ಚೀನಾ ಇಟಲಿಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ: ನೇಪಾಳ ಪ್ರಧಾನಿ

ಚೀನಾ ಇಟಲಿಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ, ನೇಪಾಳ ಪ್ರಧಾನಿ

ಭಾರತೀಯ ವೈರಸ್ ಚೀನಾ ಹಾಗೂ ಇಟಲಿಯ ವೈರಸ್‌ಗಿಂತಲೂ ಹೆಚ್ಚು ಮಾರಕವಾಗಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಓಲಿ ಭಾರತದ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಭಾರತವು ಗಡಿಯಲ್ಲಿನ ಭೂಪ್ರದೇಶದ ಕೆಲವು ಭಾಗಗಳನ್ನು ತನ್ನ ಹೊಸ ನಕ್ಷೆಯಲ್ಲಿ ಸೇರಿಸಿಕೊಂಡ ನಂತರ, ನೇಪಾಳ ಪ್ರಧಾನಿ ಕೆ.ಪಿ. ಓಲಿ ಭಾರತದ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ವೈರಸ್ ಚೀನೀ ಮತ್ತು ಇಟಾಲಿಯನ್ ವೈರಸ್‌ಗಿಂತ “ಹೆಚ್ಚು ಮಾರಕವಾಗಿದೆ” ಎಂದು ಒಲಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಒಲಿ ನೇಪಾಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹರಡಿರುವುದಕ್ಕೆ ಭಾರತವನ್ನು ದೂಷಿಸಿದ್ದಾರೆ.

“ಅಕ್ರಮ ಸಂಪರ್ಕದಾರಿಯ ಮೂಲಕ ಭಾರತದಿಂದ ಬರುತ್ತಿರುವವರು ದೇಶದಲ್ಲಿ ವೈರಸ್ ಹರಡುತ್ತಿದ್ದಾರೆ ಮತ್ತು ಕೆಲವು ಸ್ಥಳೀಯ ಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಸರಿಯಾದ ಪರೀಕ್ಷೆಯಿಲ್ಲದೆ ಭಾರತದಿಂದ ಜನರನ್ನು ಕರೆತರುತ್ತಿದ್ದಾರೆ” ಎಂದು ಒಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕೊರೊನಾ ಆರೋಗ್ಯ ಬಿಕ್ಕಟ್ಟಿನ ನಂತರ ಸಂಸತ್ತಿನಲ್ಲಿ ಪ್ರಧಾನಿ ಒಲಿ ಮಾಡಿದ ಮೊದಲ ಭಾಷಣದಲ್ಲಿ, ನೇಪಾಳವು ಭಾರತದ ಭೂಪ್ರದೇಶದ ಭಾಗವಾಗಿರುವ ಕಾಲಾಪಾನಿ-ಲಿಂಪಿಯಧುರ-ಲಿಪುಲೆಖ್ ಪ್ರದೇಶವನ್ನು “ಯಾವುದೇ ಬೆಲೆತೆತ್ತಾದರೂ ಮರಳಿ ತರುತ್ತದೆ” ಎಂದು ಹೇಳಿದರು.

ಈ ಮೂರು ವಿವಾದಿತ ಪ್ರದೇಶಗಳನ್ನು ಹೊಸ ಭೂಪಟದಲ್ಲಿ ಸೇರಿಸಿರುವ ಕ್ರಮವನ್ನು ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದೆ.

ನೇಪಾಳ ಮತ್ತು ಭಾರತ ದೇಶಗಳು 1,800 ಕಿಮೀ ತೆರೆದ ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಬ್ರಿಟಿಷರ ಜತೆ 1816ರಲ್ಲಿ ಸಹಿ ಹಾಕಲಾದ ಸುಗೌಲಿ ಒಪ್ಪಂದಾನುಸಾರ ಲಿಪುಲೆಖ್ ಪಾಸ್ ತನ್ನದೆಂದು ನೇಪಾಳ ಹೇಳುತ್ತಿದೆ.

ಭಾರತ ಚೀನಾದ 1962ರಲ್ಲಿನ ಯುದ್ಧದ ನಂತರ ಲಿಂಪಿಯಧುರ ಹಾಗೂ ಕಾಲಾಪಾನಿಯಲ್ಲಿ ಭಾರತೀಯ ಸೇನೆಗಳು ನಿಯೋಜನೆಗೊಂಡಿವೆಯಾದರೂ ಈ ಪ್ರದೇಶಗಳೂ ತನ್ನದೆಂದು ನೇಪಾಳ ಹೇಳುತ್ತಿದೆ.


ಓದಿ: ಅಮೇರಿಕಾದ 200 ವೆಂಟಿಲೇಟರುಗಳು ಹಾಗೂ ನಮ್ಮ ದೇಶದ ಪ್ರಧಾನಿಯ ಕತೆ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here