ಬಾಲಕಿ ಜ್ಯೋತಿ 1200 ಕಿ.ಮಿ. ಕ್ರಮಿಸಿದ್ದು ಭಾರತೀಯರ ಸುಂದರವಾದ ಸಾಧನೆಯೆಂದ ಇವಾಂಕ ಟ್ರಂಪ್: ಹಲವರ ಆಕ್ರೋಶ

1200 ಕಿ.ಮಿ. ದೂರ ಕ್ರಮಿಸಿದ ಜ್ಯೋತಿಯನ್ನು ಹೊಗಳಿದ ಇವಾಂಕ ಟ್ರಂಪ್, ಹಲವರ ಆಕ್ರೋಶ

ತನ್ನ ತಂದೆಯನ್ನು 1200 ಕಿ.ಮೀ. ದೂರದ ಹಳ್ಳಿಗೆ ತಲುಪಿಸಿದ ಜ್ಯೋತಿ ಕುಮಾರಿಯ ವರದಿಯನ್ನು ಇಟ್ಟು ಭಾರತೀಯರನ್ನು ಹೊಗಳಿದ ಇವಾಂಕ ಟ್ರಂಪ್ ವಿರುದ್ದ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಗುರುಗ್ರಾಮ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ಗಾಯಗೊಂಡ ತಂದೆಯನ್ನು 1,200 ಕಿ.ಮೀ ಗಿಂತಲೂ ದೂರದ ಹಳ್ಳಿಗೆ ಸೈಕಲ್‌ನ ಹಿಂಭಾಗದಲ್ಲಿ ಕೂರಿಸಿ ಕರೆದೊಯ್ದದ ಜ್ಯೋತಿ ಕುಮಾರಿ ಎಂಬ ಬಿಹಾರದ ಬಾಲಕಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕ ಟ್ರಂಪ್ “ಈ ಸಾಧನೆಯೂ ಭಾರತೀಯರ ಸಹಿಷ್ಣುತೆ ಮತ್ತು ಪ್ರೀತಿಯ ಕಲ್ಪನೆಯನ್ನು ಸೆರೆಹಿಡಿದಿದೆ, ಹಾಗೆಯೆ ಸೈಕ್ಲಿಂಗ್ ಪಡರೇಷನ್ ಕೂಡಾ” ಎಂದು ಹೇಳಿದ್ದರು. ಇದನ್ನು ಖಂಡಿಸಿ ಹಲವಾರು ಜನರು ಇವಾಂಕ ಇವಾಂಕ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂಡಿಯಾಟುಡೆಯ ಮಾಜಿ ಸಂಪಾದಕ ದಿಲೀಪ್ ಮಂಡಲ್ “ಜ್ಯೋತಿ ಪಾಸ್ವಾನ್ ಅವರ ಈ ಕಥೆಯು ಧೈರ್ಯ ಮತ್ತು ಉತ್ಸಾಹದ ಜೊತೆಗೆ ಭಾರತದ ಬಗ್ಗೆ ಇರುವ ದುಃಖ ಮತ್ತು ಅಸ್ವಸ್ಥತೆಯನ್ನು ಸಹ ತೋರಿಸುತ್ತದೆ. ಅಂತಹ ಕಥೆಗಳು ಭಾರತದಿಂದ ಜಗತ್ತನ್ನು ತಲುಪಬಾರದು ಎಂದು ಹಾರೈಸುತ್ತೇನೆ. ವಿಶ್ವದ ಜನಸಂಖ್ಯೆಯ 17% ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ ಕಲ್ಯಾಣವಿಲ್ಲದೆ ವಿಶ್ವದ ಕಲ್ಯಾಣ ಅಸಾಧ್ಯ. ಎಚ್‌ಡಿಐನಲ್ಲಿ ಭಾರತ 130 ನೇ ಸ್ಥಾನದಲ್ಲಿದೆ.” ಎಂದು ಹೇಳಿದ್ದಾರೆ.

ಲೇಖಕಿ ರೂಪಾ ಸುಬ್ರಮಣ್ಯ “ನೀವು ಗಂಭೀರವಾಗಿ ಈ ವಿಸ್ಮೃತಿಶೀಲರಾಗಿದ್ದೀರಾ? ಭಾರತದ ಕೆಟ್ಟ ಕಲ್ಪನೆಯ ಲಾಕ್‌ಡೌನ್ ನಿಂದಾಗಿ ಈ ಮಗು ಮತ್ತು ಅವಳ ಕುಟುಂಬವು ಭಯಾನಕ ಅನುಭವವನ್ನು ಅನುಭವಿಸಿದೆ. ಈ ಘಟನೆ ಅವಳು ವೃತ್ತಿಪರ ಸೈಕ್ಲಿಸ್ಟ್ ಆಗಬೇಕೆಂಬ ಆಕಾಂಕ್ಷೆಯಿಂದ ಆಗಿದ್ದಲ್ಲ, ಇದು ಮಾನವೀಯ ದುರಂತವಾಗಿದೆ.” ಎಂದು ಹೇಳಿದ್ದಾರೆ.

