Homeಮುಖಪುಟಭಾರತದಲ್ಲಿ ಕೊರೊನಾ ಸಾಮುದಾಯಿಕವಾಗಿ ಹರಡಲಿದೆ: ಡಾ.ಗಿರಿಧರ್ ಗ್ಯಾನಿ

ಭಾರತದಲ್ಲಿ ಕೊರೊನಾ ಸಾಮುದಾಯಿಕವಾಗಿ ಹರಡಲಿದೆ: ಡಾ.ಗಿರಿಧರ್ ಗ್ಯಾನಿ

- Advertisement -
- Advertisement -

ಭಾರತದಲ್ಲಿ ಕೊರೊನಾ ವೈರಸ್ ಮೂರನೇ ಹಂತ ತಲುಪಿದೆ ಹಾಗೂ ಅದನ್ನು ಎದುರಿಸಲು ಸಾಕಷ್ಟು ತಯಾರಿ ನಮ್ಮಲ್ಲಿಲ್ಲ ಎಂದು ಕೊರೊನ ವೈರಸ್ ಆಸ್ಪತ್ರೆಗಳ ಕಾರ್ಯಪಡೆಯ ಕನ್ವೀನರ್ ಡಾ.ಗಿರಿಧರ್ ಗ್ಯಾನಿ “ದಿ ಕ್ವಿಂಟ್”ಗೆ ನೀಡಿದ ಸಂದರ್ಶವೊಂದರಲ್ಲಿ ಹೇಳಿದ್ದಾರೆ.

ಸಂದರ್ಶನದಲ್ಲಿ ಡಾ.ಗಿರಿಧರ್ ಗ್ಯಾನಿ ಮಾತಾಡುತ್ತಾ “ಭಾರತದಲ್ಲಿ ಕೊರೊನಾ ವೈರಸ್ ಮೂರನೇ ಹಂತ ತಲುಪಿದೆ. ಈಗ ಅದು ಸಾಮುದಾಯಿಕವಾಗಿ ಹರಡಲಿದೆ. ಅಧಿಕೃತವಾಗಿ ನಾವು ಇದನ್ನು ಘೋಷಿಸದಿದ್ದರೂ ಇದು 3ನೇ ಹಂತದ ಪ್ರಾರಂಭಿಕ ಲಕ್ಷಣವಾಗಿದೆ” ಎಂದು ಹೇಳಿದ್ದಾರೆ.

“ಮುಂಬರುವ ದಿನಗಳಲ್ಲಿ ಏಕಾಏಕಿ ಎದುರಾಗಬಹುದಾದ ಅಪಾಯಗಳನ್ನು ಎದುರಿಸಲು ಸಜ್ಜಾಗುವಲ್ಲಿ ದೇಶವು ಬಹಳ ಕಡಿಮೆ ಸಮಯವನ್ನು ಹೊಂದಿದೆ. ನಮ್ಮಲ್ಲಿ ಸಾಕಷ್ಟು ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೊನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಆಸ್ಪತ್ರೆಗಳ ಕೊರತೆಯಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಮೂರನೇ ಹಂತದಲ್ಲಿ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತದೆ. ಈ ಸಮಯದಲ್ಲಿ ಪ್ರಸರಣದ ಮೂಲವನ್ನು ಕಂಡುಹಿಡಿಯುವುದು ಕೂಡ ಕಷ್ಟವಾಗುತ್ತದೆ. ವೈರಸನ್ನು ನಿಯಂತ್ರಿಸಲು ಮುಂದಿನ ಐದು-ಹತ್ತು ದಿನಗಳು ಬಹಳ ನಿರ್ಣಾಯಕವಾಗಲಿದೆ, ಸೋಂಕು ತಗಲಿಯೂ ಇಲ್ಲಿಯವರೆಗೆ ರೋಗಲಕ್ಷಣ ತೋರಿಸದಿದ್ದವರು ಮುಂದಿನ ದಿನಗಳಲ್ಲಿ ರೋಗಲಕ್ಷಣಗಳನ್ನು ತೋರಿಸಲಾರಂಭಿಸುತ್ತಾರೆ” ಎಂದು ಹೇಳಿದ್ದಾರೆ.

“ಸರಕಾರದ ಬಳಿ ಸಾಕಷ್ಟು ಪರೀಕ್ಷಾ ಸಾಮಾಗ್ರಿಗಳಿಲ್ಲ. ಕೆಮ್ಮು, ಉಸಿರಾಟದ ಸಮಸ್ಯೆ ಮತ್ತು ಜ್ವರ – ಈ ಮೂರು ರೋಗಲಕ್ಷಣಗಳನ್ನು ಹೊಂದಿರುವವರನ್ನು ಮಾತ್ರ ಸರಕಾರ ಈಗಲೂ ಪರೀಕ್ಷಿಸುತ್ತಿದೆ. ಕೇವಲ ಒಂದು ರೋಗಲಕ್ಷಣ ಹೊಂದಿರುವ ರೋಗಿಗಳನ್ನು ಸ್ಥೂಲವಾಗಿ ಪರೀಕ್ಷೆಗೆ ಒಳಪಡಿಸುತ್ತಿಲ್ಲ, ಇದು ಬದಲಾಗಬೇಕು” ಎಂದಿದ್ದಾರೆ.

“ದೆಹಲಿಯಲ್ಲೇ ಮೂರು ಕೋಟಿ ಜನಸಂಖ್ಯೆಯಿದೆ ಅದಕ್ಕಾಗಿ ನಾವು ಕನಿಷ್ಟ ಮೂರು ಸಾವಿರ ಹಾಸಿಗೆಗಳ ಆಸ್ಪತ್ರೆಗಳನ್ನು ಸಿದ್ದವಾಗಿಡಬೇಕು. ಸಂಪರ್ಕತಡೆಯಲ್ಲಿ ಇರಿಸಬೇಕಾದವರಿಗೆ ಅಥವಾ ಕೊರೊನ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡವರಿಗೆ ಪ್ರತ್ಯೇಕ ಕೊರೊನಾ ವೈರಸ್ ಕೇಂದ್ರಗಳ ಅಗತ್ಯವಿದೆ, ಅದಕ್ಕಾಗಿ ವಸತಿಗೃಹ ಮತ್ತು ಹಾಸ್ಟೆಲ್‌ಗಳನ್ನು ಪರಿವರ್ತಿಸಿ ಇಂತಹ ಕೇಂದ್ರಗಳನ್ನಾಗಿ ಮಾಡಬಹುದು” ಎಂದು ಡಾ.ಗಿರಿಧರ್ ಗ್ಯಾನಿ ಅಭಿಪ್ರಾಯ ಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...