Homeರಾಜಕೀಯ“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

“ನೀವು ಜೈಲಲ್ಲಿರೋದು, ನಾನು ಪಾರಿಜಾತದಲ್ಲಿರೋದು ಸರೀನಾ”

- Advertisement -
- Advertisement -

ಕೊಡುಗೈ ದಾನಿಯಾದ ಆದುನಿಕ ಕರ್ಣ ನಮ್ಮ ಬಳ್ಳಾರಿ ಗಾಲಿಯನ್ನು ಹಿಡಿದು ಜೈಲಿಗೆ ಹಾಕಿದ ಕ್ಷಣ ನೆನಸಿಕೊಂಡರೆ ಮನಸ್ಸಿಗೆ ವೈರಾಗ್ಯ ಆವರಿಸಿಕೊಂಡು ಮನಸ್ಸು ಆರ್ದ್ರಗೊಳುತ್ತದಲ್ಲಾ. ಇದಕ್ಕೆ ಕಾರಣವನ್ನು ರೆಡ್ಡಿಯನ್ನೆÃ ಕೇಳಿ ತಿಳಿದುಕೊಂಡರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್‌ಟೋನ್: ‘ಏನಿದೀ ಗ್ರಹಚಾರವೋ ಏನಿದೀ ವನವಾಸವೊ ಏನ ಮಾಡಿದನೆಂದು ಈ ಪರಿ ಎನಗೆ ತಂದೆಯೋ ಪಶುಪತೀ…. ಏನಿದೀ…..’ “ಹಲೋ ಯಾರು”
“ಸಾರ್ ನಾನು ಪತ್ರಕರ್ತ ಯಾಹು ಅಂತ”
“ಯಾಹು ಅಂತ್ಲ ಏನ್ಹೆÃಳಿ”
“ತಾವ್ಯಾರು ಸಾರ್”
“ನಾನು ಜೈಲ್ ಸೂಪರ್‌ಡೆಂಟ್ ಏನಾಗಬೇಕು ಕೇಳಿ”
“ಜನಾರ್ದನ ರೆಡ್ಡಿಯವರು ಪತ್ರಕರ್ತರಿಗೆ ಪರಮ ಮಿತ್ರರು ಸಾರ್. ನಮಗೆಲ್ಲ ತುಂಬ ಸಹಾಯ ಮಾಡಿದಾರೆ. ಅವುರ ಜೊತೆ ಒಂದೆರಡು ಮಾತಾಡಬೇಕು. ಅವುಕಾಶ ಮಾಡಿಕೊಡಿ ಸಾರ್”
“ಆಯ್ತು ಮಾತಾಡಿ”
“ಹಲೋ”
“ನಾನು ಸಾರ್ ಯಾಹು”
“ಯಾಹು ಅವರೆ ನೀವು ಫೋನ್ ಮಾಡಿದ್ದಕ್ಕೆ ತುಂಬ ಸಂತೋಷ ಆಯ್ತು. ನನ್ನ ಕೈಯಿಂದ ಲಕ್ಷಲಕ್ಷ ಹಣ ಪಡುಕೊಂಡ ಯಾವ ಪತ್ರಕರ್ತರು ಇದುವರೆಗೂ ನನಗೆ ಫೋನ್ ಮಾಡಿಲ್ಲ. ನೀವು ಮಾಡಿದ್ದಕ್ಕೆ ನನಗೆ ಸಂತೋಷ ಆಗಿದೆ, ನಮ್ಮ ಪಾರಿಜಾತದಲ್ಲಿ ಕುಳಿತಿರಿ ಬಂದುಬಿಡ್ತಿÃನಿ”
