Homeಎಕಾನಮಿಅಕ್ಟೋಬರ್ ನಲ್ಲಿ ಪ್ರಯಾಣಿಕರ ವಾಹನ ಮಾರಾಟದಲ್ಲಿ ಚೇತರಿಕೆ: ಶೇ. 0.28 ರಷ್ಟು ಹೆಚ್ಚಳ SIAM ಮಾಹಿತಿ

ಅಕ್ಟೋಬರ್ ನಲ್ಲಿ ಪ್ರಯಾಣಿಕರ ವಾಹನ ಮಾರಾಟದಲ್ಲಿ ಚೇತರಿಕೆ: ಶೇ. 0.28 ರಷ್ಟು ಹೆಚ್ಚಳ SIAM ಮಾಹಿತಿ

- Advertisement -
- Advertisement -

ಪ್ರಯಾಣಕ್ಕೆ ಬಳಸುವ ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ಒಟ್ಟು ದೇಶೀಯ ವಾಹನ ಮಾರಾಟ ಶೇ. 12.76 ರಷ್ಟು ಕುಸಿದಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಪ್ರಯಾಣಿಕರ ವಾಹನಗಳ ಮಾರಾಟವು, ಅಕ್ಟೋಬರ್ ನಲ್ಲಿ ಶೇ.0.28 ರಷ್ಟು ಹೆಚ್ಚಾಗಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ ಮಾಹಿತಿ ಸಂಸ್ಥೆ (ಎಸ್‍ಐಎಎಂ) ಮಾಹಿತಿ ನೀಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಪ್ರಯಾಣಿಕರ ವಾಹನಗಳ ಮಾರಾಟವು, ಶೇ.0.28 ರಷ್ಟು ಹೆಚ್ಚಾಗಿದೆ ಎಂದು ಇಂಡಸ್ಟ್ರಿ ಬಾಡಿ ಎಸ್‍ಐಎಎಂ ಹೇಳಿದೆ. ಅಕ್ಟೋಬರ್‌ನಲ್ಲಿ ಒಟ್ಟು 2,85,027 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ 2,84,223 ರಷ್ಟು ವಾಹನ ಮಾರಾಟವಿತ್ತು ಎಂದು ಉದ್ಯಮ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಉಂಟಾಗಿದ್ದ ಏರಿಕೆ, ಉದ್ಯೋಗ ಕಡಿತ ಭೀತಿ ದೂರಗೊಳಿಸಿ, ವಾಹನ ವಲಯದಲ್ಲಿ ಚೇತರಿಕೆಯುಂಟಾಗುವ ಭರವಸೆ ಮೂಡಿಸಿತ್ತು. ಆದರೆ, ವರ್ಷಾಂತ್ಯಕ್ಕೆ ವಾಹನ ಮಾರಾಟ ಕುಸಿತದ ಪ್ರಮಾಣ 12.76 ರಷ್ಟಿದ್ದು, ಆತಂಕ ಮನೆ ಮಾಡಿದೆ.

ಪ್ರಯಾಣಿಕರ ವಾಹನ ಮಾರಾಟ ವಿಭಾಗದಲ್ಲಿ ಉತ್ಪಾದನೆ ಕಳೆದ ತಿಂಗಳು ಶೇ. 21.14ಕ್ಕೆ ಇಳಿಯುವ ಮೂಲಕ 2, 69, 186ಕ್ಕೆ ತಲುಪಿತ್ತು. ರಫ್ತು ಪ್ರಮಾಣ ಶೇ. 2.18ರಷ್ಟು ಕುಸಿದಿದೆ. ಈ ತಿಂಗಳ ಒಟ್ಟು ಯುನಿಟ್‍ಗಳ 2,85,027 ಮಾರಾಟದ ಪೈಕಿ , 1,73,549 ಪ್ರಯಾಣಿಕರ ಕಾರುಗಳೇ ಆಗಿದ್ದು, ಶೇ. 6.34 ರಷ್ಟು ಕುಸಿತ ಕಂಡಿದೆ. ಕಾರುಗಳ ಉತ್ಪಾದನೆ 1,62,343 ವಾಹನಗಳಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 30.22ರಷ್ಟು ಕುಸಿತ ಕಂಡಿದೆ. ಪ್ರಯಾಣಿಕರ ಕಾರಿನ ಬಹುಪಾಲು ಪ್ರಯಾಣಿಕ ವಾಹನಗಳನ್ನೇ ತಯಾರಿಸಲಾಗುತ್ತದೆ. ಇದರಲ್ಲಿ ಯುಟಿಲಿಟಿ ಮತ್ತು ವ್ಯಾನ್ ಗಳು ಸೇರಿವೆ.

ಇನ್ನು ಪ್ರಯಾಣಿಕರ ವಾಹನ, ವಾಣಿಜ್ಯ ವಾಹನ, ದ್ವಿಚಕ್ತರ ವಾಹನ, ತ್ರಿಚಕ್ರ ವಾಹನಗಳು ಸೇರಿ ಒಟ್ಟು ದೇಶೀಯ ಮಾರಾಟ ವರ್ಷದಿಂದ ವರ್ಷಕ್ಕೆ ಶೇ. 12.76ರಷ್ಟು ಕುಸಿದಿದೆ. ಒಟ್ಟು ಉತ್ಪಾದನೆ ಶೇ. 26.22 ರಷ್ಟು ಕುಸಿದಿದ್ದು, ರಫ್ತು ಶೇ. 2.72ರಷ್ಟು ಏರಿಕೆಯಾಗಿದೆ. ಅಕ್ಟೋಬರ್ ನಲ್ಲಿ ಒಟ್ಟು 17,57,264 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಹಿಂದಿನ ಅವಧಿಗೆ ಹೋಲಿಸಿದರೆ ಶೇ. 14.43 ರಷ್ಟು ಕುಸಿದಿದೆ. ದ್ವಿಚಕ್ರ ವಾಹನ ರಫ್ತು ಶೇ. 8.03ರಷ್ಟು ಏರಿಕೆಯಾಗಿದ್ದರೂ, ಉತ್ಪಾದನೆ ಶೇ. 26.57ರಷ್ಟು ನೆಲಕಚ್ಚಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...