ತಂದೆಯ ಕೊಲೆಗಾರರನ್ನು ಕ್ಷಮಿಸುತ್ತಿದ್ದೇವೆ: ಪತ್ರಕರ್ತ ಜಮಾಲ್ ಖಶೋಗ್ಗಿ ಪುತ್ರರು

ತಂದೆಯ ಕೊಲೆಗಾರರನ್ನು ಕ್ಷಮಿಸುತ್ತಿದ್ದೇವೆ: ಪತ್ರಕರ್ತ, ಜಮಾಲ್ ಖಶೋಗ್ಗಿ

ಎರಡು ವರ್ಷದ ಹಿಂದೆ ಕೊಲೆಯಾದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಪುತ್ರರು ತಮ್ಮ ತಂದೆಯ ಕೊಲೆಗಾರರನ್ನು “ಕ್ಷಮಿಸುತ್ತೇವೆ” ಎಂದು ಹೇಳಿದ್ದಾರೆ.

“ಹುತಾತ್ಮರಾದ ಜಮಾಲ್ ಖಶೋಗ್ಗಿ ಅವರ ಪುತ್ರರಾದ ನಾವು ನಮ್ಮ ತಂದೆಯನ್ನು ಕೊಂದವರನ್ನು ಕ್ಷಮಿಸಿದ್ದೇವೆ ಎಂದು ಘೋಷಿಸುತ್ತಿದ್ದೇವೆ” ಎಂದು ಅವರ ಮಗ ಸಲಾಹ್ ಖಶೋಗಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಖಶೋಗ್ಗಿಯವರ ಮಗ ಸಲಾಹ್ ಅವರ ಘೋಷನೆಯ ಕಾನೂನುಬದ್ಧ ಪ್ರಕಟಣೆಗಳು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ರಾಜಮನೆತನದ ಒಳಗಿನವರಾಗಿದ್ದ ಇವರು ನಂತರ ಕಟು ಟೀಕಾಕಾರರಾಗಿದ್ದರು. ಇವರನ್ನು ಅಕ್ಟೋಬರ್ 2, 2018 ರಂದು ಇಸ್ತಾಂಬುಲ್‌ನ ಸೌದಿ ಅರೇಬಿಯಾದ ದೂತವಾಸದಲ್ಲಿ ಕೊಲೆಗೀಡಾಗಿದ್ದರು. ಈ ಪ್ರಕರಣವು ಅಂತರರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಕಾರ್ಯಾಚರಣೆಯಲ್ಲಿ ರಿಯಾದ್‌ನಿಂದ ಕಳುಹಿಸಲ್ಪಟ್ಟ 15 ಏಜೆಂಟರು ಇದ್ದರೆಂದು ಎಂದು ಟರ್ಕಿ ತಿಳಿಸಿತ್ತು. ಅವರ ದೇಹದ ಅವಶೇಷಗಳು ಕೂಡಾ ಪತ್ತೆಯಾಗಿಲ್ಲ.

ಪ್ರಕರಣದಲ್ಲಿ ದೋಷಾರೋಪಣೆ ಸಲ್ಲಿಸಿದ 11 ವ್ಯಕ್ತಿಗಳಲ್ಲಿ, ಐವರಿಗೆ ಮರಣದಂಡನೆ ಶಿಕ್ಷೆ, ಮೂವರಿಗೆ ಒಟ್ಟು 24 ವರ್ಷಗಳು ಮತ್ತು ಇತರರನ್ನು ಖುಲಾಸೆಗೊಳಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಡಿಸೆಂಬರ್‌ನಲ್ಲಿ ತಿಳಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸಲಾಹ್ ಈ ಹಿಂದೆ ಹೇಳಿದ್ದು, ಈ ಪ್ರಕರಣವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದ್ದರು.

ಸಲಾಹ್ ಸೇರಿದಂತೆ ಖಶೋಗ್ಗಿ ಮಕ್ಕಳು ಬಹು ಮಿಲಿಯನ್ ಡಾಲರ್ ಮನೆಗಳನ್ನು ಪಡೆದಿದ್ದಾರೆ ಮತ್ತು ಅಧಿಕಾರಿಗಳು ಅವರಿಗೆ ತಿಂಗಳಿಗೆ ಸಾವಿರಾರು ಡಾಲರ್ಗಳನ್ನು ಪಾವತಿಸುತ್ತಿದ್ದಾರೆ ವಾಷಿಂಗ್ಟನ್ ಪೋಸ್ಟ್ ಏಪ್ರಿಲ್‌ನಲ್ಲಿ ವರದಿ ಮಾಡಿತ್ತು.

ಆದರೆ ಈ ವರದಿಯನ್ನು ಸಲಾಹ್ ಅಲ್ಲಗೆಳೆದಿದ್ದಾರೆ. ಸೌದಿ ಸರ್ಕಾರದೊಂದಿಗೆ ಹಣಕಾಸಿನ ಒಪ್ಪಂದದ ಬಗ್ಗೆ ಚರ್ಚಿಸುವುದನ್ನು ನಿರಾಕರಿಸಿದರು.

ಸಿಐಎ ಮತ್ತು ಅಮೆರಿಕಾ ವಿಶೇಷ ರಾಯಭಾರಿ, ಈ ಕೊಲೆಯಲ್ಲಿ ಸೌದಿ ಆಡಳಿತಗಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೇರ ಕೈವಾಡವಿದೆ ಎಂದು ಸೂಚಿಸಿದ್ದರು ಆದರೆ ಸೌದಿ ಇದನ್ನು ನಿರಾಕರಿಸಿದೆ.


ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಹಿನ್ನಲೆಯೇನು?


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here