Homeರಂಜನೆಕ್ರೀಡೆ"ಆಸ್ಕರ್ ಆಫ್ ಸ್ಪೋರ್ಟ್ಸ್ ಅವಾರ್ಡ್‌" ಪಡೆದ ಸಚಿನ್ ತೆಂಡೂಲ್ಕರ್‌

“ಆಸ್ಕರ್ ಆಫ್ ಸ್ಪೋರ್ಟ್ಸ್ ಅವಾರ್ಡ್‌” ಪಡೆದ ಸಚಿನ್ ತೆಂಡೂಲ್ಕರ್‌

- Advertisement -
- Advertisement -

ಭಾರತದ ಕ್ರಿಕೆಟ್ ತಂಡವು 2011ರ ವಿಶ್ವಕಪ್ ಗೆದ್ದಾಗಿನ ಅತ್ಯುತ್ತಮ ಕ್ರೀಡಾ ಕ್ಷಣಕ್ಕಾಗಿ ಸಚಿನ್ ತೆಂಡೂಲ್ಕರ್‌ “ಆಸ್ಕರ್ ಆಫ್ ಸ್ಪೋರ್ಟ್ಸ್” ಎಂದು ಕರೆಯಲ್ಪಡುವ 20ನೇ ಆವೃತ್ತಿಯ “ಲಾರಿಯೆಸ್ ಗೌರವ”ವನ್ನು ಪಡೆದಿದ್ದಾರೆ. ಈ ಮೂಲಕ ಲಾರಿಯೆಸ್ ವಿಶ್ವ ಕ್ರೀಡಾ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ತೆಂಡೂಲ್ಕರ್ ಪಾತ್ರರಾಗಿದ್ದಾರೆ.

2011ರಲ್ಲಿ ಭಾರತ ತಂಡವು ವಿಶ್ವಕಪ್ ಗೆದ್ದಾಗ ತೆಂಡೂಲ್ಕರ್‌ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ತಂಡದ ಸದಸ್ಯರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿತ್ತು. ಈ ಕ್ಷಣಕ್ಕಾಗಿ ಸಚಿನ್ ತೆಂಡೂಲ್ಕರ್ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.

ಬರ್ಲಿನ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದ 20 ನೇ ಆವೃತ್ತಿಯಲ್ಲಿ ಈ ವರ್ಷದ “ಲಾರಿಯೆಸ್ ಪ್ರಶಸ್ತಿ”ಗಳಲ್ಲಿ ಪರಿಚಯಿಸಲಾದ ವಿಶೇಷ ವಿಭಾಗಕ್ಕೆ ಕ್ರಿಕೆಟ್ ದಂತಕತೆ ಬೋರಿಸ್ ಬೆಕರ್ ನಾಮಿನಿಗಳನ್ನು ಘೋಷಿಸಿದರು ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರ ಕೈಯಿಂದ ಸಚಿನ್ ತಂಡೂಲ್ಕರ್‌ ಪ್ರಶಸ್ತಿಯನ್ನು ಪಡೆದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...