“ಏನು ಸಾರ್ ಪಾರಿಜಾತ ಅನ್ನೊÃ ಬಂಗ್ಲೆÃಲಿ ಬಡವನಾದ ನನ್ನಂಥ ಪತ್ರಕರ್ತ ಇರೋದು. ನೀವು ಪರಪ್ಪನ ಅಗ್ರಹಾರದ ಜೈಲಿನ ಕೋಣೆಲಿರೋದು ನನಿಗ್ಯಾಕೊ ದುಖಃ ಆಗ್ತಾಯಿದೆ ಸಾರ್”
“ನೋಡಿ ಕಷ್ಟಗಳು ಮನುಷ್ಯನಿಗಷ್ಟೆÃ ಬರೋದು ಗುಡ್ಡಗಳಿಗಲ್ಲ ಸಹಿಸಿಕೊಳ್ಳಬೇಕು”
“ಗುಡ್ಡಗಳಿಗೂ ಕಷ್ಟ ಬರುತ್ತೆ ಸಾರ್. ಭೂದೇವಿಯ ಸ್ತನಗಳಂಗೆ ಕಾಣುತಿದ್ದ ಸುಂದರವಾದ ಬಳ್ಳಾರಿ ಜೋಡಿ ಗುಡ್ಡಗಳು ನಿರ್ನಾಮ ಆಗಿ ನಮ್ಮ ವೈರಿ ರಾಷ್ಟç ಚೀಣಾದಲ್ಲಿವೆಯಂತೆ. ಆದ್ದರಿಂದ ಕಷ್ಟ ಮನುಷ್ಯರಿಗಷ್ಟೆÃ ಅಲ್ಲ ನಿಸರ್ಗಕ್ಕೂ ಬಂದಿದೆ ಸಾರ್. ನಿಸರ್ಗಪ್ರಿಯನಾದ ತಮಗೆ ಕಷ್ಟ ಬಂದಿದ್ದನ್ನು ನಾನು ಸಹಿಸಿಗಳಕ್ಕಾಗ್ತಯಿಲ್ಲ”
“ನೋಡಿ, ನಾಲ್ಕು ವರ್ಷ ಜೈಲಲ್ಲಿ ಇದ್ದ ನನಗೆ ನಾಲ್ಕು ದಿನ ಇರೋದು ಕಷ್ಟ ಅಲ್ಲ. ನನ್ನ ಹಳೆ ಕೊಠಡಿಯನ್ನ ನಮ್ಮ ಜೈಲರ್ ಮಿತ್ರರು ನನ್ನ ಸ್ವಂತ ಕೊಠಡಿ ತರ ಮಾಡಿದಾರೆ ಗೊತ್ತ”
“ಅದನ್ನ ಪರ್‌ಚೇಸ್ ಮಾಡಿದ್ರೆ ಹೇಗೆ ಸಾರ್”
“ಯಾಕೆ ಹಾಗೇಳ್ತಿರಿ”
“ವಿನಾಕಾರಣ ಒಬ್ಬ ಅಮಾಯಕನ್ನ ಇ.ಡಿ ಡೀಲ್‌ನಲ್ಲಿ ಸಿಕ್ಕಿಸಿ ಜೈಲಿಗಾಕಿದ ನೆನಪಿಗೆ ಮತ್ತು ಸರಕಾರ ಅದೇಳಿದಂಗೆ ಕೇಳೊ ಈ ಪೊಲೀಸರಿಗೆ ಧಿಕ್ಕಾರದ ರೂಪವಾಗಿ ಅದೊಂದು ಸ್ಮಾರಕವಾಗಲಿ, ಅಂತ ಹೇಳಿದೆ ಸಾರ್”
“ನಿಮ್ಮ ಅಲೋಚನೆ ಸರಿ, ಅದ್ರೆ ಜೈಲಿರೋವರಿಗೆ ಅದನ್ನ ಗಾಲಿ ಜನಾರ್ದನ ರೆಡ್ಡಿ ಕೊಠಡಿ ಅಂತ ನಾಮಕರಣ ಮಾಡಿಬಿಡ್ತಾರೆ. ಆದ್ದರಿಂದ ಅದನ್ನ ಕೊಳ್ಳೊÃದು ಬೇಕಾ? ನಾನು ಬೇಗ ಬರ್ತೀನಿ. ನಮ್ಮ ಮನೇಲಿ ಕುಳಿತಿರಿ”
