Homeಮುಖಪುಟ‘ದಿಶಾ’ ಅತ್ಯಾಚಾರದ ಕುರಿತು ಸಿನೆಮಾ ಮಾಡಲು ಮುಂದಾದ RGV

‘ದಿಶಾ’ ಅತ್ಯಾಚಾರದ ಕುರಿತು ಸಿನೆಮಾ ಮಾಡಲು ಮುಂದಾದ RGV

- Advertisement -
- Advertisement -

ವಿಶೇಷ ರೀತಿಯಲ್ಲಿ ಪ್ರೇಕ್ಷಕರು ಆಶ್ಚರ್ಯ ಪಡುವಂತೆ ಸಿನೆಮಾಗಳನ್ನು ಮಾಡುವ ರಾಮ್‍ಗೋಪಾಲ್ ವರ್ಮ ‘ದಿಶಾ’ ಸಿನೆಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ನಿರ್ಭಯ ಅತ್ಯಾಚಾರದಂತೆ ದೇಶದ ಗಮನ ಸೆಳೆದಿದ್ದ ಹೈದ್ರಾಬಾದ್‍ನ ಪಶು ವೈಧ್ಯೆ ‘ದಿಶಾ’ಳ ಸಾಮೂಹಿಕ ಅತ್ಯಾಚಾರ ಕುರಿತು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಅತ್ಯಾಚಾರದಲ್ಲಿ ಫಾಲ್ಗೊಂಡಿದ್ದಾರೆ ಎನ್ನಲಾಗಿದ್ದ ಬಂಧಿತ 4ಜನರನ್ನು ಎನ್‍ಕೌಂಟರ್ ಮಾಡಲಾಗಿದೆ. ಅತ್ಯಾಚಾರ ಕುರಿತು ಮಾಹಿತಿ ಕಲೆ ಹಾಕುತ್ತಿರುವ ವರ್ಮ ಸಿನೆಮಾ ನಿರ್ಮಾಣ ಮಾಡುವ ತವಕದಲ್ಲಿದ್ದಾರೆ.

ಈ ಕುರಿತು ಆರೋಪಿಗಳಲ್ಲಿ ಒಬ್ಬನಾಗಿದ್ದ ಚನ್ನಕೇಶವಲು ಹೆಂಡತಿಯನ್ನು ಭೇಟಿಯಾದ ವರ್ಮ, ಅವನು ದಿಶಾ ಮತ್ತು ಆತನ ಹೆಂಡತಿ ಇಬ್ಬರ ಜೀವನವನ್ನು ಹಾಳು ಮಾಡಿದ್ದಾನೆ ಎಂದಿದ್ದಾರೆ. ಅತ್ಯಾಚಾರಿಗಳ ಮನಸ್ಥಿತಿ ಮತ್ತು ಅವರ ಮನೆಗಳಲ್ಲಾಗುವ ಪರಿಣಾಮಗಳು ಎಲ್ಲವನ್ನು ಸಿನೆಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ. ದೇಶದಲ್ಲಿ ಕೇವಲ ಮೇಲ್ಜಾತಿಯ ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರಗಳಿಗೆ ಮಾತ್ರ ಖಂಡನೆಗಳು ಕೇಳಿಸುತ್ತವೆ. ಆದರೆ, ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯಗಳಿಗೆ ಖಂಡನೆ ಬರುವುದು ಕಡಿಮೆ. ಅಲ್ಲದೆ ಬಡವರು ಅತ್ಯಾಚಾರ ಮಾಡಿದರೆ ವಿಚಾರಣೆಯೂ ಮಾಡದೆ ಎನ್ಕೌಂಟರ್, ಶ್ರೀಮಂತರು ಮೇಲ್ಜಾತಿಯವರು ಮಾಡಿದರೆ ವಿಚಾರಣೆ ಎನ್ನುವಂತಹ ಮನಸ್ಥಿತಿ ಇನ್ನು ನಮ್ಮ ವ್ಯವಸ್ಥೆಯಲ್ಲಿದೆ. ಇಂತಹ ತಾರತಮ್ಯಗಳ ಕುರಿತಂತೆ ವರ್ಮ ತನ್ನ ಸಿನೆಮಾದಲ್ಲಿ ಏನು ಹೇಳುತ್ತಾರೆ ಕಾದು ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ: ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ

0
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದ್ದು, ಸಿಐಡಿಯ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 18ರಂದು ಸಂಜೆ ಹುಬ್ಬಳ್ಳಿಯ...