ಮೋದಿ ಹೆಸರೇಳದಿದ್ದರೆ ಸೂಲಿಬೆಲೆ ಭಾಷಣ ಕೇಳಲು ಯಾರು ಬರುತ್ತಾರೆ? ಪ್ರತಾಪ್ ಸಿಂಹ ತಿರುಗೇಟು..

ಇಂದು ಪ್ರವಾಹ ಪರಿಹಾರದ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರಿಗೆ ಮೋದಿಯೇ ಬಂಡವಾಳವಾಗಿದ್ದಾರೆ. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ? ಎಂದು ಪರೋಕ್ಷವಾಗಿ ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಹೆಸರನ್ನು ಹೇಳಿಕೊಂಡು ಕೆಲ ಸಂಸದರು ಗೆದ್ದಿದ್ದಾರೆ ಎಂಬ ಟೀಕೆ ಬರುತ್ತಿದೆ ಎಂಬ ಪ್ರಶ್ನೆಗೆ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಇವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ನಾನು ಮೋದಿಯವರ ಆತ್ಮಕಥೆ ಬರೆದಿದ್ದೆ. ೨೦೦೪ರಿಂದಲೇ ನಾನು ಮೋದಿ ಅಭಿಮಾನಿ. ಇವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ. ಇವರ ಟೀಕೆ ವಿವೇಚನ ರಹಿತವಾಗಿದೆ ಎಂದಿದ್ದಾರೆ.

ನಿನ್ನೆ ಪ್ರತಾಪ್ ಸಿಂಹ ಮೋದಿ ಬಗ್ಗೆ ಟೀಕೆ ಮಾಡುವವರು ಆಕಾಶಕ್ಕೆ ಉಗುಳಿದ ಹಾಗೆ ಅದು ಅವರ ಮೇಲೆಯೇ ಬೀಳುತ್ತದೆ ಎಂದು ಸೂಲಿಬೆಲೆ ವಿರುದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಕ್ರವರ್ತಿ ಸೂಲಿಬೆಲೆ ಪ್ರತಾಪ್ ಸಿಂಹ ಅಜ್ಞಾನಿ ಎಂದು ಕರೆದಿದ್ದರು. ಜೊತೆಗೆ ಮೋದಿ ಹೆಸರೇಳಿಕೊಂಡು ಸಂಸದರಾದವರು ಎಂದು ಜರಿದಿದ್ದರು.

ಹೌದು ನಾನು ಮತ್ತು ಕೆಲ ಸಂಸದರು ಗೆದ್ದಿದ್ದು ಮೋದಿಯವರ ಹೆಸರಿನಿಂದಲೇ ಒಪ್ಪಿಕೊಳ್ಳುತ್ತೇನೆ. ಆದರೆ ಸದಾನಂದಗೌಡ, ರಮೇಶ್ ಜಿಗಜಣಗಿ, ನಳಿನ್ ಕುಮಾರ್ ಕಟೀಲ್ ಮುಂತಾದ ಸಂಸದರು ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಬರುವ ಮೊದಲೇ ಸಂಸದರಾಗಿದ್ದಾರೆ. ಟೀಕೆ ಮಾಡುವ ವ್ಯಕ್ತಿ ಇದನ್ನು ನೆನಪಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಮೋದಿ ಮಾಡಿದನ್ನು ನಿನ್ನೆ ಸ್ಪಷ್ಟವಾಗಿ ಹೇಳಿದ್ದೇನೆ. ಕರ್ನಾಟಕದ ಎಲ್ಲ ವಿಚಾರವಾಗಿ ಮೋದಿ ನಮ್ಮ ಪರ ಇದ್ದಾರೆ. ರಾಜ್ಯ ಹೇಗೆ ಪರಿಹಾರಕ್ಕೆ ಕಾಯುತ್ತಿದೇಯೋ ಹಾಗೇಯೇ ನಾವು ಸಂಸದರುಗಳು ಕಾಯುತ್ತಿದ್ದೇವೆ. ನಾವಷ್ಟೆ ಅಲ್ಲ ಮಹಾರಾಷ್ಟ್ರ, ಉತ್ತರಪ್ರದೇಶ, ಕೇರಳ, ತಮಿಳುನಾಡು, ಗುಜರಾತ್‌ ರಾಜ್ಯದವರು ಕಾಯ್ತಿದ್ದಾರೆ ಎಂದಿದ್ದಾರೆ.

ನಿನ್ನೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪರಿಹಾರ ಎಂಬುದೊಂದು ಇಲ್ಲವೇ ಇಲ್ಲ. ಎನ್‌.ಆರ್‌.ಡಿ.ಎಫ್ ಮತ್ತು ಸಿ.ಆರ್‌.ಡಿ.ಎಫ್‌ ಮಾತ್ರ ಇರುತ್ತದೆ ಎಂದಿದ್ದ ಪ್ರತಾಪ್ ಸಿಂಹ ಇಂದು ಪರಿಹಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.

ಒಟ್ಟಿನಲ್ಲಿ ಸಂಸತ್ ಚುನಾವಣೆಗೆ ಮುನ್ನ ಅಣ್ಣ ತಮ್ಮಂದಿರಂತೆ ಇದ್ದ ಪ್ರತಾಪ್ ಸಿಂಹ ಮತ್ತು ಸೂಲಿಬೆಲೆ ಇಂದು ದಯಾದಿ ಕಲಹಕ್ಕಿಳಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಒಳ್ಳೆಯ ಬೆಳವಣಿಗೆ ಇದು.
    ಈಗೇ ಮುಂದುವರಿಯಲಿ.

LEAVE A REPLY

Please enter your comment!
Please enter your name here