Homeನಿಜವೋ ಸುಳ್ಳೋಹೊಸ ವರ್ಷದಲ್ಲಿ ನಾವು ನಂಬಿಬಿಟ್ಟಿದ್ದ ಟಾಪ್‌ ಸುಳ್ಳು ಸುದ್ದಿಗಳು ಇಲ್ಲಿವೆ...

ಹೊಸ ವರ್ಷದಲ್ಲಿ ನಾವು ನಂಬಿಬಿಟ್ಟಿದ್ದ ಟಾಪ್‌ ಸುಳ್ಳು ಸುದ್ದಿಗಳು ಇಲ್ಲಿವೆ…

- Advertisement -
  1. ಗ್ರಾಮ ಪಂಚಾಯಿತಿ ಚುನಾವಣೆ ಏಪ್ರಿಲ್ 5 ಮತ್ತು 9ಕ್ಕೆ: ಇದು ಸುಳ್ಳು ಸುದ್ದಿ
- Advertisement -

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು 10ನೇ ತರಗತಿ ಪಾಸಾಗಿರಬೇಕು, ಪಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಕಡ್ಡಾಯ ಎಂಬ ಸುದ್ದಿ ಹರಿದಾಡಿತ್ತು. ಏಪ್ರಿಲ್ 5 ಮತ್ತು 9ಕ್ಕೆ ಚುನಾವಣೆ ಸಹ ನಡೆಯಲಿದೆ ಎಂಬ ಆದೇಶವೂ ಬಂದಿತ್ತು.]

ಆದರೆ ಇದು ಸುಳ್ಳು ಸುದ್ದಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇನ್ನು ಅಧಿಸೂಚನೆ ಹೊರಡಿಸಿಲ್ಲ ಮತ್ತು ಯಾವುದೇ ನಿಯಮಗಳಿಲ್ಲ ಎಂದು ಹೊಸ ಪ್ರಕಟಣೆ ಹೊರಡಿಸಿದೆ.

2. ಚಪಾಕ್ ಚಿತ್ರದಲ್ಲಿ ಮುಸ್ಲಿಂ ಆರೋಪಿಯ ಹೆಸರನ್ನು ಹಿಂದೂ ಹೆಸರಾಗಿ ಬದಲಾಯಿಸಲಾಗಿದೆಯೇ?

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಆಸಿಡ್ ದಾಳಿಗೊಳಗಾದ ಹೆಣ್ಣುಮಗಳ ಬದುಕಿನ ಘಟನೆಯಾಧಾರಿತ ಚಪಾಕ್ ಎಂಬ ಚಿತ್ರದಲ್ಲಿ ಹಣ ಹೂಡಿದ್ದಲ್ಲದೇ ತಾನೂ ನಟಿಸಿದ್ದಾಳೆ. ಈ ಚಿತ್ರವೂ ಜನವರಿ 10ರಂದು ಬಿಡುಗಡೆಯಾಗಿದೆ.

ಇದಕ್ಕೂ ಮೊದಲು ಜನವರಿ 05ರಂದು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಎಬಿವಿಪಿ, ಬಿಜೆಪಿ ಗೂಂಡಾಗಳು ನುಗ್ಗಿ ಹಲ್ಲೆ ಮಾಡಿದ್ದನ್ನು ಖಂಡಿಸಿ ದೀಪಿಕಾ ಪಡುಕೋಣೆ ಜೆಎನ್‌ಯುಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು.

ಇಷ್ಟಕ್ಕೆ ದೀಪಿಕಾ ವಿರುದ್ಧ ದ್ವೇಷ ಸಾಧಿಸಿದ ಕೆಲವರು ಅವರ ವಿರುದ್ಧ ಇಲ್ಲಸಲ್ಲದ ಸುಳ್ಳು ಹರಡಲು ಮುಂದಾಗಿದ್ದರು. ಅದರಲ್ಲಿ ಮುಖ್ಯವಾದುದು ಅವರ ಚಪಾಕ್ ಚಿತ್ರದಲ್ಲಿ ಸಂತ್ರಸ್ತೆ ಮೇಲೆ ಆಸಿಡ್ ಎರಚಿದ ಆರೋಪಿ ನದೀಮ್ ಖಾನ್ ಎಂಬ ಹೆಸರನ್ನು ರಾಜೇಶ್ ಶರ್ಮಾ ಎಂದು ಬದಲಿಸಲಾಗಿದೆ ಎಂಬ ಆರೋಪ..

