Homeಮುಖಪುಟಇಂದು ಸಂಜೆ ಮತ್ತೆ ಪತ್ರಿಕಾಗೋಷ್ಟಿ ನಡೆಸಲಿರುವ ನಿರ್ಮಲಾ ಸೀತಾರಾಮನ್!

ಇಂದು ಸಂಜೆ ಮತ್ತೆ ಪತ್ರಿಕಾಗೋಷ್ಟಿ ನಡೆಸಲಿರುವ ನಿರ್ಮಲಾ ಸೀತಾರಾಮನ್!

- Advertisement -
- Advertisement -

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆಗೆ ಮತ್ತೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಿನ್ನೆಯಷ್ಟೇ (ಬುಧವಾರ) ಪತ್ರಿಕಾಗೋಷ್ಠಿ ನಡೆಸಿದ ಅವರು ಕೇಂದ್ರದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಉತ್ತೇಜನ ಪ್ಯಾಕೇಜ್‌ನ ವಿವರಗಳನ್ನು  ಹಂಚಿಕೊಂಡಿದ್ದರು.

ನಿನ್ನೆಯ ಪತ್ರಿಕಾಗೋಷ್ಟಿಯಲ್ಲಿ, ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಮುಂದಿಡಲು ಮುಂದಿನ ಕೆಲವು ದಿನಗಳಲ್ಲಿ ನಾವು ತಂಡದೊಂದಿಗೆ ಮಾಧ್ಯಮದ ಮುಂದೆ ಬರುತ್ತೇವೆ ಎಂದು ಸಚಿವೆ ಹೇಳಿದ್ದರು.

ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಹಲವಾರು ಕ್ರಮಗಳನ್ನು ಸೀತಾರಾಮನ್ ನಿನ್ನೆ ಪ್ರಕಟಿಸಿದ್ದು, ಈ ಪ್ಯಾಕೇಜ್ ಆರ್ಥಿಕತೆಯಲ್ಲಿ ಚೈತನ್ಯ ತುಂಬುತ್ತದೆ ಮತ್ತು ವಿವಿಧ ಆರ್ಥಿಕ ಕ್ಷೇತ್ರಗಳಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದರು.

ಮಾರ್ಚ್ 31 2021 ರವರೆಗಿನ ಅವಧಿಗೆ ಸಂಬಳ ರಹಿತ ಪಾವತಿಗಳಿಗೆ ಟಿಡಿಎಸ್ ಟಿಸಿಎಸ್ ದರವನ್ನು 25% ಕಡಿತಗೊಳಿಸಲಾಗಿದೆ. ಈ ಕ್ರಮವು ರೂ. 50,000 ಕೋಟಿಗಳನ್ನು ಬಿಡುಗಡೆ ಮಾಡಲಾಗುತ್ತದೆ. 2019-2020ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನ ಅಂತಿಮ ದಿನಾಂಕವನ್ನು 2020 ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದರು.

ಉದ್ಯೋಗಿಗಳಿಗೆ ಹೆಚ್ಚಿನ ಟೇಕ್ ಹೋಮ್ ಸಂಬಳವನ್ನು ಒದಗಿಸುವ ಸಲುವಾಗಿ ಮತ್ತು ಪ್ರಾವಿಡೆಂಟ್ ಫಂಡ್ ನೌಕರರ ಪಾವತಿಯಲ್ಲಿ ಉದ್ಯೋಗದಾತರಿಗೆ ಪರಿಹಾರ ನೀಡುವ ಸಲುವಾಗಿ ವ್ಯವಹಾರ ಮತ್ತು ಕಾರ್ಮಿಕರಿಗೆ 3 ತಿಂಗಳವರೆಗೆ 6,750 ಕೋಟಿ ರೂ.ಗಳ ದ್ರವ್ಯತೆ ಬೆಂಬಲವನ್ನು ವಿತ್ತ ಸಚಿವರು ಘೋಷಿಸಿದ್ದರು.

ಆದರೂ ಬಹಳಷ್ಟು ಜನರು ಈ ರೀತಿ ಪ್ರತಿದಿನ ಮಾಧ್ಯಮಗೊಷ್ಟಿ ನಡೆಸುವ ಬದಲು ಒಮ್ಮೆಗೆ ಆರ್ಥಿಕ ಸಚಿವರು ಪ್ಯಾಕೇಜ್‌ನ ಸಂಪೂರ್ಣ ಚಿತ್ರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.


ಓದಿ: ಕೊರೊನಾ ಪ್ಯಾಕೇಜ್ ಆತ್ಮನಿರ್ಭರ ಭಾರತ ಯೋಜನೆ ಬಗ್ಗೆ ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು?


ನಮ್ಮ ಯೂಟ್ಯೂಬ್ ಚಾನೆಲಿಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...