Homeಮುಖಪುಟಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ : ಸುಳ್ಳು ಹರಡುತ್ತಿರುವವರಿಗೆ ಹೊಟ್ಟೆ ನೋವು- ಶಿವಸೇನೆ

ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ : ಸುಳ್ಳು ಹರಡುತ್ತಿರುವವರಿಗೆ ಹೊಟ್ಟೆ ನೋವು- ಶಿವಸೇನೆ

- Advertisement -
- Advertisement -

ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ ಎಂದು ಶಿವಸೇನೆ ಹೇಳಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ‌  ರಾಜ್ಯದ ಮತ್ತು ಆಡಳಿತ ಮಿತ್ರ ಪಕ್ಷವಾದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭೇಟಿಯ ನಂತರ ಅವರು ಹೇಳಿಕೆ ನೀಡಿದ್ದು ಸುಳ್ಳು ಹರಡುತ್ತಿರುವವರಿಗೆ ಹೊಟ್ಟೆ ನೋವು ಎಂದಿದ್ದಾರೆ.

ಲಾಕ್‌ಡೌನ್ ತೆರವುಗೊಳಿಸಲು ಮತ್ತು ಅವರ ಸಲಹೆಗಳ ಬಗ್ಗ ಠಾಕ್ರೆ ಹಿಂಜರಿಯುತ್ತಿರುವುದಕ್ಕೆ ಶರದ್ ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರವು ಕ್ರಮೇಣ ಲಾಕ್‌ಡೌನ್‌ ತೆರವುಗೊಳಿಸಬೇಕು ಮತ್ತು ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಅನಿರ್ದಿಷ್ಟ ಸ್ಥಗಿತದಿಂದ ಹೊರಬರಬೇಕು ಎಂಬ ಶರದ್ ಪವಾರ್ ಹೇಳಿಕೆಯ ಬಗ್ಗೆ ಮಿತ್ರಪಕ್ಷದ ಸಂಬಂಧಗಳಲ್ಲಿ ತೀವ್ರ ಊಹಾಪೋಹಗಳು ಎದ್ದಿದ್ದವು.

ಇದರಿಂದಾಗಿ ಮಹಾರಾಷ್ಟ್ರ ಸರ್ಕಾರದ ಮಿತ್ರ ಪಕ್ಷಗಳಲ್ಲಿ ಬಿರುಕು, ಸರ್ಕಾರ ಪತನದತ್ತ ಎಂಬ ವದಂತಿಗಳನ್ನು ಹರಡಲಾಗಿತ್ತು.

ಆದರೆ ಇದನ್ನು ಅಲ್ಲಗೆಳೆದಿರುವ ಶಿವಸೇನೆ, ಎರಡೂ ಪಕ್ಷಗಳು ವೈರಸ್ ಬಿಕ್ಕಟ್ಟು ಮತ್ತು ರಾಜ್ಯದ ಮೇಲೆ ಅದರ ಪ್ರಭಾವದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದೆ. ಶಿವಸೇನೆ ಮುಖಂಡ ಸಂಜಯ್ ರೌತ್ ಸಭೆ ನಡೆದಿದ್ದನ್ನು ದೃಢಪಡಿಸಿ, “ಸರ್ಕಾರದ ಸ್ಥಿರತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

“ಶರದ್ ಪವಾರ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿನ್ನೆ ಸಂಜೆ ಮಾತೋಶ್ರಿಯಲ್ಲಿ ಭೇಟಿಯಾದರು. ಉಭಯ ನಾಯಕರು ಒಂದೂವರೆ ಗಂಟೆ ಚರ್ಚೆ ನಡೆಸಿದರು. ಸರ್ಕಾರದ ಸ್ಥಿರತೆಯ ಬಗ್ಗೆ ಯಾರಾದರೂ ಸುದ್ದಿ ಹರಡುತ್ತಿದ್ದರೆ ಅದು ಅವರ ಹೊಟ್ಟೆ ನೋವು. ಸರ್ಕಾರ ಗಟ್ಟಿಯಾಗಿದೆ, ಚಿಂತಿಸಬೇಡಿ. ಜೈ ಮಹಾರಾಷ್ಟ್ರ !! ” ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿಯವರ ಮಾತುಕತೆಗೆ ಕೆಲವು ಗಂಟೆಗಳ ಮೊದಲು, ಶರದ್ ಪವಾರ್ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿ ಮಾಡಿದ್ದರು. ರಾಜ್ಯಪಾಲರೊಂದಿಗಿನ ಸಭೆಗೆ ಪವಾರ್ ಅವರೊಂದಿಗೆ ಇದ್ದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಇದು ಕೇವಲ ಸೌಜನ್ಯದ ಸಭೆ ಎಂದು ಪ್ರತಿಪಾದಿಸಿದ್ದಾರೆ.