“ಕಷ್ಟ ಆಗುತ್ತೆ ಸಾರ್. ಸಾವಿರಾರು ಕೋಟಿ ಒಡೆಯ ಕೊಡುಗೈ ದಾನಿ ವಿನಾಕಾರಣ ಜೈಲಿನಲ್ಲಿರುವಾಗ ಅಂತವನ ಮನೇಲಿದ್ರೆ ದುಃಖ ತಡಿಯಕ್ಕಾಗಲ್ಲ. ಯಾಕಂದ್ರೆ ಸಾವಿರಾರು ಕೋಟಿಯನ್ನ ಕೈಯಲ್ಲೂ ಮುಟ್ಟದೆ ವ್ಯವಹಾರ ಮಾಡಿದಂತಹ ನೀವು ಇಪ್ಪತ್ತು ಕೋಟಿಗೆ ಕೈಚಾಚಿದ್ರಿ ಅನ್ನದನ್ನ ಇಡೀ ಕರ್ನಾಟಕ ನಂಬುತಾಯಿಲ್ಲ ಸಾರ್. ಅದೊಂದೇ ಸಮಾಧಾನದ ವಿಷಯ ಸಾರ್”
“ದೇವರೂ ಕೂಡ ನಂಬುತಾಯಿಲ್ಲ. ಯಾಕೆ ಅಂದ್ರೆ ಭಗವಂತನೇ ನನಗೆ ಅಷ್ಟೊಂದು ಐಶ್ವರ್ಯ ಕೊಟ್ಟಿದ್ದಾನೆ. ನಾನು ಆತನಿಗೇ ಒಂದು ಕಿರೀಟವನ್ನ ಕೊಟ್ಟೆ ಗೊತ್ತ”
“ಕಿರೀಟ ಈಸಗೊಂಡ ತಿಮ್ಮಪ್ಪ ನಿಮ್ಮನ್ನ ಕಾಪಾಡಬೇಕಿತ್ತು ಸಾರ್”
“ಕಾಪಾಡ್ತನೆ ಸ್ವಲ್ಪ ತಡ ಆಗಬಹುದು. ಒಬ್ಬ ಪೋಲಿಸ್ ಮಗನನ್ನ ಕುಬೇರನನ್ನಾಗಿ ಮಾಡಿದ ಭಗವಂತ ನನ್ನನ್ನ ಯಾವತ್ತೂ ಕೈ ಬಿಟ್ಟಿಲ್ಲ. ನನ್ನನ್ನ ಅಪರಾಧಿ ಅಂತ ಪರಿಗಣಿಸೋದಕ್ಕೆ ಹೋರಾಡ್ತಯಿರೊ ನನ್ನ ವೈರಿಗಳಿಗೆ ಸರಿಯಾದ ಉತ್ತರ ಕೊಡೋದಕ್ಕೆ ನನ್ನ ಮಗಳ ಮದುವೆಯನ್ನು ಸಾವಿರಾರು ಕೋಟಿ ಖರ್ಚು ಮಾಡಿ ಮಾಡಿದೆ. ಅದೂ ನೋಟು ಬ್ಯಾನಾಗಿದ್ದ ಸಂದರ್ಭ. ಆಗೆಲ್ಲ ಭಗವಂತ ನಮಗೆ ಸಹಾಯ ಮಾಡಿದಾನೆ”
“ನೀವು ಬಿ.ಜೆ.ಪಿ.ಗೂ ಭಾರಿ ಸಹಾಯ ಮಾಡಿದ್ರಲ್ಲ ಸಾರ್”
“ಮೊದಲ ಸಮ್ಮಿಶ್ರ ಸರಕಾರ ರಚನೆಯಾದದ್ದೆÃ ನನ್ನಿಂದ. ನಾನು ಕುಮಾರಸ್ವಾಮಿಗೆ ನೂರೈವತ್ತು ಕೋಟಿ ರೂಪಾಯಿ ಕೊಟ್ಟಾಗ ಆತ ಎಲ್ಲ ಶಾಸಕರನ್ನು ರೆಸಾರ್ಟಿಗೆ ತಕ್ಕೊಂಡು ಹೋಗಿ ನೇರ ವಿಧಾನಸೌಧದ ಮುಂದಕ್ಕೆ ತಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ತಗೊಂಡ್ರು”
