ಕಾರ್ಮಿಕರ ದುಡಿಯುವ ಅವಧಿಯನ್ನು 10 ಗಂಟೆಗೆ ಏರಿಸಿದ ರಾಜ್ಯ ಸರ್ಕಾರ: ಕಾರ್ಮಿಕರ ಸಂಘಟನೆಗಳ ವಿರೋಧ

ಸರ್ಕಾರಗಳು ಹೇಳಿಕೊಳ್ಳಿಕೊಳ್ಳುತ್ತಿರುವಂತೆ ಲಾಕ್‌ಡೌನ್‌ನಿಂದಾಗಿ ಹಳ್ಳಿಹಿಡಿದಿರುವ ಆರ್ಥಿಕತೆಯನ್ನು ಮೇಲೆತ್ತುವುದಕ್ಕಾಗಿ ಕಾರ್ಮಿಕರನ್ನು ಬಲಿಪಶುಗಳನ್ನಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕಾರ್ಮಿಕರು ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಎರಡು ತಿಂಗಳಿನಿಂದ ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಕಾರ್ಖಾನೆಗಳನ್ನು ಮುಚ್ಚಲ್ಪಟ್ಟಿದ್ದು ಉತ್ಪಾದನಾ ವಲಯ ಬಹುತೇಕ ಸ್ಥಗಿತವಾಗಿದೆ. ಹೀಗಾಗಿ ಲಾಕ್‌ಡೌನ್ ಅವಧಿ ಮುಗಿದ ನಂತರ ಕಾರ್ಮಿಕರನ್ನು 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಅದರಂತೆ ಮಹಾರಾಷ್ಟ್ರ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸುತ್ತಿದ್ದಂತೆ, ಕರ್ನಾಟಕ ಸಹ ಇದೇ ನೀತಿಯನ್ನು ಅನುಸರಿಸಿದೆ. ಆದರೆ, ಸರ್ಕಾರದ ಈ ನಿರ್ಧಾರ ಕಾರ್ಮಿಕರ ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಯಾಕ್ಟರಿ ಆ್ಯಕ್ಟ್ 1948 ಅಡಿಯಲ್ಲಿ ಆದೇಶ ಹೊರಡಿಸಲಾಗಿದ್ದು, ಸಮಯ ಬದಲಾವಣೆಯನ್ನ ಇಂದಿನಿಂದ ಆಗಸ್ಟ್ ವರೆಗೂ ಮುಂದುವರಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ. ಇದಲ್ಲದೆ, ಕೆಲ‌ ಷರತ್ತುಗಳನ್ನೂ ವಿಧಿಸಿರುವ ರಾಜ್ಯ ಸರ್ಕಾರ 10 ಗಂಟೆ ಕೆಲಸ ಮಾಡುವವರಿಗೆ ಆಯಾ ಕಂಪನಿಗಳು ಹೆಚ್ಚುವರಿ ಸಂಬಳವನ್ನೂ ನೀಡಬೇಕು ಎಂದು ಆದೇಶಿಸಲಾಗಿದೆ.

“ಕಾರ್ಮಿಕ ಮಂತ್ರಿಗಳು ತ್ರೀ ಪಕ್ಷೀಯ ಸಭೆಗಳನ್ನು ನಡೆಸುತ್ತಾ ಇದ್ದರು ಆ ಸಭೆಗಳಲ್ಲಿ ಮಾಲೀಕರ ಸಂಘಟನೆ ಗಳ ಬೇಡಿಕೆಯಿಲ್ಲದಿದ್ದರೂಕೆಲಸದ ಅವಧಿಯನ್ನು ಹೆಚ್ಚಳ ಮಾಡುವ ಪ್ರಸ್ತಾಪಗಳು ಬಂದವು
ಕೇಂದ್ರ ಕಾರ್ಮಿಕ ಸಂಘಟನೆಗಳು ಕೂಡಲೇ may1,may 18ರಂದು ಪ್ರತಿಭಟನೆ ಗಳನ್ನು ಮಾಡಲಾಗಿತ್ತು,ಮುಖ್ಯ ಮಂತ್ರಿ ಗಳಿಗೆ,ಕಾರ್ಮಿಕ ಮಂತ್ರಿ ಗಳಿಗೆ ,ಪ್ರತಿಪಕ್ಷ ಗಳಿಗೆ ಮನವಿ ಕೊಡಲಾಗಿದೆ ಆದರೆ ಸರ್ವಾದಿಕಾರಕ್ಕೆ ಹೆಸರಾಗಿರುವ ಬಿಜೆಪಿ ಸರ್ಕಾರ ಇಂದು ನಮ್ಮ ನಂಬಿಕೆಗೆ ದ್ರೋಹ ಬಗೆದು ಕಾರ್ಮಿಕರ ರಕ್ತವನ್ನು ಹೀರಲು ಕೆಲಸದ ಅವಧಿಯನ್ನು 8ರಿಂದ 10ಗಂಟೆಗೆ ಹೆಚ್ಚಿಸಿ ಇಂದು ಆದೇಶ ಮಾಡಲಾಗಿದೆ” ಎಂದು ಸಿಐಟಿಯು ಸಂಘಟನೆಯ ಮುಖಂಡೆ ಕೆ.ಎಸ್ ವರಲಕ್ಷ್ಮಿ

ಲಾಕ್‌ಡೌನ್‌ನಿಂದ ಉಂಟಾಗಿರುವ ಉತ್ಪಾದನೆ ಮತ್ತು ಕಾರ್ಮಿಕರ ಕೊರೆತೆಯನ್ನು ನೀಗಿಸುವ ಸಲುವಾಗಿ ಕಾರ್ಮಿಕರನ್ನು ಕಾರ್ಖಾನೆಗಳಲ್ಲಿ 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಲಾಕ್‌ಡೌನ್‌ಗೂ ಮುಂಚೆಯೇ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿತ್ತು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here