ಕಾರ್ಮಿಕರನ್ನು ಯಂತ್ರಗಳಂತೆ ನಡೆಸಿಕೊಳ್ಳುತ್ತಿರುವ ಸರ್ಕಾರ: ಎಲ್. ಹನುಮಂತಯ್ಯ ಆತಂಕ

ಸಾವಿರಾರು ಕಿಲೋಮೀಟರ್ ನಡೆದು ಹೋಗುವಾಗ ಸುಮಾರು 21 ಗರ್ಭಿಣಿಯರಿಗೆ ಹೆರಿಗೆ ಆಗಿದೆ. ಹರಿಗೆ ಆದ ಮೇಲೆ ಕನಿಷ್ಠ ಆರು ತಿಂಗಳು ನಡೆಯಬಾರದು. ಆದರೆ ಅವರು ನಡೆದೇ ಮನೆ ಸೇರುವಂತಹ ಪರಿಸ್ಥಿತಿಯವನ್ನು ಸರ್ಕಾರಗಳು ತಂದೊಡ್ಡಿವೆ ಎಂದು ಹೇಳಿದರು.

ಕಾರ್ಮಿಕರನ್ನು ಯಂತ್ರಗಳಂತೆ ನಡೆಸಿಕೊಳ್ಳುತ್ತಿರುವ ಸರ್ಕಾರ,ಎಲ್. ಹನುಮಂತಯ್ಯ

ದೇಶದಲ್ಲಿ ವಲಸೆ ಕಾರ್ಮಿರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮಾನವೀಯವಾಗಿ ಯಂತ್ರಗಳಂತೆ ನಡೆಸಿಕೊಳ್ಳುತ್ತಿವೆ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಕಾನೂನುಗಳ ಸಡಿಲಿಕೆ ಮತ್ತು ಕಾರ್ಮಿಕ ವರ್ಗ ಎದುರಿಸುತ್ತಿರುವ ಸವಾಲುಗಳ ಕುರಿತು ಸಿಐಟಿಯು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಲಸೆ ಕಾರ್ಮಿಕರನ್ನು ನಮ್ಮಲ್ಲಿ ಮನುಷ್ಯರಂತೆ ಭಾವಿಸುತ್ತಿಲ್ಲ. ಕೋವಿಡ್ ಬಂದ ಮೇಲೆ ನಮ್ಮ ಜನರಿಗೆ ಪರಿಸ್ಥಿತಿಯ ಮನವಿರಕೆ ಆಗುತ್ತಿದೆ ಎಂದರು.

ವಲಸೆ ಕಾರ್ಮಿಕರು ಇನ್ನು ಊರುಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಸರ್ಕಾರಗಳು ಅವರನ್ನು ತವರಿಗೆ ಕಳಿಸಲು ಹಿಂದೇಟು ಹಾಕುತ್ತಿವೆ. ನಮ್ಮಲ್ಲಿ ಸಾಕಷ್ಟು ರೈಲುಗಳು ಇವೆ. ಅವುಗಳ ಮೂಲಕ ಎಲ್ಲಾ ವಲಸೆ ಕಾರ್ಮಿಕರನ್ನು ದೈಹಿಕ ಅಂತರ ಕಾಪಾಡಿಕೊಂಡೇ ಕಳಿಸಬಹುದಿತ್ತು. ಆದರೆ ಸರ್ಕಾರಗಳು ಈ ಬಗ್ಗೆ ಗಮನಹರಿಸಲೇ ಇಲ್ಲ ಎಂದರು.

ತಮ್ಮಗ್ರಾಮಗಳಿಗೆ ಹೋಗಲು ವಲಸೆ ಕಾರ್ಮಿಕರು ನಡೆಯುತ್ತಲೇ ಇದ್ದಾರೆ. ಸಾವಿರಾರು ಕಿಲೋಮೀಟರ್ ನಡೆದು ಹೋಗುವಾಗ ಸುಮಾರು 21 ಗರ್ಭಿಣಿಯರಿಗೆ ಹೆರಿಗೆ ಆಗಿದೆ. ಹರಿಗೆ ಆದ ಮೇಲೆ ಕನಿಷ್ಠ ಆರು ತಿಂಗಳು ನಡೆಯಬಾರದೆಂಬ ಮಾತಿದೆ. ಆದರೂ ಹೆರಿಗೆಯಾದ ಗಳಿಗೆಯಿಂದಲೇ ನಡೆದು ಮನೆ ಸೇರುವಂತಹ ಪರಿಸ್ಥಿತಿಯವನ್ನು ಸರ್ಕಾರಗಳು ತಂದೊಡ್ಡಿವೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ವಲಸೆ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಂಡಿತು. ಇದರಿಂದ 10 ಲಕ್ಷ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಉತ್ತರ ಕರ್ನಾಟಕದ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ದುಪ್ಪಟ್ಟು ಪ್ರಯಾಣ ದರ ತೆರಬೇಕಾಯಿತು. ಕಾಂಗ್ರೆಸ್ ಪಕ್ಷ ಉಚಿತವಾಗಿ ಕರೆದುಕೊಂಡು ಹೋಗಬೇಕೆಂದು ಕೋಟಿ ರೂಪಾಯಿ ಚೆಕ್ ನೀಡಿದ ಮೇಲೆ ಸರ್ಕಾರ ವಲಸೆ ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಹೋಯಿತು ಎಂದು ವಿವರಿಸಿದರು.


ಓದಿ: ಕಾರ್ಮಿಕರ ದುಡಿಯುವ ಅವಧಿಯನ್ನು 10 ಗಂಟೆಗೆ ಏರಿಸಿದ ರಾಜ್ಯ ಸರ್ಕಾರ: ಕಾರ್ಮಿಕರ ಸಂಘಟನೆಗಳ ವಿರೋಧ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here