ಒಪಿಇಂಡಿಯಾ, ಸ್ವರಾಜ್ಯ ಎಂಬ ಬಿಜೆಪಿ ಬೆಂಬಲಿತ ವೆಬ್‌ಗಳು ಇದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದವು. ಸುಬ್ರಮಣ್ಯಸ್ವಾಮಿ ಅಂತೂ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದರು. ಹಲವು ಬಿಜೆಪಿ ಸಂಸದರಿಂದ ಶುರುವಾಗಿ ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಇದನ್ನು ಷೇರ್ ಮಾಡಿದ್ದರು.

ಆದರೆ ಸಿನಿಮಾ ನೋಡಿದ ಬಹುತೇಕರು ಸ್ಪಷ್ಟಪಡಿಸಿರುವುದೇನೆಂದರೆ ನದೀಮ್ ಖಾನ್ ಬದಲಾಗಿ ಬಶೀರ್ ಎಂದು ಮುಸ್ಲಿಂ ಹೆಸರನ್ನೇ ಇಡಲಾಗಿದೆ. ಅಂದರೆ ಬಿಜೆಪಿಗರು, ಸ್ವರಾಜ್ ಹೇಳಿದ್ದೆಲ್ಲ ಹಸಿ ಸುಳ್ಳು ಎಂದು ಜಗಜ್ಜಾಹೀರಾಗಿದೆ.

3. ಇಂದಿರಾಗಾಂಧಿ 1975ರಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಸಿದ್ದರೆ?

“1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿ, ಆ ಸಮಯದಲ್ಲಿ ಜೆಎನ್‌ಯು ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿದ್ದ ಸಿಪಿಐ ಮುಖಂಡ ಸೀತಾರಾಮ್ ಯೆಚೂರಿಗೆ ಹೊಡೆದು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕೆ ಕ್ಷಮೆಯಾಚಿಸುವ ಪತ್ರವನ್ನು ಸೀತಾರಾಮ್ ಯೆಚೂರಿ ಓದಿದರು. ಇದನ್ನು ಕಮ್ಯುನಿಸ್ಟರೊಂದಿಗೆ ವ್ಯವಹರಿಸುವ ಉಕ್ಕಿನಹಸ್ತ ಎಂದು ಕರೆಯಲಾಗುತ್ತದೆ. ಅಮಿತ್ ಶಾ ಅವರ ಮುಂದೆ ಸಂತನಾಗಿ ಕಾಣಿಸುತ್ತಾನೆ.”

ಈ ರೀತಿಯ ಸಂದೇಶವೊಂದನ್ನು ಮೋಹನ್ ದಾಸ್ ಪೈ ‘ಇದು ನಿಜವೇ’ ಎಂಬ ತಲೆಬರಹದೊಂದಿಗೆ ಹಂಚಿಕೊಂಡಿದ್ದಾರೆ.

