ಕವನ: ಅವಳ ದನಿಗೆ, ಪ್ರತಿಧ್ವನಿಗೆ ಐವತ್ತಾರಿಂಚಿನ ಉರವೂ ಕಂಪಿಸಿದೆ

ಸಾಟಿಯಿಲ್ಲದ ಮಾರ್ದನಿ
————————————-

ಅವಳು ಭಾವದೊಳಡಗಿದ ದನಿ
ಸಪ್ತ ಸ್ವರಗಳ ಮೀರಿ
ಸಪ್ತ ಸಾಗರಗಳನೆ ದಾಟಿ
ಮಾರ್ದನಿಸುವ ತರಂಗಿಣಿ

ಯೋನಿಯೊಳೊಸರಿದ ನೆತ್ತರಿಗೆ
ಮೈಲಿಗೆಯ ಲೇಬಲ್!
ಮುಟ್ಟಿಲ್ಲದೆ ಹುಟ್ಟೆಲ್ಲಿದೆ?
ಹುಟ್ಟಿನ ಗುಟ್ಟೇ ಅವಳ ದನಿ

ಉಸಿರ ಬಸಿರಲಿ ಹೊತ್ತು
ಸಾವಿನ ಕದವ ತಟ್ಟಿ
ಮರುಜನ್ಮ ಪಡೆವ ಅವಳು
ನಿನ್ನುಸಿರ ಅಸ್ಮಿತೆಯ ಧ್ವನಿ

ಅಕ್ಷರದ ಸುತ್ತಣ ವಿಪ್ರರ
ಜಾತಿ ಬೇಲಿಯ ಮುರಿದು
ವಂಚಿತರೆದೆಯಲಿ ಬಿತ್ತಿದ
ಅವಳದು ಅಕ್ಕರದ ದನಿ

ಲೇಖನಿಯ ಕ್ಷಾರಕೆ
ಮೊಗ ಸುಟ್ಟುಕೊಂಡವರು
ಆಡಿದ್ದು ಗುಂಡಿನ ಭಾಷೆ
ಅವಳು ದನಿಯಿಲ್ಲದವರ ಅಮರ ಧ್ವನಿ

ಹೆಪ್ಪುಗಟ್ಟಿಸೊ ಚಳಿಯು ಹುಬ್ಬೇರಿಸಿದೆ
ಗುಂಡುಗಳೂ ಸಿಡಿತ ಮರೆತಂತಿವೆ
ಅವಳ ದನಿಗೆ, ಪ್ರತಿಧ್ವನಿಗೆ
ಐವತ್ತಾರಿಂಚಿನ ಉರವೂ ಕಂಪಿಸಿದೆ

******

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here