Homeಮುಖಪುಟಭಾರತಕ್ಕೆ ಚಹಾ ಬಂದಿದ್ದು... : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಭಾರತಕ್ಕೆ ಚಹಾ ಬಂದಿದ್ದು… : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಇವತ್ತು ಅಂತರಾಷ್ಟ್ರೀಯ ಚಹಾ ದಿನ. ಲೇಖಕ "ಎಸ್. ಕುಮಾರ್" ಬರೆದಿರುವ "ಬುಕ್ ಆಫ್ ಟೀ" ಪುಸ್ತಕದಿಂದ ಆಯ್ದ ಬರಹ. ಅಂತರಾಷ್ಟ್ರೀಯ ಚಹಾ ದಿನಕ್ಕಾಗಿ, ಚಹಾ ಹೀರುತ್ತಾ ಓದಿ..

- Advertisement -
- Advertisement -

ಭಾರತ ಚಹಾ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾದ ಕೀನ್ಯಾ, ಶ್ರೀಲಂಕಾ ನಂತರದ ಸ್ಥಾನದಲ್ಲಿವೆ. ಈ ದೇಶಗಳ ಚಹಾ ಅಲ್ಲಿನ ಭೌಗೋಳಿಕ ಕಾರಣಗಳಿಂದಾಗಿಯೇ ವೈವಿಧ್ಯಮಯವಾಗಿವೆ.

ಭಾರತದಲ್ಲಿ ಚಹಾ ಮೊದಲು ಬೆಳೆದಿದ್ದು ಆಸ್ಸಾಮಿನ ಸದಿಯಾ ಕಣಿವೆಯಲ್ಲಿ. ಆದರೆ ಈ ಕಣಿವೆ ಬ್ರಹ್ಮಪುತ್ರ ನದಿಯ ಹರಿವಿನಲ್ಲಿ ಕಣ್ಮರೆಯಾಗಿ ಹೋಯಿತು.

ಇಲ್ಲಿಗೆ ಚಹಾ ಸಸಿಗಳನ್ನು ತಂದಿದ್ದು ಚಾಲ್ರ್ಸ್ ಬ್ರೂಸ್. ಸಿಂಗ್‍ಪೊ ಅನ್ನೋ ಬುಡಕಟ್ಟಿನವರಿಂದ ಟೀ ಗಿಡದ ಬೀಜಗಳನ್ನು ಸಂಗ್ರಹಿಸಿದ ಈತ ಕೋಲ್ಕತಾದಲ್ಲಿದ್ದ ಸಸ್ಯ ಉದ್ಯಾನಕ್ಕೆ ಪರೀಕ್ಷೆಗೆಂದು ಕಳಿಸಿದ. ಹೀಗೆ ಪರೀಕ್ಷೆಗೆ ಕಳಿಸುವ ಮುನ್ನವೇ ಚಾಲ್ರ್ಸ್‍ಗೆ ಇದು ಚೀನಾದಲ್ಲಿ ಬೆಳೆವ ಟೀ ಸಸ್ಯದ ಕುಟುಂಬಕ್ಕೆ ಸೇರಿದ್ದೇ ಇರಬೇಕೆಂಬ ಗುಮಾನಿ ಇತ್ತು.

ಕೊಲ್ಕತಾದ ಸಸ್ಯಶಾಸ್ತ್ರಜ್ಞರು ಆತನ ಗುಮಾನಿ ನಿಜವೆಂದು ಹೇಳಿದರು. ಆದರೆ ಕೆಲವು ಪ್ರಯೋಗಗಳ ನಂತರ ಈ ಬೀಜಗಳನ್ನು ಅಸ್ಸಾಮ್ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಿತ್ತಲಾಯಿತು. ಆದರೆ ಯಶ ಸಿಗಲಿಲ್ಲ. ಆದರೆ ದಾರ್ಜಿಲಿಂಗ್‍ನಲ್ಲಿ ಟೀ ಸಸಿಗಳು ಚಿಗುರಿದವು.

ಡಾರ್ಜಲಿಂಗ್ ನ ಚಹಾ ಎಸ್ಟೇಟ್ ಒಂದರ ವಿಹಂಗಮ ನೋಟ

1834ರಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ (ಭಾರತದ ಗವರ್ನರ್ ಜನರಲ್ ಆಗಿದ್ದ ಈತ ಸತಿ ಪದ್ಧತಿಯನ್ನು ವಿರೋಧಿಸಿದ್ದ) ಭಾರತದಲ್ಲಿ ಟೀ ಬೆಳೆಯನ್ನು ಹೆಚ್ಚಿಸುವುದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿದ. ಬ್ರಿಟಿಷ್ ಸರ್ಕಾರ ಕೂಡ ವಿಜ್ಞಾನಿಗಳ ತಂಡವೊಂದನ್ನು ಅಸ್ಸಾಮಿಗೆ ಅಧ್ಯಯನಕ್ಕೆಂದು ಕಳಿಸಿತು.

