Homeಅಂತರಾಷ್ಟ್ರೀಯಭಾರತದ ಸೈನಿಕನಿಗೆ ಅವಮಾನ: ಕ್ರೀಡಾ ಸ್ಫೂರ್ತಿ ಮರೆತ ಪಾಕಿಸ್ತಾನ

ಭಾರತದ ಸೈನಿಕನಿಗೆ ಅವಮಾನ: ಕ್ರೀಡಾ ಸ್ಫೂರ್ತಿ ಮರೆತ ಪಾಕಿಸ್ತಾನ

ಅಭಿನಂದನ್ ಪಾತ್ರದಲ್ಲಿರುವ ರೂಪದರ್ಶಿಯೊಬ್ಬ I am not supposed to tell you that sir ಎಂದು ಭಯದಿಂದ ಹೇಳುತ್ತಾನೆ, ಭಾರತವನ್ನು ಆಡಿಕೊಳ್ಳುವಂತೆ ತೋರಿಸಿದ್ದಾರೆ.

- Advertisement -
- Advertisement -

| ಸರೋವರ್ ಬೆಂಕೀಕೆರೆ |

2019ರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ಶುರುವಾಗಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ಉಣಬಡಿಸುತ್ತಿದೆ. ಪಂದ್ಯಗಳ ಮುನ್ನಾ ಪ್ರತಿ ದೇಶಗಳು ತಮ್ಮ ತಮ್ಮ ತಂಡವನ್ನು ಬೆಂಬಲಿಸುವ ಜಾಹಿರಾತುಗಳನ್ನು ಮಾಡಿದ್ದಾರೆ. ಹೀಗೆ ಬರುವ ಬಹಳಷ್ಟು ಜಾಹಿರಾತುಗಳು ಜನರ ಮೆಚ್ಚುಗೆ ಪಡೆದಿದ್ದು ಹಾಸ್ಯಭರಿತವಾಗಿಯೂ ಇದೆ. ಜಾಹಿರಾತುಗಳಲ್ಲಿ ಎದುರಾಳಿ ತಂಡಗಳಿಗೆ ಸವಾಲು ಹಾಕುವ ಅಂಶಳಿದ್ದರೂ ಸಹ ಎಲ್ಲಯೂ ಕೀಳು ಮಟ್ಟದ ಬೇರೆಯವರಿಗೆ ನೋವು ಉಂಟು ಮಾಡುವ ಸ್ಕ್ರಿಪ್ಟ್ ಅನ್ನು ಯಾವ ದೇಶವೂ ಮಾಡಿದಂತಿಲ್ಲ.

ವಾಘಾ ಬಾರ್ಡರ್ ನಲ್ಲಿ ಉದ್ರೇಕವನ್ನು ತುಂಬಿಕೊಂಡಿರುವ ಸನ್ನಿವೇಶವನ್ನು ನೀವೆಲ್ಲಾ ನೋಡಿರುತ್ತೀರ. ಇದೇ ಸನ್ನಿವೇಶವನ್ನು ಬಳಸಿಕೊಂಡು ಕ್ರಿಕೆಟ್ ಪಂದ್ಯದ ವೇಳೆ ಈ ಹಿಂದೆ ಭಾರತದ ಫಿವಿಕಾಲ್ ಕಂಪನಿಯು ಭಾರತ ಮತ್ತು ಪಾಕ್ ನ ಭಾಂಧವ್ಯವನ್ನು ಬೆಸೆಯುವ ಸೈನಿಕರ ಜಾಹಿರಾತನ್ನು ಮಾಡಿತ್ತು. ಸೈನಿಕರು ಕಸರತ್ತು ನಡೆಸುವ ಸಂದರ್ಭದಲ್ಲಿ ಕಿತ್ತು ಹೋದ ಬೂಟನ್ನು ಫಿವಿಕಾಲ್ ಬಳಸಿ ಭಾರತ ಮತ್ತು ಪಾಕ್ ನ ಸೈನಿಕರು ಒಬ್ಬರಿಗೊಬ್ಬರು ಬೂಟನ್ನು ಅಂಟಿಸಿಕೊಳ್ಳುವ ಜಾಹಿರಾತು ಮಾಡಿತ್ತು. ಸೌಹಾರ್ದ ಪ್ರೇಮಿಗಳಿಗಳು ಇದನ್ನು ಮೆಚ್ಚಿಕೊಂಡಿದ್ದರೂ ಸಹ.

