ಇರಾನ್‌ನಲ್ಲಿ ಕೊರೊನಾಗೆ ಬಲಿಯಾದವರನ್ನು ಟ್ರಕ್‌ಗಳಲ್ಲಿ ಸಾಗಿಸಲಾಗಿತ್ತೆ? Fact Check

ಮೃತ ದೇಹಗಳನ್ನು ಸಾಗಿಸುತ್ತಿರುವ ಟ್ರಕ್‌ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ನಿಮ್ಮ ಸ್ವಂತ ಮನೆಗಳಲ್ಲಿ ಇರಿ, ಇದು ಪ್ರಧಾನ ಮಂತ್ರಿಗಳ ನಿರ್ಧಾರವಲ್ಲ. ಈ ನಿರ್ಧಾರ ಸ್ವಭಾವತಃ. ಈ ನಿರ್ಧಾರವನ್ನು ಒಪ್ಪಿಕೊಳ್ಳದ ದೇಶಗಳಲ್ಲಿ ಏನಾಗಿದೆ ಎಂದು ನೋಡಿ. ಇರಾನ್‌ನಲ್ಲಿ ಕೊರೊನಾ ವೈರಸ್‌ಗೆ ತುತ್ತಾದವರ ಶವಗಳನ್ನು ಆಸ್ಪತ್ರೆ ಇಂದ ಸಾಗಿರುತ್ತಿರುವ ವಿಡಿಯೋ ಇದು. ಇದನ್ನು ಮನೆಯಲ್ಲಿ ಉಳಿಯಲು ಇಷ್ಟಪಡದವರೊಂದಿಗೆ ಹಂಚಿಕೊಳ್ಳಿ.” ಎಂದು ವಿಡಿಯೋ ಜೊತೆಗೆ ಮಾಹಿತಿ ಓಡಾಡುತ್ತಿದೆ.

ಹಲವಾರು ಜನರು ಈ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

 

2019 ರಲ್ಲಿ ಮೆಕ್ಕಾದಲ್ಲಿ ಹಜ್‌ ಸಂದರ್ಭದಲ್ಲಿನ ವಿಡಿಯೋ 

ಈ ಹರಿದಾಡುತ್ತಿರುವ ವಿಡಿಯೋದ ಅಸಲಿಯತ್ತನ್ನು ತಿಳಿಯಲು ಆಲ್ಟ್‌ ನ್ಯೂಸ್‌ ವಿಡಿಯೋದ ಮೂಲವನ್ನು ಹುಡುಕಿ ಹೊರಟಿದೆ. ಹಲವಾರು ಜನರು ವಿವಿಧ ಸಂದರ್ಭಗಳಲ್ಲಿ ಈ ವಿಡಿಯೋವನ್ನು ಬಳಸಿದ್ದಾರೆ. ಆದರೆ, ಆ ವಿಡಿಯೋ 2019ರ ಆಗಸ್ಟ್‌ 16ರಂದು ಯೂಟ್ಯೂಬ್‌ ಬಳಕೆದಾರ ಗುಲಾಮ್ ಅಬ್ಬಾಸ್‌ ಎಂಬುವವರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದ ವಿಡಿಯೋ ಅದು ಎಂಬುದನ್ನು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ಮೂಲಕ ಕಂಡುಹಿಡಿದಿದೆ. ಆ ವಿಡಿಯೋದ ಹೆಡ್‌ಲೈನ್‌ “ಸೌದಿ ಅರೇಬಿಯಾದ ಮೆಕ್ಕಾದಲ್ಲಿ 2019ರನಡೆದ ಹಜ್‌ ಸಂದರ್ಭದಲ್ಲಿ 58 ಸಾವು” ಎಂದು ಬರೆದು ಅಪ್‌ಲೋಡ್‌  ಮಾಡಲಾಗಿದೆ.

2019 ರಲ್ಲಿ, ಹಜ್ ತೀರ್ಥಯಾತ್ರೆ ಆಗಸ್ಟ್ 9 ರ ಶುಕ್ರವಾರ ಸಂಜೆ ಪ್ರಾರಂಭವಾಯಿತು ಮತ್ತು ಆಗಸ್ಟ್ 14 ರ ಬುಧವಾರ ಸಂಜೆ ಕೊನೆಗೊಂಡಿತು. ಆಗಸ್ಟ್ 14 ರಂದು ಸಾವಿನ ಸಂಖ್ಯೆ 39 ಎಂದು ವರದಿಯಾಗಿದೆ. ಪ್ರತಿ ವರ್ಷ ಮೆಕ್ಕಾಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಮೆಕ್ಕಾದ ಬಿಸಿಯ ತಾಪವನ್ನು ವಯಸ್ಸಾದವರು ಹಜ್ ಸಮಯದಲ್ಲಿ ತಡೆದುಕೊಳ್ಳಲಾದರೆ ಸುಸ್ತಾಗುತ್ತಾರೆ. ಅವರಲ್ಲಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಹೆಚ್ಚಿನ ಜನಸಂದಣಿಯಿಂದಾಗಿ ಸ್ಟ್ಯಾಂಪ್‌ಡೆಡ್‌ಗಳು ಸಹ ಸಾಮಾನ್ಯವಾಗಿದೆ.

ಆ ಸಂದರ್ಭದಲ್ಲಿ ಸಾವಿಗೀಡಾದವರನ್ನು ಸಾಗಿಸುತ್ತಿದ್ದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅದೇ ವಿಡಿಯೋವನ್ನು ಕೆಲವರು ಜನರಲ್ಲಿ ಭಯ ಹುಟ್ಟಿಸಲು ಬಳಸಿಕೊಂಡಿದ್ದಾರೆ.

ಅಂದಹಾಗೆ, ಈ ವಿಡಿಯೋ 2019ರ ಆಗಸ್ಟ್‌ ತಿಂಗಳಿನಲ್ಲಿಯೇ ಅಪ್‌ಲೋಡ್‌ ಆಗಿದ್ದು, ಕೊರೊನಾ ವೈರಸ್‌ನ ಮೊದಲ ಪ್ರಕರಣವು 2019ರ ನವೆಂಬರ್‌ನಲ್ಲಿ ಚೀನಾದಲ್ಲಿ ವರದಿಯಾಗಿದೆ. ಹಾಗಾಗ ಇದು ಕೊರೊನಾಗೆ ತುತ್ತಾದವರ ಶವಗಳನ್ನು ಸಾಗಿಸುತ್ತಿರುವ ವಿಡಿಯೋ ಅಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here