1837ರ ಹೊತ್ತಿಗೆ ಮೊದಲ ಟೀ ಫಸಲು ಕೈಗೆ ಸಿಕ್ಕಿತು. 8 ದೊಡ್ಡ ಚಹಾ ಎಲೆಗಳು ತುಂಬಿದ ಪೆಟ್ಟಿಗೆಗಳು ಇಂಗ್ಲೆಂಡಿಗೆ ರವಾನೆಯಾದವು. ಇದೇ ವೇಳೆ ಅಂದ್ರೆ 1839ರಲ್ಲಿ ಅಸ್ಸಾಮಿನ ಸಿಬ್‍ಸಾಗರ್ ಮತ್ತು ಲಾಖಿಮ್‍ಪುರದಲ್ಲಿ ಬ್ರಿಟಿಷ್ ಸರ್ಕಾರ ಟೀಯನ್ನು ಉದ್ಯಮವನ್ನಾಗಿ ರೂಪಿಸುವ ಕೆಲವು ಹೆಜ್ಜೆಗಳನ್ನಿರಿಸಿತು.

ಈ ಬಗ್ಗೆ ಕೇಳಿ ತಿಳಿದ ಲಂಡನ್ ಮತ್ತು ಕೋಲ್ಕತಾ ವ್ಯಾಪಾರಿಗಳೂ ಮುಂದೆ ಬಂದರು. ಬ್ರಿಟಿಷರೊಂದಿಗೆ ಸ್ಪರ್ಧೆಗಿಳಿದು ಒಂದು ಕಂಪನಿ ಹುಟ್ಟುಹಾಕುವಲ್ಲಿ ಭಾರತೀಯರೂ ಯಶ ಕಂಡರು. ಮಣಿರಾಮ್ ದೀವಾನ್ ಎಂಬುವರು ಭಾರತದಲ್ಲಿ ಮೊದಲ ಟೀ ಕಂಪನಿ ಆರಂಭಿಸುವಲ್ಲಿ ಯಶಸ್ವಿಯಾದರು. ಇದು ಜಗತ್ತಿನ ಮೊದಲ ಟೀ ಕಂಪನಿ ಎಂದೂ ಹೇಳಲಾಗುತ್ತದೆ. ಇದರಲ್ಲಿ ರವೀಂದ್ರನಾಥ ಠಾಗೂರ ಅಜ್ಜ ದ್ವಾರಕನಾಥ ಠಾಗೂರ ನಿರ್ದೇಶಕರಾಗಿದ್ದರು.

ಅದೇ ವರ್ಷ ಹಲವು ಕಂಪನಿಗಳು ಹುಟ್ಟಿಕೊಂಡವು. ನಂತರದ ದಿನಗಳಲ್ಲಿ ಅವೆಲ್ಲ ಕಂಪನಿಗಳನ್ನು ಅಸ್ಸಾಮ್ ಕಂಪನಿ ಹೆಸರಿನಲ್ಲಿ ಒಂದೇ ಸೂರಿನಡಿ ತರಲಾಯಿತು. 1856ರ ಹೊತ್ತಿಗೆ ದಾರ್ಜಿಲಿಂಗ್‍ನಲ್ಲಿ ಟೀ ತೋಟಗಳು ಹೆಚ್ಚಿದವು. ದಾರ್ಜಿಲಿಂಗ್ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಕಚಾರ್, ದುವಾರ್ಸ್, ತೆರಾಯ್‍ಗಳಲ್ಲಿ ಟೀ ಉತ್ಪಾದನೆ ಶುರುವಾಯಿತು. ನಿಧಾನವಾಗಿ ದೆಹ್ರಾದೂನ್, ಕಾಂಗ್ರ, ಪಶ್ಚಿಮ ಹಿಮಾಲಯ ಪ್ರದೇಶಗಳ ಮೂಲಕ ದಕ್ಷಿಣಕ್ಕೂ ವ್ಯಾಪಿಸಿತು.

ನೀಲಗಿರಿ ಬೆಟ್ಟದಲ್ಲಿರುವ ಟೀ ಎಸ್ಟೇಟ್

ದಕ್ಷಿಣ ಭಾರತದಲ್ಲಿ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಟೀ ಸಮೃದ್ಧವಾಗಿ ಬೆಳೆಯಿತು. ವೈನಾಡ್, ತಿರುವಾಂಕೂರುಗಳಲ್ಲಿ ಟೀ ತೋಟಗಳ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದವು. ಅಸ್ಸಾಮಿನ ಆ ಸಿಂಗ್‍ಪೊ ಬುಡಕಟ್ಟಿನವರಿಗೆ ಟೀ ಗಿಡ ಸಿಕ್ಕಾಗ ಬಹುಶಃ ಇದೊಂದು ಜಗತ್ತಿನ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳಬಹುದು, ಮನೆ ಮನೆಯಲ್ಲೂ ಸ್ಥಾನ ಪಡೆದುಕೊಳ್ಳಬಹುದು ಊಹೆ ಬಂದಿರಲಿಕ್ಕಿಲ್ಲ ಅನ್ನಿಸುತ್ತೆ.

ಪ್ರಸ್ತುತ ಭಾರತದಲ್ಲೇ 39 ಸಾವಿರಕ್ಕೂ ಹೆಚ್ಚು ಟೀ ಎಸ್ಟೇಟ್‍ಗಳಿವೆ. ಈ ಪೈಕಿ 30 ಸಾವಿರ ತೋಟಗಳು ದಕ್ಷಿಣ ಭಾರತದಲ್ಲೇ ಇವೆ.


ಓದಿ:  60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...