Homeಮುಖಪುಟಸಚಿವ ಸದಾನಂದ ಗೌಡರು ದೆಹಲಿಯಿಂದ ಬಂದಿಳಿದರೂ ಕ್ವಾರಂಟೈನ್‌ಗೆ ಒಳಗಾಗಿಲ್ಲ ಏಕೆ?

ಸಚಿವ ಸದಾನಂದ ಗೌಡರು ದೆಹಲಿಯಿಂದ ಬಂದಿಳಿದರೂ ಕ್ವಾರಂಟೈನ್‌ಗೆ ಒಳಗಾಗಿಲ್ಲ ಏಕೆ?

ಎಲ್ಲಾ ನಾಗರಿಕರಿಗೆ ಮಾರ್ಗಸೂಚಿಗಳು ಅನ್ವಯವಾಗುತ್ತವೆ, ಆದರೆ ಕೆಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವವರಿಗೆ ಕೆಲವು ವಿನಾಯಿತಿಗಳಿರುತ್ತವೆ ಎನ್ನುವ ಮೂಲಕ ಅವರು ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -
- Advertisement -

ಕೇಂದ್ರ ಸಚಿವ ಸದಾನಂದ ಗೌಡರು ದೆಹಲಿಯಿಂದ ಬಂದಿಳಿದರೂ ಕ್ವಾರಂಟೈನ್‌ಗೆ ಒಳಪಟ್ಟಿಲ್ಲ. ಜನರಿಗೊಂದು ನ್ಯಾಯ, ಸಚಿವರಿಗೊಂದು ನ್ಯಾಯವೇ ಎಂದು ವಿಪಕ್ಷಗಳ ಆರೋಪ ಮಾಡಿವೆ.

ಇಂದಿನಿಂದ ದೇಶಿಯ ವಿಮಾನಯಾನ ಸೇವೆ ಆರಂಭವಾಗಿದೆ. ನಿಯಮಗಳ ಪ್ರಕಾರ ಅಂತರ್‌ರಾಜ್ಯ ಪ್ರವಾಸ ಮಾಡಿದವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಆದರೆ ಇಂದು ದೆಹಲಿಯಿಂದ ಆಗಮಿಸಿದ ಸದಾನಂದಗೌಡರು ಕ್ವಾರಂಟೈನ್‌ಗೆ ಒಳಪಡದೇ ಇರುವುದರಿಂದ ವಿವಾದ ಭುಗಿಲೆದ್ದಿದೆ.

ಕೇಂದ್ರ ಸಚಿವ ಸದಾನಂದ ಗೌಡರು ಇಂದು ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದರು. ಆದರೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿಲ್ಲ. ಔಷಧ ಸಚಿವರಾಗಿ ನನಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ಕ್ಯಾರೆಂಟೈನ್ ವಿನಾಯಿತಿ ಪಟ್ಟಿಯಡಿಯಲ್ಲಿ ಫಾರ್ಮಾ ವಲಯವನ್ನು ಉಲ್ಲೇಖಿಸಿಲ್ಲ ಎಂದು ಪತ್ರಕರ್ತ ನಾಗಾರ್ಜುನ್‌ ದ್ವಾರಕನಾಥ್‌ ಟ್ವಿಟ್ಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು ಇದಕ್ಕೆ ಸದಾನಂದ ಗೌಡರು ಸ್ಪಷ್ಟನೆ ನೀಡಿದ್ದಾರೆ. ನಾನು ಮಂತ್ರಿಯಾಗಿದ್ದೇನೆ ಮತ್ತು ನಾನು ಔಷಧ ಸಚಿವಾಲಯದ ಮುಖ್ಯಸ್ಥನಾಗಿದ್ದೇನೆ. ಔಷಧಿಗಳ ಪೂರೈಕೆ ಮತ್ತು ಇತರ ವಸ್ತುಗಳು ಸರಿಯಾಗಿಲ್ಲದಿದ್ದರೆ ವೈದ್ಯರು ರೋಗಿಗಳಿಗೆ ಏನು ಮಾಡಬಹುದು, ಅದು ಸರ್ಕಾರದ ವೈಫಲ್ಯವಲ್ಲವೇ? ದೇಶದ ಪ್ರತಿಯೊಂದು ಮೂಲೆಯಲ್ಲೂ ಔಷಧಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ನಾಗರಿಕರಿಗೆ ಮಾರ್ಗಸೂಚಿಗಳು ಅನ್ವಯವಾಗುತ್ತವೆ, ಆದರೆ ಕೆಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವವರಿಗೆ ಕೆಲವು ವಿನಾಯಿತಿಗಳಿರುತ್ತವೆ ಎನ್ನುವ ಮೂಲಕ ಅವರು ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ದೆಹಲಿಯಲ್ಲಿದ್ದಾಗಳು ಪ್ರತಿ ಮೂರು ದಿನಗಳಿಗೊಮ್ಮೆ ಕೊರೊನ ಟೆಸ್ಟ್‌ ಮಾಡಿಸಿದ್ದೇನೆ. ಕೊರೊನಾ ನೆಗೆಟಿವ್‌ ಬಂದಿದೆ. ನಮ್ಮ ಸಿಬ್ಬಂದಿಗಳಿಗೂ ಟೆಸ್ಟ್‌ ಮಾಡಿಸಲಾಗಿದೆ. ಇಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನ್ನನ್ನು ಟೆಸ್ಟ್‌ ಮಾಡಿದ್ದಾರೆ. ನನ್ನ ಮೊಬೈಲ್‌ ಆರೋಗ್ಯ ಸೇತು ಆಪ್‌ ಇದೆ. ಇದನ್ನೆಲ್ಲ ನೋಡಿಯೇ ನನ್ನನ್ನು ಬಿಟ್ಟಿದ್ದು ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮೋದಿ ಪಶ್ಚಿಮ ಬಂಗಾಳ ಭೇಟಿ ವೇಳೆ ಚೌಕಿದಾರ್‌ ಚೋರ್‌ ಹೈ ಘೋಷಣೆ ಕೂಗಿದ್ದು ನಿಜವೇ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...