ಇದು ಪವಾರ್ ಸಾಹೇಬ್ ಮತ್ತು ಗೌರವಾನ್ವಿತ ರಾಜ್ಯಪಾಲರ ನಡುವಿನ ಸೌಜನ್ಯದ ಸಭೆ ಮಾತ್ರ, ನಾವು ಒಂದು ಕಪ್ ಚಹಾವನ್ನು ಸೇವಿಸಲು ಅಲ್ಲಿಗೆ ಹೋದೆವು. ರಾಜ್ಯಪಾಲ ಸಾಹೇಬ್ ಅವರು ಪವಾರ್ ಸಾಹೇಬರನ್ನು ಚಹಾಕ್ಕಾಗಿ ಆಹ್ವಾನಿಸಿದ್ದರು. ಸೌಜನ್ಯಕ್ಕಾಗಿ ನಾವು ಅಲ್ಲಿದ್ದೆವು, ಈ ಸಭೆಯಲ್ಲಿ ಯಾವುದೇ ರಾಜಕೀಯ ಇರಲಿಲ್ಲ “ಎಂದು ಮಾಜಿ ಕೇಂದ್ರ ಸಚಿವ ಪಟೇಲ್ ಹೇಳಿದ್ದಾರೆ.

ಮಹಾರಾಷ್ಟ್ರ ಆಡಳಿತದಲ್ಲಿ ರಾಜ್ಯಪಾಲ ಕೊಶ್ಯರಿಯವರ “ಹಸ್ತಕ್ಷೇಪ” ದ ವಿರುದ್ಧ ಪವಾರ್ ಈ ಹಿಂದೆ ಹರಿಹಾಯ್ದಿದ್ದರಿಂದ ಈ ಭೇಟಿಯೂ ಭಾರಿ ಕುತೂಹಲವನ್ನು ಮೂಡಿಸಿತ್ತು.

ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿ ರಾಜ್ಯ ಸಚಿವ ಉದಯ್ ಸಮಂತ್ ಅವರು ಯುಜಿಸಿ ಗೆ ಬರೆದ ಪತ್ರಕ್ಕೆ ಇತ್ತೀಚೆಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, “ವಿಶ್ವವಿದ್ಯಾನಿಲಯಗಳು ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದಿರುವುದು ಯುಜಿಸಿ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ” ಎಂದು ಕೊಶಾರಿ ಹೇಳಿದ್ದರು. ಸಮಂತ್ ಅವರ “ಅನಗತ್ಯ ಹಸ್ತಕ್ಷೇಪ”ಕ್ಕಾಗಿ ಸೂಕ್ತ ಸೂಚನೆಗಳನ್ನು ನೀಡುವಂತೆ ಅವರು ಠಾಕ್ರೆ ಅವರನ್ನು ಕೋರಿದ್ದರು.

ಈ ಪ್ರಕ್ಷುಬ್ಧತೆಯ ಮಧ್ಯದಲ್ಲಿ, ಬಿಜೆಪಿ ನಾಯಕ ನಾರಾಯಣ್ ರಾಣೆ ಅವರು ರಾಜ್ಯಪಾಲರನ್ನು ಭೇಟಿಯಾಗಿ, ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಕೋರಿ, ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದರು.


ಓದಿ:  ಬಡವರಿಗೆ ಸೇರಬೇಕಿದ್ದ ಆಹಾರ ಕಿಟ್‌ಗಳು ಬಿಜೆಪಿ ಮುಖಂಡರ ಪಾಲು: ರೊಚ್ಚಿಗೆದ್ದು ದೋಚಿದ ಜನತೆ!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...