ಲೇಖಕಿ ಸಂಜುಕ್ತ ಬಸು “ಬಡತನ ಎಂದರೇನು ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಿಮಗೆ ನಾಚಿಕೆಯಾಗಬೇಕು.” ಎಂದು ಹೇಳಿದ್ದಾರೆ.

ಮತ್ತೊಬ್ಬರು “ಇದರಲ್ಲಿ ಏನು ಸುಂದರವಾಗಿದೆ? ನೀವು ಬಾಲಕಿಯ ಅಸಹಾಯಕತೆಯನ್ನು ನೋಡುತ್ತಿಲ್ಲ. ಇದು ಮೋದಿ ಸರ್ಕಾರದ ಸಂಪೂರ್ಣ ವೈಫಲ್ಯ.” ಎಂದು ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

ಮತ್ತೊಬ್ಬರು, “ನಮ್ಮಲ್ಲಿ ಅಂತಹ ನೂರಾರು ಜ್ಯೋತಿ ಕುಮಾರಿಯರು, ಹಸಿವಿನ ಹೊಟ್ಟೆ, ಬರಿಯ ಬೆತ್ತಲೆ ಪಾದಗಳು, ತಾಯಂದಿರು, ಅಂಗವಿಕಲರು ಇದ್ದಾರೆ. ಅಲ್ಲದೆ ಅವರೂ ಇದೇ ರೀತಿ ಅವರ ಸೈಕಲಿನಲ್ಲಿ, ಕಾಲ್ನಡಿಗೆಯಲ್ಲಿ, ಮನೆಗಳ ಕಡೆಗೆ ನಡೆಯುತ್ತಿದ್ದಾರೆ. ಮಕ್ಕಳನ್ನು ಹೊಂದಿರುವ ತಾಯಂದಿರು ಇನ್ನೂ ದೂರ ಹೋಗುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ಅಥವಾ ವಿಷಾದದ ವಿಷಯವೇ ಎಂದು ನನಗೆ ತಿಳಿದಿಲ್ಲ.” ಎಂದು ಹೇಳಿ ಕೆಳಗಿನ ಚಿತ್ರವನ್ನು ಟ್ಯಾಗ್ ಮಾಡಿದ್ದಾರೆ.

ಸೂರ್ಯನಾರಾಯಣ್ ಎಂಬವರು “ಇದು ನಿಜವಾಗಿಯೂ ನಿಮ್ಮ ತಂದೆಯ ಸ್ನೇಹಿತರಾರ ನರೇಂದ್ರ ಮೋದಿಯ ವೈಫಲ್ಯವನ್ನು ತೋರಿಸುತ್ತಿದೆ. ಭಾರತದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೇ ಲಾಕ್ ಡೌನ್ ಮಾಡಿದರಿಂದ, ಇಂತಹ ಲಕ್ಷಾಂತರ ಬಡ ಜನರನ್ನು ಹತಾಶೆಗೆ ತಳ್ಳಿದೆ. ನೀವು ಅದನ್ನು ಕೆಲವು ದೊಡ್ಡ ಸಾಧನೆ ಎಂದು ತೋರಿಸುತ್ತಿದ್ದೀರಿ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಗುರುಗ್ರಾಮ್‌ನಲ್ಲಿ ಸಿಲುಕಿಕೊಂಡಿದ್ದ ಬಿಹಾರ ಮೂಲದ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ತನ್ನ ಗಾಯಗೊಂಡ ತಂದೆಯನ್ನು 1,200 ಕಿ.ಮೀ ದೂರದ ಹಳ್ಳಿಗೆ ಸೈಕಲ್ ಮೂಲಕ ಕರೆದೊಯ್ದಿದ್ದರು. ಇದನ್ನು ಗಮನಿಸಿದ ಸೈಕ್ಲಿಂಗ್ ಫಡರೇಷನ್ ಬಾಲಕಿಯನ್ನು ಲಾಕ್ ಡೌನ್ ನಂತರ ಟ್ರಯಲ್ ಗೆ ಬರುವಂತೆ ಕೇಳಿಕೊಂಡಿತ್ತು.


ಓದಿ: ತಾನು ಮಾಡುವ ಮಹಾನ್‌ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?


ಓದಿ: ಅಮೆರಿಕಾ ಅಧ್ಯಕ್ಷರ 200 ವೆಂಟಿಲೇಟರ್ ಮತ್ತು ಪ್ರಧಾನಿ ಮೋದಿಯ ಕತೆ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here