ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಪ್ರಗತಿ; ಮನುಷ್ಯರ ಮೇಲೆ ಪ್ರಯೋಗ

0

ಕೊರೊನ ಲಸಿಕೆ ಅಭಿವೃದ್ಧಿಯಲ್ಲಿ ಪ್ರಗತಿ ಕಾಣಿಸಿದೆ. ಅಸ್ಟ್ರಾಜೆನೆಕಾದ ಪ್ರಾಯೋಗಿಕ ಕೊರೊನಾ ಲಸಿಕೆಯು ಬಹುಶಃ ವಿಶ್ವವನ್ನು ಕೊರೊನ ಇಂದ ರಕ್ಷಿಸಲು ನೆರವಾಗಬಹುದಾದ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಧಾನ ವಿಜ್ಞಾನಿ ಹೇಳಿದ್ದಾರೆ.

ಬ್ರಿಟಿಷ್ ಔಷಧ ತಯಾರಕರು ಈಗಾಗಲೇ ದೊಡ್ಡ-ಪ್ರಮಾಣದ, ಮಧ್ಯಮ ಹಂತದ ಲಸಿಕೆಯ ಮಾನವ ಪ್ರಯೋಗಗಳನ್ನು ಪ್ರಾರಂಭಿಸಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಕೂಡ ಲಸಿಕೆ ಅಭಿವೃದ್ಧಿಯ ಕೊನೆಯ ಹಂತದಲ್ಲಿದ್ದಾರೆ.

“ಅವರು ಸಾಕಷ್ಟು ಮುಂದುವರೆದಿದ್ದಾರೆ, ಖಂಡಿತವಾಗಿಯೂ ಕೊರೊನಾ ಲಸಿಕೆಯನ್ನು ಸಿದ್ಧಗೊಳಿಸುವಲ್ಲಿ ಅವರು ಪ್ರಮುಖ ಅಭ್ಯರ್ಥಿ ಎಂದು ನಾನು ಭಾವಿಸುತ್ತೇನೆ. ಅವರು ಬೇಗನೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಮಾಡರ್ನಾದ ಅಸ್ಟ್ರಾಜೆನೆಕಾ ಅವರ ಕೊರೊನಾ ಲಸಿಕೆಯನ್ನು 200ಕ್ಕೂ ಹೆಚ್ಚು ಜನರಿಗೆ ಪ್ರಯೋಗಿಕವಾಗಿ ನೀಡಲಾಗಿದ್ದು, ಅವರಲ್ಲಿ 15 ಮಂದಿ ಕ್ಲಿನಿಕಲ್ ಪ್ರಯೋಗಗಳಿಗೆ ಪ್ರವೇಶಿಸಿದ್ದಾರೆ.

“ಮಾಡರ್ನಾದ ಲಸಿಕೆ ಮೂರನೆಯ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಹೋಗಲಿದೆ ಎಂದು ನಮಗೆ ತಿಳಿದಿದೆ. ಬಹುಶಃ ಜುಲೈ ಮಧ್ಯದಲ್ಲಿ ಇದು ಯಶಸ್ವಿಯಾಗಬಹುದು” ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಡಬ್ಲ್ಯುಎಚ್‌ಒ ನೇತೃತ್ವದ ಒಕ್ಕೂಟವು ಮುಂದಿನ 12 ತಿಂಗಳಲ್ಲಿ 31.3 ಬಿಲಿಯನ್ ಡಾಲರ್‌ ಹಣವನ್ನು ಸಂಗ್ರಹಿಸಲು ಮುಂದಾಗಿದ್ದು, ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ವಲಯದ ದಾನಿಗಳನ್ನು ಸಹಾಯ ಮಾಡುವಂತೆ ಕೇಳಿದೆ. ಅದನ್ನು ಎಸಿಟಿ-ಆಕ್ಸಿಲರೇಟರ್ ಎಂದು ಕರೆಯಲಾಗುತ್ತದೆ.

ಲಸಿಕೆಗಳಿಗಾಗಿ “ಸಂಶೋಧನಾ ಪ್ರಯತ್ನಗಳ ಬಂಡವಾಳ”ವನ್ನು ಪರಿಗಣಿಸುವುದು ಮುಖ್ಯ ಎಂದು ಎಸಿಟಿ-ಆಕ್ಸಿಲರೇಟರ್‌ನ ವಿಶೇಷ ರಾಯಭಾರಿ ಆಂಡ್ರ್ಯೂ ವಿಟ್ಟಿ ಹೇಳಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here