“ಹೌದ ಸಾರ್”
“ಇದು ನೂರಕ್ಕೆ ಇನ್ನೂರು ಪರಸೆಂಟು ನಿಜ. ಆದ್ರೆ ಅದನ್ನ ಅಲ್ಲಗಳದ್ರು. ಅದಕ್ಕೆ ಅವರಿಗೆ ಬೈಪಾಸ್ ಸರ್ಜರಿ ಆಯ್ತು”
“ಇಸಗೊಂಡ ದುಡ್ಡನ್ನ ಇಲ್ಲ ಅಂದ್ರೆ ಬೈಪಾಸಾಗುತ್ತ ಸಾರ್”
“ಅದು ಭಗವಂತನಿಗೆ ಬಿಟ್ಟ ವಿಚಾರ. ಬೈಪಾಸಾಗಬಹುದು ಅಥವಾ ಮಕ್ಕಳೆ ತೀರೋಗಬಹುದು. ಏನಾದ್ರು ಆಗಬಹುದು”
“ನಿಮ್ಮ ತರ್ಕ ನಿಜ ಸಾರ್ ನೀವೀಗಾಗ್ಲೆ ಹೇಳಿರೊ ತರ ವಿನಾಕಾರಣ ನಿಮ್ಮನ್ನ ಜೈಲಿಗಾಕಿದ ಸಿದ್ದರಾಮಯ್ಯನವರ ಮಗ ತೀರೋದ. ನಿಮ್ಮತ್ರ ಹಣ ತಗೊಂಡು ಇಲ್ಲವೇ ಇಲ್ಲ ಅಂದ ಕುಮಾರಣ್ಣನವರಿಗೆ ಬೈಪಾಸಾಯ್ತು. ಇದೇ ಈಗ ಅ್ಯಂಬಿಡೆಂಟ್ ಕಂಪನಿ ಮಾಲಿಕ ಸಯ್ಯದ್ ಅಹಮದ್ ಹತ್ರ ಇಪ್ಪತ್ತು ಕೋಟಿ ತಗೊಂಡು ಆತನಿಗೂ ನನಗೂ ಯಾವ ವ್ಯವಹಾರವೂ ನಡೆದಿಲ್ಲ, ನನ್ನ ಜೊತೆ ಇರೋ ಆತನ ಫೋಟೊ ಯಾವಾಗಲೊ ಆತನೇ ಬಂದು ನನಗೆ ಗೊತ್ತಿಲ್ಲದಂಗೆ ತಗಿಸಿಕೊಂಡಿದ್ದು ಅಂತ ನೀವು ಏನೇ ಸಬೂಬು ಹೇಳಿದ್ರೂ ಕೂಡ ಜೈಲುಪಾಲಾದ್ರಿ. ಇದನ್ನೆಲ್ಲಾ ನೋಡಿದ್ರೆ ನಿಮ್ಮ ಭಗವಂತನ ಕ್ರಮಗಳು ಒಂಥರಾ ಸರಿಯಾಗಿವೆ ಸಾರ್”
“ನೀವು ಹೇಳಿದ ಮಾತುಗಳು ಅರ್ಥ ಆಗ್ತಾಯಿಲ್ಲ”
“ಹೊರಗಡೆ ಬಂದ್ ಮೇಲೆ ನಿಮ್ಮ ವಕೀಲರ ಪೀಜು ಕೊಡಿ ಸಾರ್”
“ನಮ್ಮದು ಕೊಡುಗೈ ಕುಟುಂಬ”
“ಥೂ..ಥೂ…ಥೂತ್ತೆÃರಿ!!”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...