Homeಮುಖಪುಟಪತ್ರಿಕಾ ನೀತಿ ಧಿಕ್ಕರಿಸಿ ಮೃತದೇಹದ ಚಿತ್ರ ಪ್ರಕಟಣೆ ಸಮರ್ಥಿಸಿಕೊಂಡ ’ಗುಜರಾತ್ ಸಮಾಚಾರ್‌’

ಪತ್ರಿಕಾ ನೀತಿ ಧಿಕ್ಕರಿಸಿ ಮೃತದೇಹದ ಚಿತ್ರ ಪ್ರಕಟಣೆ ಸಮರ್ಥಿಸಿಕೊಂಡ ’ಗುಜರಾತ್ ಸಮಾಚಾರ್‌’

- Advertisement -
- Advertisement -

ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹದ ಚಿತ್ರವನ್ನು”ಗುಜರಾತ್ ಸಮಾಚಾರ್’‌ ಪತ್ರಿಕೆಯು ತನ್ನ ಮುಖಪುಟದಲ್ಲಿ ಹಾಕಿದ್ದಲ್ಲದೇ ಆ ಕ್ರಮವನ್ನು ಸಮರ್ಥಿಸಿಕೊಂಡಿದೆ.

ದಿನಪತ್ರಿಕೆಯು ತನ್ನ ಮೊದಲ ಪುಟದಲ್ಲಿ ಸುಶಾಂತ್ ಸಿಂಗ್ ಅವರ ಮೃತ ದೇಹ ಹಾಸಿಗೆಯ ಮೇಲೆ ಮಲಗಿರುವ ಗಾಬರಿಗೊಳಿಸುವಂತಹ ಚಿತ್ರವನ್ನು ಪ್ರಕಟಿಸಿ “ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದು, ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂಬ ಉಪಶೀರ್ಷಿಕೆಯೊಂದಿಗೆ ವರದಿಯೊಂದನ್ನು ಅದು ಪ್ರಕಟಿಸಿದೆ.

ನಟನ ದೇಹದ ಗಾಬರಿಗೊಳಿಸುವಂತಹ ಚಿತ್ರಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದರು. ಅಲ್ಲದೆ ಅತಂಹ ಚಿತ್ರಗಳನ್ನು ಪ್ರಕಟಿಸಬಾರದು ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ’ಗುಜರಾತ್ ಸಮಾಚಾರ್‌’ನ ವ್ಯವಸ್ಥಾಪಕ ಸಂಪಾದಕ ಶ್ರೇಯಾನ್ಶ್ ಷಾ, “ಇಂತವುಗಳಲ್ಲಿ ಅಭಿಪ್ರಾಯದ ವ್ಯತ್ಯಾಸವಿದೆ ಆದರೆ ನಾವು ಸರಿಯಾದ ದಾರಿಯಲ್ಲಿದ್ದೇವೆ. ಕೆಲವು ಓದುಗರು ಅದು ಸರಿ ಎಂದು ಭಾವಿಸಿದರೆ, ಇತರರು ಅದು ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚಿಸಲು ಬಯಸುವುದಿಲ್ಲ. ನಾವು ಅಂತಹ ಚಿತ್ರಗಳನ್ನು ಪ್ರಕಟಿಸಬೇಕೇ ಅಥವಾ ಬೇಡವೇ ಎಂದು ಸಂಪಾದಕೀಯ ತಂಡವು ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.

ಮುಂಬೈಯ ವಕೀಲರಾದ ರೋಹನ್ ನಹರ್ ಅವರು “ಈ ಎಲ್ಲಾ ಫೋಟೋಗಳನ್ನು ಪೊಲೀಸರು ಹೊರಗಡೆಗೆ ಸೋರಿಕೆ ಮಾಡಿದ್ದಾರೆ. ಅವರ ವಿರುದ್ದ ವಿಚಾರಣೆ ಆರಂಭಿಸಬೇಕು. ಇಂತಹಾ ಚಿತ್ರಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಡುವುದು ನಿಜಕ್ಕೂ ಭಯಾನಕವಾಗಿದೆ, ಅಲ್ಲದೆ ತನಿಖೆಗೆ ಕೂಡಾ ಅಡ್ಡಿಯಾಗುತ್ತದೆ. ಭಾರತದಲ್ಲಿ ಅನೇಕ ಆತ್ಮಹತ್ಯೆ ನಡೆಯುತ್ತದೆ, ಆದರೆ ಸಾರ್ವಜನಿಕ ವ್ಯಕ್ತಿಗಳ ಪ್ರಕರಣದಲ್ಲಿ ಇಂತಹ ತಪ್ಪುಗಳು ನಡೆಯುತ್ತದೆ. ಇದೊಂದು ಪ್ರಮುಖ ಸಮಸ್ಯೆಯಾಗಿದೆ” ಎಂದು ಹೇಳಿದ್ದಾರೆ.


ಓದಿ: ಆತ್ಮಹತ್ಯೆಯೊಂದರ ಅನಾಥ ಕಥನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...