Homeಅಂತರಾಷ್ಟ್ರೀಯಐಸಿಸ್' ಉಗ್ರವಾದಿ ಸಂಘಟನೆಯನ್ನು ಹೆತ್ತದ್ದು ಅಮೆರಿಕದ ಸಿಐಎ! - ಜೂಲಿಯನ್ ಅಸ್ಸಾಂಜ್

ಐಸಿಸ್’ ಉಗ್ರವಾದಿ ಸಂಘಟನೆಯನ್ನು ಹೆತ್ತದ್ದು ಅಮೆರಿಕದ ಸಿಐಎ! – ಜೂಲಿಯನ್ ಅಸ್ಸಾಂಜ್

ಐದು ಲಕ್ಷ ಯುಎಸ್‌ಎ ಕೇಬಲ್ ಸಂದೇಶ ಬಿಡುಗಡೆಗೊಳಿಸಿದ ವೀಕಿಲೀಕ್ಸ್.

- Advertisement -
- Advertisement -

ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿ ಇಸ್ಲಾಮಿಕ್ ಮುಖವಾಡದಲ್ಲಿ ಭಯೋತ್ಪಾದನೆ ನಡೆಸಿದ ಐಸಿಸ್ (ISIS) ಸಂಘಟನೆಯನ್ನು ಹುಟ್ಟುಹಾಕಿದ್ದೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಗುಪ್ತಚರ ಸಂಸ್ಥೆಯಾಗಿರುವ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ ಅಥವಾ ಸಿಐಎ ಎಂದು ವಿಶ್ವದಾದ್ಯಂತದ ನೂರಾರು ಮಹಾನಾಯಕರ ಮತ್ತು ದೇಶಗಳ ಗುಟ್ಟುಗಳನ್ನು ರಟ್ಟು ಮಾಡಿ, ಲಕ್ಷಾಂತರ ದಾಖಲೆಗಳನ್ನು ಅಂತರ್ಜಾಲದಲ್ಲಿ ಬಹಿರಂಗಗೊಳಿಸಿದ ‘ವೀಕಿ ಲೀಕ್ಸ್’ ಸ್ಥಾಪಕ ಜೂಲಿಯನ್ ಅಸ್ಸಾಂಜ್ ಹೇಳಿದ್ದಾರೆ.

ಅದಕ್ಕೆ ಪೂರಕವಾಗಿ 1979ರಷ್ಟು ಹಳೆಯ ಯುಎಸ್‌ಎಯ ರಾಜತಾಂತ್ರಿಕ ಸಂಪರ್ಕ ಕೇಬಲ್‌ಗಳನ್ನು ಅವರು ಬಿಡುಗಡೆಗೊಳಿಸಿದ್ದಾರೆ. ಈ ತನಕ ಈ ದಾಖಲೆಗಳು ಗುಪ್ತವಾಗಿದ್ದವು. express.co.uk ಯಲ್ಲಿ ಜೋನ್ ಅಸ್ಟಿನ್ ಬರೆದಿರುವ ವರದಿಯಲ್ಲಿ ಇದನ್ನು ವಿವರಿಸಲಾಗಿದೆ.

ನವೆಂಬರ್ 28, 2010ರಂದು ‘ವೀಕಿಲೀಕ್ಸ್’ ಯುಎಸ್‌ಎ ಸಹಿತ ಹಲವು ದೇಶಗಳ ಸೂಕ್ಷ್ಮ ಮತ್ತು ಹಿಂದೆ ಗುಪ್ತವಾಗಿದ್ದ ದಾಖಲೆಗಳನ್ನು ಬಹಿರಂಗಪಡಿಸಿತ್ತು. ನಂತರ ಅದು ಪಬ್ಲಿಕ್ ಲೈಬ್ರರಿ ಫಾರ್ ಯುಎಸ್ ಡಿಪ್ಲೋಮೆಸಿ (ಪಿಎಲ್‌ಯುಎಸ್‌ಡಿ) ಎಂಬ ವಿಭಾಗ ತೆರೆದಿತ್ತು. ಅದರಲ್ಲಿ ಈಗ ಹೊಸದಾಗಿ 1979ರ ನಂತರದ 5,31,525 ಹೊಸ ಸಂಪರ್ಕ ಕೇಬಲ್‌ಗಳನ್ನು ಬಹಿರಂಗಪಡಿಸಲಾಗಿದೆ.