ಈ ಕುರಿತು ಫ್ಯಾಕ್ಟ್ ಚೆಕ್ ಮಾಡಲು ಬೂಮ್‌ಲೈವ್ ಸೀತಾರಾಂ ಯೆಚೂರಿಯವರನ್ನು ಸಂಪರ್ಕಿಸಿತು. ಆಗ ಅವರು “ಇದು 1975ರ ಚಿತ್ರವಲ್ಲ ಬದಲಿಗೆ 1977ರ ಸೆಪ್ಟಂಬರ್‌ನಲ್ಲಿ ತೆಗೆದ ಚಿತ್ರ. ಇಂದಿರಾಗಾಂಧಿಯವರು ಜೆಎನ್‌ಯು ವಿವಿಯ ಉಪಕುಲಪತಿಗಳಾಗಿದ್ದರು. ಅದನ್ನು ವಿರೋಧಿಸಿ ನಾವು ದೊಡ್ಡ ಹೋರಾಟ ನಡೆಸಿದ್ದವು. ಆಗ ಅವರು ಜೆಎನ್‌ಯುಗೆ ಬಂದಾಗ ನಾನು ನಮ್ಮ ಹಕ್ಕೊತ್ತಾಯ ಪತ್ರವನ್ನು ಓದಿ ರಾಜೀನಾಮೆಗೆ ಒತ್ತಾಯಿಸಿದೆವು. ಅಂತೆಯೇ ಅವರು ರಾಜೀನಾಮೆ ನೀಡಿದ್ದರು” ಎಂದಿದ್ದಾರೆ.

ನಂತರ ಬೂಮ್ “ಅವರು ನಿಮ್ಮ ಮೇಲೆ ಹಲ್ಲೆ ನಡೆಸಿದ್ದರೆ ಎಂಬ ಪ್ರಶ್ನೆಗೆ, ಇಲ್ಲ ಅವರು ಹಲ್ಲೆ ಮಾಡಿಸಿರಲಿಲ್ಲ, ಏಕೆಂದರೆ ಅವರು ನಾಗರಿಕರಾಗಿದ್ದರು ಎಂಬ ಉತ್ತರ ನೀಡಿದ್ದಾರೆ. ಅವರು ಅಲ್ಲಿಂದ ನಿಧಾನವಾಗಿ ನಡೆದುಕೊಂಡು ಹೋದರು ಅಷ್ಟೇ ಎಂದು ಅವರು ತಿಳಿಸಿದ್ದಾರೆ.

4 ಜೆಎನ್‌ಯು ಮೇಲೆ ದಾಳಿ ಮಾಡಿದ್ದು ನಾನೇ ಎಂದು ಒಪ್ಪಿಕೊಂಡ ಅಕ್ಷತ್ ಅವಾಸ್ಥಿ ನಮ್ಮ ಸದಸ್ಯನಲ್ಲ: ಎಬಿವಿಪಿ

ಜನವರಿ 10ರಂದು ಇಂಡಿಯಾ ಟುಡೆ ಟಿವಿಯು ಸ್ಟಿಂಗ್ ಆಪರೇಷನ್ ನಡೆಸಿತು. ಆಗ ಎಬಿವಿಪಿ ಸದಸ್ಯ ಅಕ್ಷತ್ ಅವಾಸ್ಥಿ ಎಂಬುವವನು ನಾನು 20 ಜನರನ್ನು ಒಟ್ಟುಗೂಡಿಸಿ ಹಲ್ಲೆ ನಡೆಸಿದೆ, ಗಡ್ಡಬಿಟ್ಟಿದ್ದ ಕಾಶ್ಮೀರದವನ ಹಾಗೆ ಕಾಣುತ್ತಿದ್ದವನ ಮೇಲೆ ಹೊಡೆದು ಎಂದು ಒಪ್ಪಿಕೊಂಡಿದ್ದ.

ನಂತರ ಎಬಿವಿಪಿ ಯಥಾಪ್ರಕಾರ ಆತ ನಮ್ಮ ಸದಸ್ಯನಲ್ಲ ಎಂದು ಜಾರಿಕೊಂಡಿತ್ತು.

ಆಲ್ಟ್‌ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿತು. ಆಗ ಆತ ಹಲವಾರು ಬಿಜೆಪಿ/ಎಬಿವಿಪಿ ಕಾರ್ಯಕ್ರಮ ಪ್ರತಿಭಟನೆಗಳನ್ನು ಭಾಗವಹಿಸಿರುವ ಫೋಟೊ, ವಿಡಿಯೋಗಳನ್ನು ಹುಡುಕಿ ಪ್ರಕಟಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...