿ ಜನರಿಕ್ ಮಳಿಗೆಗಳು ಮುಚ್ಚಿವೆ. ಔಷಧಿಗಳ ಪೂರೈಕೆಯಿಲ್ಲದೆ ಜನರಿಕ್ ಜನೌಷಧಿ ಮಳಿಗೆಗಳನ್ನು ಬಂದ್ ಮಾಡಿರುವುದರಿಂದ ದಿನ ಬಳಕೆಯ ಮಾತ್ರೆಗಳು ಸಿಗದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ಬೆಲೆಗೆ ಜನರಿಕ್ ಜನೌಷಧಿ ಮಳಿಗೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಔಷಧಿಗಳನ್ನು ಖಾಗಸಿ ಮೆಡಿಕಲ್ ಸ್ಟೋರ್ ಗಳಲ್ಲಿ ದುಬಾರಿ ಬೆಲೆತೆತ್ತು ಖರೀದಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ಜನರಿಕ್ ಜನೌಷಧಿ ಮಳಿಗೆಗಳು. ದೇಶಾದ್ಯಂತ ಕಡಿಮೆ ಅಂದರೆ ಮೂಲ ಬೆಲೆಗೆ ಕೊಡುವುದಾಗಿ ಘೋಷಿಸಿದ ಪ್ರಧಾನಿ ಜನರಿಕ್ ಜನೌಷಧಿ ಮಳಿಗೆಗಳನ್ನು ಆರಂಭಿಸಿದರು ಇಲ್ಲಿಯವರೆಗೂ ಜನರು ತಮಗೆ ಬೇಕಾದ ಅಗತ್ಯ ಮಾತ್ರೆಗಳನ್ನು ಈ ಮಳಿಗೆಗಳಲ್ಲಿ ಕಡಿಮೆ ಬೆಲೆಗೆ ಖರೀದಿಸಿ ರೋಗ ನಿಯಂತ್ರಣದಲ್ಲಿರುವಂತೆ ಕಾಪಾಡಿಕೊಂಡು ಬಂದಿದ್ದರು. ಕೈಗೆಟಕುವ ದರದಲ್ಲಿ ದೊರೆಯುತ್ತಿದ್ದ ಮಾತ್ರೆ ಗಳ ಲಾಕ್ ಡೌನ್ ಆದ ಮೇಲೆ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಇದರಿಂದ ಎಲ್ಲೆಡೆ ಜನೌಷಧಿ ಮಳಿಗೆಗಳನ್ನು ಮುಚ್ಚಲಾಗಿದೆ.

ರಾಜ್ಯದಲ್ಲಿ 524 ಜನರಿಕ್ ಜನೌಷಧಿ ಮಳಿಗೆಗಳಿವೆ ಎಂಬುದನ್ನು ಸರ್ಕಾರದ ಅಂಕಿಅಂಶ ದೃಡೀಕರಿಸುತ್ತವೆ. ಪ್ರತಿಯೊಂದು ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲೂ ಮಳಿಗೆ ತೆರೆದು ಬಡವರಿಗೆ ಕಡಿಮೆ ಬೆಲೆಗೆ ಮಾತ್ರೆ ನೀಡಲಾಗುತ್ತಿದೆ. ಜಿಲ್ಲಾ ಕೇಂದ್ರದ ಜನಸಂಖ್ಯೆಯ ಆಧಾರದಲ್ಲಿ ಮಳಿಗೆ ತೆರೆದಿದ್ದು ಬೆಂಗಳೂರಿನಲ್ಲಿ ರಾಜ್ಯದ ಅರ್ಧದಷ್ಟು ಮಳಿಗೆಗಳಿವೆ ಎಂಬ ಅಂದಾಜಿದೆ. ಮಾರ್ಚ್ 23 ರಂದು ಲಾಕ್ ಡೌನ್ ಮಾಡಿದ ನಂತರ ಜನೌಷಧಿ ಕೇಂದ್ರಗಳಲ್ಲಿದ್ದ ಮಾತ್ರೆಗಳು ಖಾಲಿಯಾಗಿವೆ. ರಕ್ತದೊತ್ತಡ, ಮಧುಮೇಹ, ನೋವು ನಿವಾರಕ, ಜಾಂಡೀಸ್, ಹೃದಯ ಸಂಬಂಧಿ ಕಾಯಿಲೆಗಳಿಗೂ ಸೇರಿ 200 ಬಗೆಯ ಮಾತ್ರೆಗಳು ದೊರೆಯುತ್ತವೆ ಎಂದು ಸರ್ಕಾರವೇ ಹೇಳಿಕೊಂಡಿದೆ.

