Homeಆರೋಗ್ಯವಿಡಿಯೋ| ಸೂರ್ಯಸ್ನಾನದಿಂದ ಕೊರೊನ ಬರೋಲ್ಲ : ಕೇಂದ್ರ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ

ವಿಡಿಯೋ| ಸೂರ್ಯಸ್ನಾನದಿಂದ ಕೊರೊನ ಬರೋಲ್ಲ : ಕೇಂದ್ರ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ

- Advertisement -
- Advertisement -

ಸೂರ್ಯಸ್ನಾನದಿಂದ ಕೊರೊನ ಬರೋಲ್ಲ ಎಂದು ಹೇಳಿಕೆ ನೀಡಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಕೊರೊನಾ ಕುರಿತು ಹೊಸ ವಿವಾದದಲ್ಲಿ ಸಿಲುಕಿದ್ದಾರೆ.

ಜನರು ಕನಿಷ್ಠ 15 ನಿಮಿಷ ಬಿಸಿಲಿನಲ್ಲಿ ಕಳೆಯಬೇಕು. ಸೂರ್ಯನ ಬೆಳಕು ವಿಟಮಿನ್ ಡಿ ಅನ್ನು ಒದಗಿಸುತ್ತದೆ, ಅದರಿಂದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಕೊರೊನ ವೈರಸ್‌ಗಳನ್ನು ಸಹ ಕೊಲ್ಲುತ್ತದೆ ಎಂದು ಸಚಿವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.

ಈ ಮೂಢನಿಗೆ ವಿಜ್ಞಾನ ಮತ್ತು ಆರೋಗ್ಯದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲದಿದ್ದರೂ ಸಹ ಆರೋಗ್ಯ ಸಚಿವನಾಗಿದ್ದಾನೆ ಎಂದು ರವಿರಂಜನ್‌ ಎಂಬುವವರು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.

ಭಾರತ ಸರ್ಕಾರ ಕೂಡಲೇ ಈತನ ಮೇಲೆ ಕ್ರಮ ಕೈಗೊಳ್ಳಬೇಕು. ಕೊರೊನ ಸಂಕಷ್ಟದ ಕಾಲದಲ್ಲಿ ಆರೋಗ್ಯ ಮಂತ್ರಿಯೇ ಅವಿವೇಕಿಯ ಥರ ಮಾತನಾಡಿದರೆ ಉಳಿದವರ ಬಗ್ಗೆ ಏನು ಹೇಳುವುದು ಎಂದು ರವೀಂದ್ರ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡವೆ ಕೊರೊನಾ ವಿರುದ್ಧ ಹೋರಾಡಲು ಗೋಮೂತ್ರ ಪಾರ್ಟಿ ಆಯೋಜಿಸಿದ್ದ ಕಾರ್ಯಕರ್ತನೊಬ್ಬನ್ನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಅಲ್ಲಿ ಗೋಮೂತ್ರ ಕುಡಿದಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ವರದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...