ಈ ವರದಿಯಲ್ಲಿ ಇರುವಂತೆ, “ಕಾರ್ಟರ್ ಕೇಬಲ್ III” ಎಂದು ಕರೆಯಲಾಗುವ ಈ ಕೇಬಲ್‌ಗಳ ಮೂಲಕ ಅಸ್ಸಾಂಜ್ ಜಿಮ್ಮಿ ಕಾರ್ಟರ್ ಕಾಲದ ಬೆಳವಣಿಗೆಗಳನ್ನು ವಿವರಿಸುತ್ತಾರೆ. ಅವುಗಳಿಂದಲೇ ಐಸಿಸ್ ತಲೆಯೆತ್ತಲು ಸಾಧ್ಯವಾಯಿತು ಎನ್ನುತ್ತಾರವರು.

ನಮ್ಮ ಆಧುನಿಕ ಯುಗದ ಆರಂಭ ಯಾವುದು ಎಂದರೆ, 1979 ಎನ್ನಬಹುದು ಎಂಬ ಮಾತು ಇಲ್ಲಿ ದಾಖಲಾಗಿದೆ. ಸೋವಿಯತ್ ಒಕ್ಕೂಟವನ್ನು (ಯುಎಸ್‌ಎಸ್‌ಆರ್) ಬಗ್ಗುಬಡಿಯಲು ಅಫಘಾನಿಸ್ತಾನದ ಮುಜಾಹಿದ್ದೀನ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಸಲುವಾಗಿ ಸಾವಿರಾರು ಕೋಟಿ ಡಾಲರುಗಳನ್ನು ಒದಗಿಸುವ ಸೌದಿ ಅರೇಬಿಯಾ ಜೊತೆಗೆ ಸಿಐಎ ಮಾಡಿದ ನಿರ್ಧಾರ ಅಲ್ ಖಾಯಿದ ಎಂಬ ಉಗ್ರಗಾಮಿ ಸಂಘಟನೆಯ ಸ್ಥಾಪನೆಗೆ ಕಾರಣವಾಯಿತು ಎಂದು ಅಸ್ಸಾಂಜ್ ವಾದಿಸಿದ್ದಾರೆ. ಪರಿಣಾಮವಾಗಿ 9/11 ಭಯೋತ್ಪಾದಕ ದಾಳಿ, ಅಫಘಾನಿಸ್ತಾನ್ ಮತ್ತು ಇರಾಕ್ ಮೇಲಿನ ದಾಳಿ ಮತ್ತು ಐಸಿಸ್ ಸ್ಥಾಪನೆಗೆ ಕಾರಣವಾಯಿತೆಂದು ಅವರ ವಾದ.

ನಂತರದಲ್ಲಿ ಐಸಿಸ್ ಹೆಸರಿನಲ್ಲಿಯೇ ಯುಎಸ್‌ಎ, ಲಿಬಿಯಾ, ಸುಡಾನ್, ಈಜಿಪ್ಟ್, ಯೆಮೆನ್ ಮತ್ತು ಸಿರಿಯಾದಂತಹ ತೈಲ ಸಮೃದ್ಧ ದೇಶಗಳಲ್ಲಿ ಹಸ್ತಕ್ಷೇಪ ನಡೆಸಿದ್ದು, ಇದೀಗ ಇನ್ನೊಂದು ತೈಲಸಮೃದ್ಧ ದೇಶ ಇರಾನ್‌ನಲ್ಲಿಯೂ ಹಾಗೆ ಮಾಡಲು ಹವಣಿಸುತ್ತಿದೆ ಎಂದು ಈ ಸಂದರ್ಭದಲ್ಲಿ ನೆನಪಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...