2016ರ ಅಂಕಿಅಂಶಗಳು ಹೇಳುವಂತೆ ರಾಜ್ಯದ 21 ಜಿಲ್ಲೆಗಳಲ್ಲಿ 200 ಜನರಿಕ್ ಜನೌಷಧಿ ಕೇಂದ್ರಗಳಿದ್ದವು.  ಇದರಲ್ಲಿ 147 ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲೂ ಮಳಿಗೆಗಳನ್ನು ತೆರೆದು ರೋಗಿಗಳಿಗೆ ಅಗತ್ಯ ಮಾತ್ರೆಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಲಾಕ್ ಡೌನ್ ಪರಿಣಾಮ ಈ ಜನರಿಕ್ ಕೇಂದ್ರ ಗಳ ಮೇಲೆ ಬೀರಿದ್ದು ಮಾತ್ರೆಗಳು ದೊರೆಯುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಸಿಐಟಿಯು ಮುಖಂಡ ಸೈಯದ್ ಮುಜೀಬ್, ತುಮಕೂರು ಜಿಲ್ಲಾಸ್ಪತ್ರೆಯಲ್ಲಿರುವ ಮಳಿಗೆಯೂ ಸೇರಿದಂತೆ ಎಲ್ಲೆಡೆ ಜನರಿಕ್ ಮಳಿಗೆಗಳು ಮುಚ್ಚಿವೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಸರ್ಜನ್ ಜನರಿಕ್ ಮಳಿಗೆಗಳಿಗೆ ಮಾತ್ರೆಗಳು ಪೂರೈಕೆ ಆಗುತ್ತಿಲ್ಲ ಎಂದು ಹೇಳುತ್ತಾರೆ. ಬಡಕುಟುಂಬದ ರೋಗಿಗಳಿಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಮಾತ್ರೆಗಳೇ ಸಿಗುತ್ತಿಲ್ಲ ಹೀಗಾಗಿ ತುರ್ತು ಸೇವೆಗಳಡಿ ತಂದು ಜನರಿಕ್ ಮಳಿಗೆಗಳಿಗೆ ಕೂಡಲೇ ಮಾತ್ರೆಗಳನ್ನು ಪೂರೈಕೆ ಮಾಡಬೇಕು. ರೋಗಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜನರಿಕ್ ಜನೌಷಧಿ ಮಳಿಗೆಗಳನ್ನು ಮುಚ್ಚಿ ಖಾಸಗಿ ಮೆಡಿಕಲ್ ಶಾಪ್‌ಗಳನ್ನು ತೆರೆದಿದ್ದು ಖಾಸಗಿಯವರ ಲಾಬಿಗೆ ಸರ್ಕಾರ ಮಣಿದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕೊರೊನ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ನಡುವೆಯೇ ದಿನಬಳಕೆಯ ಮಾತ್ರೆಗಳು ದೊರೆಯದಿರುವುದರಿಂದ ರೋಗಿಗಳು ಖಾಸಗಿಯಾಗಿ ದುಬಾರಿ ವೆಚ್ಚ ಮಾಡಿ ಮಾತ್ರೆಗಳನ್ನು ಖರೀದಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೂಡಲೇ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಜನರಿಕ್ ಜನೌಷಧಿ ಮಳಿಗೆಗಳಿಗೆ ಮಾತ್ರೆಗಳನ್ನು ಪೂರೈಕೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...