ಆದರೆ ಈಗ ಅದೇ ಸೈನಿಕರ ಎಳೆಯನ್ನು ಇಟ್ಟುಕೊಂಡು ಜೂನ್ 16 ರಂದು ಭಾರತ ಮತ್ತು ಪಾಕ್ ಮಧ್ಯೆ ನಡೆಯಲಿರುವ ಪಂದ್ಯದ ಕುರಿತು ಪಾಕಿಸ್ತಾನ ಮಾಡಿರುವ ಜಾಹಿರಾತು ಎಲ್ಲೆಡೆ ವೈರಲ್ ಆಗಿದೆ. ಜಾಹಿರಾತಿನಲ್ಲಿ ಪಾಕಿಸ್ತಾನ ನಮ್ಮ ಹೆಮ್ಮೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಳಸಿಕೊಂಡಿದ್ದಾರೆ. ಬಾಲಕೋಟ್ ದಾಳಿಯ ಸಂದರ್ಭದಲ್ಲಿ ಪಾಕ್ ಸೇನೆಯ ಕೈಗೆ ಸಿಕ್ಕಿದ್ದ ಅಭಿನಂದನ್ I am not supposed to tell you that ಎಂದು ಧೈರ್ಯವಾಗಿ ಎದೆ ಉಬ್ಬಿಸಿ ಹೇಳಿದ್ದ ಮಾತು ಎಲ್ಲೆಡೆ ವೈರಲ್ ಆಗಿತ್ತು ಅದನ್ನೇ ಬಳಸಿಕೊಂಡು ಟಾಸ್ ಗೆದ್ದರೆ ಏನು ಆಯ್ಕೆ ಮಾಡಿಕೊಳ್ಳುತ್ತೀರ? ನಿಮ್ಮ ತಂಡದಲ್ಲಿ ಯಾರೆಲ್ಲ ಇದ್ದಾರೆ ಎನ್ನುವ  ಪ್ರಶ್ನೆಗಳನ್ನು ಕೇಳುತ್ತಾ ಅದಕ್ಕೆ ಉತ್ತರ ನೀಡುವುದನ್ನು ಅಭಿನಂದನ್ ಪಾತ್ರದಲ್ಲಿರುವ ರೂಪದರ್ಶಿಯೊಬ್ಬ I am not supposed to tell you that sir ಎಂದು ಭಯದಿಂದ ಹೇಳುತ್ತಾನೆ, ಭಾರತವನ್ನು ಆಡಿಕೊಳ್ಳುವಂತೆ ತೋರಿಸಿದ್ದಾರೆ. ಅಲ್ಲದೆ ಈ ಜಾಹಿರಾತಿನಲ್ಲಿ ರೇಸಿಸ್ಟ್ ಮನಸ್ಥಿತಿಯನ್ನೂ ನೋಡಬಹುದಾಗಿದೆ.

ಒಟ್ಟಾರೆಯಲ್ಲಿ ಪಾಕಿಸ್ತಾನದ ಈ ಜಾಹಿರಾತು ಕೆಟ್ಟ ಮತ್ತು ಕೀಳು ಮಟ್ಟದದಿಂದ ಕೂಡಿದೆ. ಈ ಜಾಹಿರಾತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನಕ್ಕೆ ಛೀಮಾರಿಯನ್ನು ಹಾಕಿದ್ದಾರೆ. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಮಣಿಸಿ ಸೋಲು ಕಾಣದ ಭಾರತ ತಂಡ 4 ಅಂಕ ಪಡೆದು ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ ಆದರೆ 8ನೇ ಸ್ಥಾನದಲ್ಲಿರುವ ಪಾಕಿಸ್ತಾನ ಈ ರೀತಿಯ ಜಾಹಿರಾತು ಮಾಡಿದ್ದು ನಗಪಾಟಲಿಗೀಡಾಗಿದೆ.

ದ್ವೇಷಗಳನ್ನು ಅಳಿಸಿ ಸ್ನೇಹವನ್ನು ಗಟ್ಟಿಗೊಳಿಸುವ ತಾಕತ್ತು ಕ್ರೀಡೆಗಿದೆ. ಮೊನ್ನೆ ಮೊನ್ನೆ ತಾನೆ ಪಾಕ್ ನ ಲಾಹೋರ್ ನಲ್ಲಿ ಪಾಕಿಸ್ತಾನಿಯ ದ್ವಿಚಕ್ರ ಸವಾರನೊಬ್ಬ ವಿರಾಟ್ ಕೋಹ್ಲಿಯ ಜರ್ಸಿ ಹಾಕಿಕೊಂಡಿದ್ದು ಫೋಟೋ ವೈರಲ್ ಆಗಿತ್ತು. ಆದರೆ ಇಂತಹ ಕ್ರಿಡಾ ಸ್ಪೂರ್ತಿಯನ್ನು ಮರೆತು, ಭಾರತದ ಸೈನಿಕರಿಗೂ ಅವಮಾನ ಮಾಡಿರುವ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರನ್ನು ಪಡೆಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...